ನವದೆಹಲಿ(ಡಿ.08): ಭಯೋತ್ಪಾದನೆ, ಉಗ್ರವಾದ ಹಾಗೂ ತೀವ್ರವಾದದ ವಿರುದ್ಧದ ನಿಮ್ಮ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರನ್‌ಗೆ ಭರವಸೆ ನೀಡಿದ್ದಾರೆ.

ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ದೂರವಾಣಿ ಮೂಲಕ ಸೋಮವಾರ ಮಾತುಕತೆ ನಡೆಸಿದ ಪಿಎಂ ಮೋದಿ ಈ ಕುರಿತು ಟ್ವಿಟ್ ಮಾಡುತ್ತಾ, ಕೊರೋನಾದಿಂದಾಗಿ ಎದುರಾದ ಸಮಸ್ಯೆ ಹಾಗೂ ಅವುಗಖನ್ನು ಎದುರಿಸಿದ ಕುರಿತಾಗಿ ಚರ್ಚೆ ನಡೆಸಿದೆವು.  ಭಯೋತ್ಪಾದನೆ, ಉಗ್ರವಾದ ಹಾಗೂ ತೀವ್ರವಾದದ ವಿರುದ್ಧದ ನಿಮ್ಮ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದಿದ್ದಾರೆ. 

ಮಲ್ಯಗೆ ಇಡಿ ಶಾಕ್, ಫ್ರಾನ್ಸ್‌ನಲ್ಲಿ ಬಚ್ಚಿಟ್ಟಿದ್ದ ದೊಡ್ಡ ಮೊತ್ತದ ಆಸ್ತಿಯೂ ಜಪ್ತಿ

ಇದೇ ವೇಳೆ ಭಾರತ ಹಾಗೂ ಫ್ರಾನ್ಸ್ ಉಭಯ ರಾಷ್ಟ್ರಗಳ ನಡುವಿನ ಸಂಭದದ ಕುರಿತಾಗಿಯೂ ಉಲ್ಲೇಖಿಸಿದ್ದಾರೆ.