Asianet Suvarna News Asianet Suvarna News

370ನೇ ವಿಧಿ ಮತ್ತೆ ಚಾಲ್ತಿಗೆ ಬರಲಿದೆ ಎಂದು ಹೃದಯ ಹೇಳುತ್ತಿದೆ: ಒಮರ್‌ ಅಬ್ದುಲ್ಲಾ!

ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ 2019ರ ಆಗಸ್ಟ್ 5 ರ ಕೇಂದ್ರದ ನಿರ್ಧಾರಕ್ಕೆ ನ್ಯಾಷನಲ್‌ ಕಾನ್ಫರೆನ್ಸ್‌,  ಕಾನೂನು ಸವಾಲನ್ನು ಒಡ್ಡಿದೆ ಎಂದು ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.
 

Former Jammu And Kashmir CM Omar Abdullah says My heart says Article 370 will be restored san
Author
First Published Dec 7, 2022, 4:50 PM IST

ಶ್ರೀನಗರ (ಡಿ.7): ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ವಿಧಿ ಮತ್ತೆ ವಾಪಾಸಾಗುತ್ತದೆ ಎಂದು ನನ್ನ ಹೃದಯ ಹೇಳುತ್ತಿದೆ. 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಕಾನೂನು ಸವಾಲು ಒಟ್ಟಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ. ಕಾಶ್ಮೀರದ ಕಣಿವೆಯಲ್ಲಿ ರಾಜ್ಯ ಇತರ ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಟೀಕೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, , ಆರ್ಟಿಕಲ್ 370 ರ ವಿಷಯದ ಬಗ್ಗೆ ಎನ್‌ಸಿ ಜನರನ್ನು ಕತ್ತಲೆಯಲ್ಲಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. 'ನಾವೇಕೆ ಈ ವಿಚಾರವಾಗಿ ಜನರನ್ನು ಕತ್ತಲೆಯಲ್ಲಿ ಇಡಬೇಕು. 370ನೇ ವಿಧಿ ಮರುಸ್ಥಾಪನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ನಾವು ಶಾಂತವಾಗಿ ಹೋರಾಟ ಮಾಡಬೇಕು ಎಂದಷ್ಟೇ ಹೇಳುತ್ತಿದ್ದೇವೆ. ಸಂವಿಧಾನದ ಅಡಿಯಲ್ಲಿಯೇ ನಾವು ಇದರ ಬಗ್ಗೆ ಹೋರಾಟ ಮಾಡುತ್ತೇವೆ. ಅದರೊಂದಿಗೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಹೇಳಿದರು. ಈ ಮಾತನ್ನು ಹೇಳುವ ವ್ಯಕ್ತಿಗಳು ಪಕ್ಷದಲ್ಲಿ ವಾತಾವರಣವನ್ನು ಹಾಳು ಮಾಡಲು ಬಯಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ನೇರವಾಗಿ ಆರೋಪ ಮಾಡಿದ್ದಾರೆ.

2019ರ ಆಗಸ್ಟ್‌ 5 ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷಾಧಿಕಾರವರನ್ನು ರದ್ದು ಮಾಡಿತ್ತು. ಇದರಿಂದಾಗಿ ಇಲ್ಲಿವರೆಗೂ ಜಮ್ಮು ಮತ್ತು ಕಾಶ್ಮೀರ ಪಡೆದುಕೊಂಡು ವಿಶೇಷ ಪ್ರಾತಿನಿಧ್ಯ ಕೂಡ ರದ್ದುಗೊಂಡಿತ್ತು. ಈ ವಿಚಾರವಾಗಿ ನ್ಯಾಷನಲ್‌ ಕಾನ್ಫರೆನ್ಸ್‌ ಕಾನೂನು ಸವಾಲನ್ನು ಒಡ್ಡಲಿದೆ ಎಂದು ತಿಳಿಸಿದ್ದಾರೆ. ಹಾಗಂತ ನಾವು ಎಂದಿಗೂ ನಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಸರಿಯಾದ ಮಾರ್ಗದಲ್ಲಿ ದೇವರ ಇಷ್ಟದಂತೆ ಹೋರಾಟ ಮಾಡುತ್ತೇವೆ. ನನ್ನ ಹೃದಯ ಕೂಡ ಇದನ್ನೇ ಹೇಳುತ್ತಿದೆ. ಕಾಶ್ಮೀರದಲ್ಲಿ 370ನೇ ವಿಧಿ ಖಂಡಿತವಾಗಿ ಮರುಸ್ಥಾಪನೆಯಾಗಲಿದೆ ಎಂದಿದ್ದಾರೆ.

ಒಮರ್‌ ಅಬ್ದುಲ್ಲಾ ಈ ಮಾತನ್ನು ಹೇಳಿದ ಬಳಿಕ ಪಕ್ಷದ ನಾಯಕರಿಂದ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾದವು. ತಮ್ಮ ತಂದೆ ಫಾರೂಕ್ ಅಬ್ದುಲ್ಲಾ ಅವರು ಎನ್‌ಸಿ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾದ ಪಕ್ಷದ ಪ್ರತಿನಿಧಿ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆತಂಕಪಡುವ ಅಗತ್ಯವಿಲ್ಲ ಎಂದು ತಮ್ಮ ಪಕ್ಷದವರಿಗೆ ಹೇಳಿದ ಎನ್‌ಸಿ ಉಪಾಧ್ಯಕ್ಷರು, "ಜಮ್ಮು ಕಾಶ್ಮೀರದ ಜನರ ಹಕ್ಕುಗಳಿಗಾಗಿ ನಾವು ಮಂಡಿಯೂರಿ ಅಥವಾ ಭಿಕ್ಷೆ ಬೇಡುವುದಿಲ್ಲ' ಎಂದು ಹೇಳಿದರು.

“ನಾವು ಭದ್ರತೆ ಅಥವಾ ಬಂಗಲೆ, ಅಥವಾ ವಾಹನ ಅಥವಾ ಇನ್ನಾವುದಕ್ಕೂ ಅವರನ್ನು ಬೇಡಿಕೊಳ್ಳುವುದಿಲ್ಲ. ನಾವು ಜೆ-ಕೆಯ ಘನತೆ, ಅದರ ಸಮೃದ್ಧಿ ಮತ್ತು ಅದರ ಗುರುತನ್ನು ಮಾತ್ರ ಕೇಳುತ್ತಿದ್ದೇವೆ. ಅದನ್ನು ಪಡೆದೆ ಪಡೆಯುತ್ತೇವೆ' ಎಂದಿ ಹೇಳಿದ್ದಾರೆ. ದೇವರ ಇಚ್ಛೆ, ನಾವು ಈ ಹೋರಾಟದಲ್ಲಿಯೂ ಯಶಸ್ವಿಯಾಗುತ್ತೇವೆ ಮತ್ತು ನಂತರ ಜನರ ಮುಂದೆ ನಮ್ಮನ್ನು ಪ್ರಸ್ತುತಪಡಿಸುವ ದಿನ ದೂರವಿಲ್ಲ ಎಂದು ಅವರು ಹೇಳಿದರು. ರಾಜಕೀಯ ಪಕ್ಷವಾಗಿ ಎನ್‌ಸಿ ಹಲವು ರಾಜಕೀಯ ಹೋರಾಟಗಳನ್ನು ನಡೆಸಿದೆ ಆದರೆ "ನಾನು ಮೊದಲ ಬಾರಿಗೆ ಈ ರೀತಿಯ ಯುದ್ಧವನ್ನು ನೋಡುತ್ತಿದ್ದೇನೆ" ಎಂದು ಅಬ್ದುಲ್ಲಾ ಹೇಳಿದರು.

ಓಮರ್‌ ಅಬ್ದುಲ್ಲಾಗೆ 5 ತಾಸು ಇಡಿ ವಿಚಾರಣೆ ಬಿಸಿ!

ಬಿಜೆಪಿ ಹಾಗೂ ಅದರ ಬಿ ಮತ್ತು ಸಿಡಿ ಟೀಮ್‌ಗಳ ಮಾತ್ರವೇ ನಮ್ಮ ಹೋರಾಟವಲ್ಲ. ಇಲ್ಲಿ ಆಡಳಿತಾಧಿಕಾರಿಗಳೂ ಕೂಡ ನಮ್ಮ ವಿರುದ್ಧ ನಿಂತಿದ್ದಾರೆ. ಅವರ ವಿರುದ್ಧವೂ ನಾವು ಹೋರಾಡಬೇಕು ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಸ್ಥಳೀಯರಲ್ಲದವರಿಗೂ ಮತ ಹಕ್ಕು..! ಮುಫ್ತಿ ವಿರೋಧ

ಐಷಾರಾಮಿ ಹೋಟೆಲ್‌ನಲ್ಲಿ ಇಲಿಗಳ ವಿಡಿಯೋ ಹಂಚಿಕೊಂಡ ಒಮರ್‌ ಅಬ್ದುಲ್ಲಾ: ಒಮರ್‌ ಅಬ್ದುಲ್ಲಾ ತಮ್ಮ ಸೋಶಿಯಲ್‌ ಮೀಡಿಯಾ ಪುಟದಲ್ಲಿ  ಕಾಶ್ಮೀರದ ಹೋಟೆಲ್‌ವೊಂದರಲ್ಲಿ ನಡದ ಯಾವುದೋ ಸಭೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೈಜಿನ್‌ಗಾಗಿ ಸಾವಿರಾರು ರೂಪಾಯಿ ಕೊಟ್ಟು ಹೋಟೆಲ್‌ ಬುಕ್‌ ಮಾಡುತ್ಥಾರೆ. ಆದರೆ, ಅಂಥ ಹೋಟೆಲ್‌ಗಳ ಹೈಜಿನ್‌ ಹೇಗಿರುತ್ತದೆ ಎನ್ನುವ ವಿಡಿಯೋ ಅದಾಗಿದೆ. ಪ್ರಮುಖ ಸಭೆಯಲ್ಲಿ ವ್ಯಕ್ತಿಗಳು ಮಾತನಾಡುತ್ತಿರುವ ನಡುವೆಯೇ ಪುಟ್ಟ ಇಲಿಯೊಂದು ಅವರ ಮುಂದೆ ಇಟ್ಟಿದ್ದ ಕೇಕ್‌ ತುಂಡನ್ನು ತಿನ್ನುತ್ತಿರುವ ವಿಡಿಯೋ ಇದಾಗಿದೆ.

Follow Us:
Download App:
  • android
  • ios