Asianet Suvarna News Asianet Suvarna News

28 ವರ್ಷದ ಹಿಂದಿನ ಡ್ರಗ್‌ ಕೇಸ್‌ನಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅಪರಾಧಿ

1996ರ ಮಾದಕ ದ್ರವ್ಯ ವಶಪಡಿಸಿಕೊಂಡ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
 

former IPS officer Sanjiv Bhatt convicted in 28 year old drug case san
Author
First Published Mar 27, 2024, 8:34 PM IST

ನವದೆಹಲಿ (ಮಾ.27): 28 ವರ್ಷಗಳ ಹಿಂದೆ ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಆಕ್ಟ್) ಅಡಿಯಲ್ಲಿ ಪಾಲನ್‌ಪುರದಲ್ಲಿ ಡ್ರಗ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್ ಭಟ್ ಅವರನ್ನು ಬುಧವಾರ ದೋಷಿ ಎಂದು ಘೋಷಿಸಲಾಗಿದೆ. ಇಂದು ಅವರನ್ನು ಪಾಲನ್‌ಪುರ ಸೆಷನ್ಸ್ ನ್ಯಾಯಾಲಯದ ಪೀಠದ ಮುಂದೆ ಹಾಜರುಪಡಿಸಿದ ನಂತರ ಶಿಕ್ಷೆಯನ್ನು ಪ್ರಕಟಿಸಲಾಯಿತು. 1996ರಲ್ಲಿ ಪಾಲನ್‌ಪುರದ ಹೋಟೆಲ್‌ವೊಂದರಲ್ಲಿ ವಕೀಲರ ವಿರುದ್ಧ ಸಾಕ್ಷ್ಯ ಎನ್ನುವಂತೆ 1.5 ಕೆಜಿ ಓಫಿಯಮ್‌ ಡ್ರಗ್‌ಅನ್ನು ಸಂಜೀವ್‌ ಭಟ್‌ ಇರಿಸಿದ್ದರು. ಸಾಕ್ಷ್ಯವನ್ನು ಸೃಷ್ಟಿ ಮಾಡಿದ ಆರೋಪವನ್ನು ಇವರ ವಿರುದ್ಧ ಹೊರಿಸಲಾಗಿತ್ತು. ಭಟ್ ಆ ಸಮಯದಲ್ಲಿ ಬನಸ್ಕಾಂತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಸಂಜೀವ್ ಭಟ್ ಅವರು ಈಗಾಗಲೇ 1989 ರ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 1989ರ ಕಸ್ಟಡಿ ಸಾವಿನ ಪ್ರಕರಣದ ಪ್ರಮುಖ ಆರೋಪಿ ಸಂಜೀವ್‌ ಭಟ್‌. ಗಲಭೆಯ ಸಮಯದಲ್ಲಿ ಅವರು ನೂರಾರು ಜನರನ್ನು ಬಂಧಿಸಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಕಸ್ಟಡಿಯಲ್ಲಿಯೇ ಸಾವು ಕಂಡಿದ್ದ.

ಯಾರೀತ ಸಂಜೀವ್‌ ಭಟ್‌: ಸಂಜೀವ್ ಭಟ್ ಗುಜರಾತ್ ಕೇಡರ್‌ನ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಮಾಜಿ ಅಧಿಕಾರಿ. ಐಐಟಿ ಬಾಂಬೆಯಿಂದ ಎಂಟೆಕ್ ಪದವಿಯನ್ನು ಪೂರ್ಣಗೊಳಿಸಿದ ನಂತರ, ಭಟ್ ಅವರು 1988 ರಲ್ಲಿ ಐಪಿಎಸ್‌ಗೆ ಸೇರಿದರು. 1990ರಲ್ಲಿ ಜಾಮ್‌ನಗರದಲ್ಲಿ ಸಂಭವಿಸಿದ ಗಲಭೆಯ ವೇಳೆ 150 ಜನರನ್ನು ಬಂಧಿಸಿದ್ದರು. ಈ ವೇಳೆ ಅವರು ಪ್ರದೇಶದ ಹೆಚ್ಚುವರಿ ಪೊಲೀಸ್‌ ಸೂಪರಿಂಟೆಂಡೆಂಟ್‌ ಆಗಿದ್ದರು. ಸಂಜೀವ್‌ ಭಟ್‌ನಿಂದ ಬಂಧನಕ್ಕೆ ಒಳಗಾಗಿದ್ದ ಪ್ರಭುದಾಸ್ ವೈಷ್ಣಾನಿ ಅವರು ಕೆಲವು ದಿನಗಳ ನಂತರ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು ಮತ್ತು ಮಾಜಿ ಐಪಿಎಸ್ ಅಧಿಕಾರಿಯು ಕಸ್ಟಡಿಯಲ್ಲಿ ಮೃತರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಅವರ ಕುಟುಂಬ ಆರೋಪ ಮಾಡಿತ್ತು. ಭಟ್ ಪ್ರಸ್ತುತ ವೈಷ್ಣಾನಿ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸಂಜೀವ್ ಭಟ್ 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದ ಕುರಿತು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಅಂದು ಗುಜರಾತ್‌ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ಸಭೆಗೆ ನಾನು ಹಾಜರಾಗಿದ್ದ ವೇಳೆ, ಮೋದಿ ಹಿಂದು ಸಮುದಾಯದವರು ಮುಸ್ಲಿಂ ಸಮುದಾಯದ ಮೇಲೆ ತಮ್ಮ ಕೋಪವನ್ನು ಹೊರಹಾಕಲು ಬಿಡಬೇಕು ಎಂದು ಪೊಲೀಸ್‌ ಸಿಬ್ಬಂದಿಗೆ ಆದೇಶ ನೀಡಿದ್ದರು ಎಂದು ಅಫಡವಿಟ್‌ನಲ್ಲಿ ಬರೆದಿದ್ದರ. ಆದರೆ, ಎಸ್‌ಐಟಿ ತನಿಖೆಯ ಬಳಿಕ ಸಂಜೀವ್‌ ಭಟ್‌ ಅಂಥದ್ದೊಂದು ಸಭೆಗೆ ಹಾಜರಾಗಿಯೇ ಇರಲಿಲ್ಲ ಎನ್ನುವುದು ಗೊತ್ತಾಗಿತ್ತು.

1996ರ ಮಾದಕ ವಸ್ತು ವಶ ಪ್ರಕರಣ: ಮಾರ್ಚ್ 27 ರಂದು, ಮಾಜಿ IPS ಅಧಿಕಾರಿ ಸಂಜೀವ್ ಭಟ್ ಅವರು 1996 ರ ಹಿಂದಿನ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟರು, ಆದರೆ ಶಿಕ್ಷೆಯನ್ನು ಗುರುವಾರ ಪ್ರಕಟಿಸುವ ನಿರೀಕ್ಷೆಯಿದೆ. 1996 ರಲ್ಲಿ  ರಾಜಸ್ಥಾನದ ವಕೀಲ ಸುಮರ್‌ಸಿಂಗ್ ರಾಜ್‌ಪುರೋಹಿತ್ ಅವರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಆಕ್ಟ್ (ಎನ್‌ಡಿಪಿಎಸ್ ಆಕ್ಟ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

Gujarat Riots ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪಾಲನಪುರ್ ಜೈಲಿನಿಂದ ಅಹಮ್ಮದಾಬಾದ್‌ಗೆ ಸ್ಥಳಾಂತರ!

ಆದರೆ, ರಾಜಸ್ಥಾನದ ಪಾಲಿಯಲ್ಲಿರುವ ವಿವಾದಿತ ಆಸ್ತಿಯನ್ನು ವರ್ಗಾಯಿಸಲು ಒತ್ತಾಯಿಸಲು ಬನಸ್ಕಾಂತ ಪೊಲೀಸರು ರಾಜಪುರೋಹಿತ್ ಅವರನ್ನು ತಪ್ಪಾಗಿ ಕೇಸ್‌ನಲ್ಲಿ ಫಿಟ್‌ ಮಾಡಿದ್ದಾರೆ ಎಂದಿದ್ದರು. ಬಳಿಕ ಸಂಜೀವ್‌ ಭಟ್‌ರನ್ನು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿತ್ತು.

 

ಮಾಜಿ IPS ಅಧಿಕಾರಿ ಸಂಜೀವ್ ಭಟ್ ಗೆ ಸುಪ್ರೀಂ ಶಾಕ್: ಜಾಮೀನು ನಿರಾಕರಣೆ!

Follow Us:
Download App:
  • android
  • ios