ಬುಂಗಾ ಬುಂಗಾ ಪಾರ್ಟಿ ಕುಖ್ಯಾತಿಯ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ನಿಧನ

ಬುಂಗಾ ಬುಂಗಾ ಪಾರ್ಟಿ ಕುಖ್ಯಾತಿಯ ಇಟಲಿಯ ಮಾಜಿ ಪ್ರಧಾನಿ, ಸಿಲ್ವಿಯೋ ಬೆರ್ಲುಸ್ಕೋನಿ (86) ಸೋಮವಾರ ನಿಧನರಾದರು. ಬೆರ್ಲುಸ್ಕೋನಿ 1994-95, 2001- 2006 ಹಾಗೂ 2008- 2011ರವರೆಗೆ 3 ಬಾರಿ ಪ್ರಧಾನಿಯಾಗಿದ್ದರು.

Former Italian prime minister Silvio Berlusconi passes away aged 86 who was infamous for Bunga Bunga Party akb

ರೋಮ್‌: ಬುಂಗಾ ಬುಂಗಾ ಪಾರ್ಟಿ ಕುಖ್ಯಾತಿಯ ಇಟಲಿಯ ಮಾಜಿ ಪ್ರಧಾನಿ, ಸಿಲ್ವಿಯೋ ಬೆರ್ಲುಸ್ಕೋನಿ (86) ಸೋಮವಾರ ನಿಧನರಾದರು. ಬೆರ್ಲುಸ್ಕೋನಿ 1994-95, 2001- 2006 ಹಾಗೂ 2008- 2011ರವರೆಗೆ 3 ಬಾರಿ ಪ್ರಧಾನಿಯಾಗಿದ್ದರು. ದೀರ್ಘಾವಧಿ ರಕ್ತ ಕ್ಯಾನ್ಸರ್‌ನಿಂದ ಇಟಲಿ ಮಾಜಿ ಪ್ರಧಾನಿ, ಕೋವಿಡ್‌ ಸಮಯದಲ್ಲಿ ಆಸ್ಪತ್ರೆಗೆ ಸೇರಿ ಹೃದಯ ಸಂಬಂಧಿ ಕಾಯಿಲೆಗೂ ಚಿಕಿತ್ಸೆ ಪಡೆದಿದ್ದರು. ಆದರೆ ಇತ್ತೀಚೆಗೆ ಮತ್ತೆ ಸಮಸ್ಯೆ ಉಲ್ಬಣಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಧಿಕಾರದ ಅವಧಿಯಲ್ಲಿ ವೇಶ್ಯೆಯರ ಜೊತೆ ಬೆರ್ಲುಸ್ಕೋನಿ ನಡೆಸುತ್ತಿದ್ದ ಐಷಾರಾಮಿ ಪಾರ್ಟಿಗಳು ಬುಂಗ ಬುಂಗ ಪಾರ್ಟಿ ಎಂದೇ ಕುಖ್ಯಾತಿ ಪಡೆದಿದ್ದವು.

ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದ ಸಿಲ್ವಿಯೊ ಬೆರ್ಲುಸ್ಕೋನಿ, ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಪ್ರಾಬಲ್ಯ ಹೊಂದಿದ್ದರಲ್ಲದೇ ವಿವಾದಗಳಿಂದಲೇ ಕುಖ್ಯಾತಿ ಪಡೆದಿದ್ದರು. ಹಲವು ವರ್ಷಗಳಿಂದ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಇತ್ತೀಚೆಗೆ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಅವರು ಕಳೆದ ಶುಕ್ರವಾರ ಮಿಲನ್‌ನ ಸ್ಯಾನ್ ರಾಫೆಲ್ ಆಸ್ಪತ್ರೆಗೆ ತಪಾಸಣೆಗೆ ಹಾಜರಾಗಿದ್ದರು. ಇದಾಗಿ ಮೂರು ದಿನಗಳ ನಂತರ ಅವರು ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಹಿಂದೊಮ್ಮೆ ಇವರು ತನ್ನನ್ನು ತಾನೇ ರಾಜಕೀಯದ ಏಸುಕ್ರಿಸ್ತ ಎಂದು ಹೇಳಿಕೊಂಡಿದ್ದರು.

ಅಧಿಕೃತ ಸಂಭಾಷಣೆಯಲ್ಲಿ ಇಂಗ್ಲೀಷ್‌ ಬಳಸಿದ್ರೆ ಇಟಲಿಯಲ್ಲಿ 89 ಲಕ್ಷ ದಂಡ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದ್ದು, 'ಇಟಲಿಯ ಇತಿಹಾಸದಲ್ಲಿ ಅವರೊಬ್ಬ ಅತ್ಯಂತ ಪ್ರಭಾವಶಾಲಿ ವ್ಯಕ್ತಿ' ಎಂದು ಹೇಳಿದರು. ಮೂರು ಬಾರಿ ಪ್ರಧಾನಿಯಾಗಿ 9 ವರ್ಷ ಸೇವೆ ಸಲ್ಲಿಸಿದ್ದ ಅವರು ಇಟಲಿಯ ಸರ್ವಾಧಿಕಾರಿ ಮುಸಲೊನಿಗಿಂತ ಹೆಚ್ಚು ಕಾಲ ಇಟಲಿಯಲ್ಲಿ ಅಧಿಕಾರದಲ್ಲಿದ್ದರು. 

ಸಂಸತ್ತಲ್ಲಿ ಹಾಲುಣಿಸಿ ಇತಿಹಾಸ ಬರೆದ ಇಟಲಿ ಸಂಸದೆ: ವಿಡಿಯೋ ವೈರಲ್‌..

 

Latest Videos
Follow Us:
Download App:
  • android
  • ios