251 ರು. ಮೊಬೈಲ್‌ ಕಂಪನಿ ಮಾಲೀಕ ಗೋಯೆಲ್‌ ಬಂಧನ

Founder of Freedom 251 Phone Arrested
Highlights

ಬರೀ 251 ರುಪಾಯಿ ದರದಲ್ಲಿ ವಿಶ್ವದ ಅತಿ ಸೋವಿ ಮೊಬೈಲ್‌ ನೀಡುವುದಾಗಿ ಹೇಳಿಕೊಂಡಿದ್ದ ರಿಂಗಿಂಗ್‌ ಬೆಲ್ಸ್‌ ಮೊಬೈಲ್‌ ಕಂಪನಿ ಸಂಸ್ಥಾಪಕ ಮೋಹಿತ್‌ ಗೋಯೆಲ್‌ನನ್ನು ಭಾನುವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
 

ನವದೆಹಲಿ: ಬರೀ 251 ರುಪಾಯಿ ದರದಲ್ಲಿ ವಿಶ್ವದ ಅತಿ ಸೋವಿ ಮೊಬೈಲ್‌ ನೀಡುವುದಾಗಿ ಹೇಳಿಕೊಂಡಿದ್ದ ರಿಂಗಿಂಗ್‌ ಬೆಲ್ಸ್‌ ಮೊಬೈಲ್‌ ಕಂಪನಿ ಸಂಸ್ಥಾಪಕ ಮೋಹಿತ್‌ ಗೋಯೆಲ್‌ನನ್ನು ಭಾನುವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

251 ರು. ದರದಲ್ಲಿ ಮೊಬೈಲ್‌ ನೀಡುವುದಾಗಿ ಹೇಳಿ ಹಣ ಸಂಗ್ರಹಿಸಿ ವಂಚಿಸಿದ ಆರೋಪ ಈತನ ಮೇಲಿದೆ. ಈ ಹಿಂದೆ ಕೂಡ ಈತ 3 ತಿಂಗಳು ಜೈಲು ವಾಸ ಅನುಭವಿಸಿ ಮಾಚ್‌ರ್‍ 31ಕ್ಕೆ ಅಹಲಾಬಾದ್‌ ಹೈಕೋರ್ಟ್‌ ನೀಡಿದ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ. ಈಗ ಮತ್ತೆ ಬಂಧನವಾಗಿದೆ. ಗಾಜಿಯಾಬಾದ್‌ನ ಆಯಾಮ್‌ ಎಂಟರ್‌ಪ್ರೈಸಸ್‌ ಎಂಬ ಕಂಪನಿಯ 16 ಲಕ್ಷ ರು. ಹಣ ಮರುಪಾವತಿಸದ ಆರೋಪ ಈತನ ಮೇಲಿದೆ.

ಒಟ್ಟು 7.5 ಕೋಟಿ ಮೊಬೈಲ್‌ ಒದಗಿಸಲು ಆರ್ಡರ್‌ ಬಂದರೂ ಕೇವಲ 70 ಸಾವಿರ ಮೊಬೈಲ್‌ ವಿತರಿಸಿದ್ದಾಗಿ ಈತ ಹೇಳಿಕೊಂಡಿದ್ದ. ತನಗೆ ಹಣ ಸಾಕಾಗದ ಕಾರಣ ಮೋದಿ ಸರ್ಕಾರ ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಡಿ 50 ಸಾವಿರ ಕೋಟಿ ರು. ನೆರವು ಯಾಚಿಸಿದ್ದ.

loader