Asianet Suvarna News Asianet Suvarna News

Coronavirus: ಆಸ್ಪತ್ರೆಯಿಂದ ದೇವೇಗೌಡ ಡಿಸ್ಚಾರ್ಜ್, ವೈದ್ಯರಿಗೆ  ಗೌಡರು ಕೊಟ್ಟ ಪುಸ್ತಕ ಯಾವುದು?

* ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಾಜಿ ಪ್ರಧಾನಿ
* ಕೊರೋನಾ ಸೋಂಕಿನ ಕಾರಣ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು
*  ಸೋಂಕಿನ ಲಕ್ಷಣಗಳು ಗೌಡರಿಗೆ ಕಂಡುಬಂದಿರಲಿಲ್ಲ

Former PM HD Deve Gowda clinically stable, discharged from hospital Bengaluru mah
Author
Bengaluru, First Published Jan 26, 2022, 6:38 PM IST

ಬೆಂಗಳೂರು(ಜ.26): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ​ಡಿ ದೇವೇಗೌಡ (HD Devegowda) ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ (Coroanavirus) ಸೋಂಕು ತಗುಲಿದ ಪರಿಣಾಮ ಬೆಂಗಳೂರಿನ ಮಣಿಪಾಲ(Manipal Hospital) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ವೈದ್ಯೋ ನಾರಾಯಣೋ ಹರಿಃ , ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನನಗೆ ಡಾ. ಸತ್ಯನಾರಾಯಣ ಮೈಸೂರು  ಅವರು ಚಿಕಿತ್ಸೆ ನೀಡಿ ಆರೈಕೆ ಮಾಡಿದರು. ಈ ಹಿನ್ನಲೆಯಲ್ಲಿ ನನ್ ಜೀವನಚರಿತ್ರೆ Furrows In Field ಪುಸ್ತಕವನ್ನು ಅವರಿಗೆ ಕೃತಜ್ಞತಾ ಸಂಕೇತವಾಗಿ ನೀಡಿ ಅಭಿನಂದಿಸಿದೆ  ಎಂದು ದೇವೇಗೌಡರು ತಿಳಿಸಿದ್ದಾರೆ. 

ದೇವೇಗೌಡರಿಗೆ ಸೋಂಕಿನ ಲಕ್ಷಣಗಳು ಕಾಣಿಸಿರಲಿಲ್ಲ.  ಅವರ ಆರೋಗ್ಯ ಸ್ಥಿರವಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಹಿಂದೆಯೂ ಅಂದರೆ ಕೊರೋನಾ ಎರಡನೇ ಅಲೆಯಲ್ಲೂ ದೇವೇಗೌಡ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೂರವಾಣಿ ಕರೆ ಮಾಡಿ ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.  ‘ಮಾಜಿ ಪ್ರಧಾನಮಂತ್ರಿಗಳು, ಹಿರಿಯರಾದ ಎಚ್.ಡಿ.ದೇವೇಗೌಡ ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್  ಮಾಡಿದ್ದರು.

Corona 3rd Wave: ಖಾಲಿಯಿರುವ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಬೀಗ?

ದೇಶದಲ್ಲಿ ಸೋಂಕು ಇಳಿಕೆ:   ಸತತ 5 ದಿನ ಕಾಲ 3 ಲಕ್ಷದ ಮೇಲಿದ್ದ ಕೋವಿಡ್‌(Covid-19) ಪ್ರಕರಣ ಸಂಖ್ಯೆ ಮಂಗಳವಾರ 2.55 ಲಕ್ಷಕ್ಕೆ ಇಳಿದಿದೆ. ಇದು ಕೊರೋನಾದ 3ನೇ ಅಲೆ(Corona 3rd Wave) ಇಳಿಕೆಯ ಸೂಚಕ ಎಂದು ಭಾವಿಸಲಾಗುತ್ತಿದೆ. ಸೋಮವಾರಕ್ಕೆ ಹೋಲಿಸಿದೆ ಮಂಗಳವಾರ ಒಂದೇ ದಿನದಲ್ಲಿ ಹೊಸ ಪ್ರಕರಣ ಐವತ್ತು ಸಾವಿರ ಕಡಿಮೆ ಆಗಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಗಿದ 24 ತಾಸು ಅವಧಿಯಲ್ಲಿ 2,55,874 ಪ್ರಕರಣಗಳು ದೃಢಪಟ್ಟಿವೆ. ಆದರೆ ಸಾವಿನ ಸಂಖ್ಯೆ 600ರ ಗಡಿ ದಾಟಿದ್ದು, 614ಕ್ಕೇರಿದೆ.  2.67 ಲಕ್ಷ ಜನ ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,36,842ಕ್ಕೆ ಇಳಿದಿದೆ. ಶೇ.20ಕ್ಕೇರಿದ್ದ ಪಾಸಿಟಿವಿಟಿ ದರ ಕೂಡ ಶೇ.15.52ಕ್ಕೆ ಇಳಿದಿದೆ. ಸಾವಿನ ಸಂಖ್ಯೆ ಗಮನಿಸಿದಾಗ 614 ಸಾವುಗಳ ಪೈಕಿ ಕೇರಳದಲ್ಲಿ 171,ತಮಿಳುನಾಡಿನಲ್ಲಿ(Tamil Nadu) 46 ಹಾಗೂ ಪಂಜಾಬ್‌ನಲ್ಲಿ(Punjab) 45 ಜನರು ಸೋಂಕಿಗೆ ಬಲಿಯಾಗಿದ್ದಾರೆ. 

ಲಸಿಕೆ ನೀಡಿಕೆಯಲ್ಲಿಯೂ ಸಾಧನೆ  ಮುಂದುವರಿದಿದ್ದು ಇಲ್ಲಿವರೆಗೆ 162 ಕೋಟಿ ಡೋಸ್‌ ಲಸಿಕೆ(Vaccine) ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  ಕೇರಳದಲ್ಲಿ(Kerala) ಮಂಗಳವಾರ ಒಂದೇ ದಿನ 55,475 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಈವರೆಗಿನ ಸಾರ್ವಕಾಲಿಕ ಗರಿಷ್ಠವಾಗಿದೆ. ಜ.20ರಂದು 46387 ಕೇಸು ದಾಖಲಾಗಿದ್ದೇ ಇದುವರೆಗಿನ ಗರಿಷ್ಠವಾಗಿತ್ತು.

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವೂ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ವೀಕೆಂಡ್ ಕರ್ಫ್ಯೂವನ್ನು ಜಾರಿ ಮಾಡಲಾಗಿತ್ತು.  ಮೂರನೇ ಅಲೆ ಹರಡುವ ವೇಗ ಜಾಸ್ತಿಯಿದ್ದರೂ ತೀವ್ರತೆ ಕಡಿಮೆ ಇರುವುದು ನಿಟ್ಟುಸಿರು ಬಿಡುವ ಸಂಗತಿ. ಕೊರೋನಾ ನಿಯಮಗಳನ್ನು ಪಾಲನೆ ಮಾಡುವುದು  ಇಂದಿನ ಅಗತ್ಯ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕಿದೆ.  ಕರ್ನಾಟಕದಲ್ಲಿಯೂ ಪ್ರತಿ ದಿನ ನಲವತ್ತು ಸಾವಿರಕ್ಕೂ ಅಧಿಕ ಕೊರೋನಾ ಕೇಸ್ ಗಳು ದಾಖಲಾಗುತ್ತಿವೆ. ಬೆಂಗಳೂರು ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. 

 

Follow Us:
Download App:
  • android
  • ios