*  ಇನ್ನೂ 6 ತಿಂಗಳು ಬಡವರಿಗೆ ಉಚಿತ ಪಡಿತರ*  ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಅಡಿ 5 ಕೆ.ಜಿ. ಆಹಾರಧಾನ್ಯ*  2020ರ ಮಾರ್ಚಲ್ಲಿ ಆರಂಭಿಸಲಾಗಿದ್ದ ಯೋಜನೆ 

ನವದೆಹಲಿ(ಮಾ.27): ದೇಶದಲ್ಲಿ(India) ಕೋವಿಡ್‌ ಅಬ್ಬರ ಬಹುತೇಕ ಕಡಿಮೆಯಾಗಿದ್ದರೂ, ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ (PM Garib Kalyan Anna Yojana)’ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ ವರ್ಗ(BPL)ದ ದೇಶದ 80 ಕೋಟಿ ಜನರಿಗೆ ಇನ್ನೂ 6 ತಿಂಗಳ ಕಾಲ ಉಚಿತ ಆಹಾರ ಧಾನ್ಯ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಂಪುಟ ಸಭೆ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಉಚಿತ ಪಡಿತರ ಯೋಜನೆಯನ್ನು(Free Ration Plan) ಇನ್ನೂ 6 ತಿಂಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ. ಯೋಜನೆ ವಿಸ್ತರಣೆಯು, ಕೋವಿ(Covid-19) ಸಾಂಕ್ರಾಮಿಕ ಮುಗಿದರೂ ಬಡವರ ಬಗ್ಗೆ ಮೋದಿ ಸರ್ಕಾರ ಹೊಂದಿರುವ ಸಂವೇದನೆಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ಬಿಪಿಎಲ್‌ ಕಾರ್ಡ್‌ದಾರರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ..!

ಕೋವಿಡ್‌ ನೆರವು:

ಕೇಂದ್ರ ಸರ್ಕಾರ(Central Government) ಶನಿವಾರ ಕೈಗೊಂಡ ನಿರ್ಧಾರದಿಂದಾಗಿ, ಕೋವಿಡ್‌ ಲಾಕ್ಡೌನ್‌(Lockdown) ವೇಳೆ ಜನರ ಆಹಾರ ಸಮಸ್ಯೆ ನೀಗಲೆಂದು 2020ರ ಮಾಚ್‌ರ್‍ನಲ್ಲಿ ಆರಂಭಿಸಿದ್ದ ಯೋಜನೆ ಇದೀಗ 2022ರ ಮಾರಚ್‌ಗೆ ಕೊನೆಗೊಳ್ಳುವ ಬದಲು 2022ರ ಸೆಪ್ಟೆಂಬರ್‌ವರೆಗೂ ವಿಸ್ತರಣೆಯಾಗಲಿದೆ. ಈ ಯೋಜನೆಯಡಿ, ರಾಜ್ಯ ಸರ್ಕಾರ ವಿತರಿಸುವ ಆಹಾರ ಧಾನ್ಯಗಳ ಜೊತೆಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ, ಪ್ರತಿ ವ್ಯಕ್ತಿಗೆ ಮಾಸಿಕ 5 ಕೆಜಿಯಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯ ಲಾಭ ದೇಶದ 80 ಕೋಟಿ ಜನರಿಗೆ ತಲುಪುತ್ತದೆ. 2020ರಲ್ಲಿ ಆರಂಭವಾಗಿ 2022ರ ಸೆಪ್ಟೆಂಬರ್‌ವರೆಗೆ ವಿಸ್ತರಣೆಗೊಂಡಿರುವ ಯೋಜನೆ ಮೂಲಕ ಕೇಂದ್ರ ಸರ್ಕಾರ 1003 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ವಿತರಿಸಲಿದ್ದು, ಇದಕ್ಕಾಗಿ 3.4 ಲಕ್ಷ ಕೋಟಿ ರು. ವೆಚ್ಚ ಮಾಡಲಿದೆ.

6ನೇ ಹಂತದ ವಿಸ್ತರಣೆ:

2020ರ ಮಾರ್ಚ್‌ನಲ್ಲಿ ಈ ಯೋಜನೆಯನ್ನು 3 ತಿಂಗಳಿಗೆಂದು ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ 2020ರ ಜುಲೈ-ನವೆಂಬರ್‌ಗೆ, 3ನೇ ಹಂತದಲ್ಲಿ 2021-ರ ಮೇ- ಜೂನ್‌ಗೆ, 4ನೇ ಹಂತದಲ್ಲಿ 2021ರ ಜುಲೈ-ನವೆಂಬರ್‌, 5ನೇ ಹಂತದಲ್ಲಿ 2021ರ ಡಿಸೆಂಬರ್‌ನಿಂದ 2022ರ ಮಾರ್ಚ್‌ಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ 6ನೇ ಹಂತದಲ್ಲಿ 2022ರ ಮಾಚ್‌ರ್‍ನಿಂದ -ಸೆಪ್ಟೆಂಬರ್‌ಗೆ ಯೋಜನೆ ವಿಸ್ತರಣೆ ಮಾಡಲಾಗಿದೆ.

ಸೆಪ್ಟೆಂಬರ್‌ವರೆಗೂ ಲಭ್ಯ

ಭಾರತದ ಶಕ್ತಿ ಅದರ ಪ್ರತಿಯೊಬ್ಬ ನಾಗರಿಕನ ಶಕ್ತಿಯಲ್ಲಿ ಅಡಗಿದೆ. ಹಾಗಾಗಿ ಸರ್ಕಾರ ಉಚಿತವಾಗಿ ಆಹಾರ ಧಾನ್ಯ ವಿತರಿಸುತ್ತಿರುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಕಾರ್ಯಕ್ರಮವನ್ನು ಮುಂದಿನ 6 ತಿಂಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಈ ಯೋಜನೆ ಮುಂದಿನ ಸೆಪ್ಟೆಂಬರ್‌ವರೆಗೂ ಜಾರಿಯಲ್ಲಿರುತ್ತದೆ. 80 ಕೋಟಿಗೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಅಂತ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಬಡವರ ಬಿಪಿಎಲ್‌ ಕಾರ್ಡ್‌ ಕಿತ್ತುಕೊಂಡ ಸರ್ಕಾರ..! 

ಉಚಿತ ಪಡಿತರ ಇನ್ನೂ 3 ತಿಂಗಳು ವಿಸ್ತರಣೆ

ಲಖನೌ: ಉತ್ತರ ಪ್ರದೇಶದಲ್ಲಿ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಯೋಗಿ ಆದಿತ್ಯನಾಥ್‌ ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನೀಡಲಾಗುತ್ತಿರುವ ಉಚಿತ ಪಡಿತರ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸುವುದಾಗಿ ಘೋಷಿಸಿದ್ದಾರೆ.

ಸಂಪುಟ ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್‌, ‘ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನೀಡಲಾಗುತ್ತಿರುವ ಉಚಿತ ಪಡಿತರವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಶನಿವಾರ ನೂತನ ಸಚಿವ ಸಂಪುಟ ನಿರ್ಧರಿಸಿದೆ. ಉಚಿತ ಪಡಿತರ ಯೋಜನೆ ಇದೇ ಮಾಚ್‌ರ್‍ ತಿಂಗಳಲ್ಲಿ ಅಂತ್ಯವಾಗುತ್ತಿತ್ತು. ಒಟ್ಟು 15 ಕೋಟಿ ಜನರು ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಪಡಿತರದೊಂದಿಗೆ ಮುಂದಿನ ಮೂರು ತಿಂಗಳು ಬೇಳೆಕಾಳು, ಉಪ್ಪು, ಸಕ್ಕರೆ ಮತ್ತಿತರ ವಸ್ತುಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.