Asianet Suvarna News Asianet Suvarna News

Gujarat Riots ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪಾಲನಪುರ್ ಜೈಲಿನಿಂದ ಅಹಮ್ಮದಾಬಾದ್‌ಗೆ ಸ್ಥಳಾಂತರ!

  • ಗುಜರಾತ್ ಗಲಭೆಯಲ್ಲಿ ಅಂದಿನ ಸಿಎಂ ಮೋದಿ ಸೇರಿ ಹಲವರ ಮೇಲೆ ಸುಳ್ಳು ಕೇಸ್
  • ಬಂಧನದಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್
  • ಗುಜರಾತ್ ಗಲಭೆ ತನಿಖಾ ಪ್ರಕರಣದಲ್ಲಿನ 3 ಆರೋಪಿ ಸಂಜೀವ್ ಭಟ್
Gujarat Riots Case EX IPS Officer Sanjiv Bhatt taken custody from Palanpur jail on transfer warrant to Ahmedabad ckm
Author
Bengaluru, First Published Jul 13, 2022, 9:51 AM IST

ಅಹಮ್ಮದಾಬಾದ್(ಜು.13): ಗುಜರಾತ್ ಗಲಭೆ ಪ್ರಕರಣ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈ ಪ್ರಕರಣದ ತನಿಖೆಯಲ್ಲಿ ಲೋಪವೆಸಗಿರುವ ಆರೋಪ ಹೊತ್ತಿರುವ ಮಾಜಿ ಐಪಿಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಪಾಲನಪುರ್ ಜೈಲಿನಿಂದ ಅಹಮ್ಮದಾಬಾದ್‌ಗೆ ವರ್ಗಾಯಿಸಲಾಗಿದೆ. ಗುಜರಾತ್ ಗಲಭೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖರ ಮೇಲೆ ಸುಳ್ಳು ಕೇಸ್ ದಾಖಲಿಸಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಗುಜರಾತ್ ಗಲಭೆ ಪ್ರಕರಣದಲ್ಲಿ ಈಗಾಗಲೇ ಗುಜರಾತ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆರ್‌ಬಿ ಶ್ರೀಕುಮಾರ್, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಳಿಕ ಸಂಜೀವ್ ಭಟ್ ಅವರನ್ನು ಬಂಧಿಸಲಾಗಿದೆ. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಸಂಜೀವ್ ಭಟ್ ಅವರನ್ನು ಅಹಮ್ಮದಾಬಾದ್‌ಗೆ ಕರೆ ತಂದಿದ್ದಾರೆ.  2018ರಿಂದ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನಪುರ್ ಜೈಲಿನಲ್ಲಿರುವ ಸಂಜೀವ್ ಭಟ್ ಮೇಲಿನ ಗಲಭೆ ಕುಣಿಕೆ ಬಿಗಿಯಾಗುತ್ತಿದೆ. 27 ವರ್ಷಗಳ ಹಿಂದಿನ ಪ್ರಕರಣ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ರಾಜಸ್ಥಾನ ವಕೀಲರ ಮೇಲೆ ನರ್ಕೋಟಿಕ್ಸ್ ಸುಳ್ಳು ಕೇಸ್ ಹಾಗೂ ಲಾಕ್ ಅಪ್ ಡೆತ್ ಪ್ರಕರಣಗಳು ಸಂಜೀವ್ ಭಟ್ ಮೇಲಿದೆ.  ಪಾಲನಪುರ್ ಜೈಲಿನಿಂದ ಅಹಮ್ಮದಾಬಾದ್ ಪೊಲೀಸರು ಟ್ರಾನ್ಸಫರ್ ವಾರೆಂಟ್ ಪಡೆದುಕೊಂಡಿದ್ದಾರೆ.  ಅಹಮ್ಮದಾಬಾದ್ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಡೆಪ್ಯೂಟಿ ಕಮಿಷನರ್ ಚೈತನ್ಯ ಮಂದ್ಲಿಕ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಮಾಜಿ ಐಪಿಎಸ್‌ ಅಧಿಕಾರಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕಳೆದ ತಿಂಗಳ ಗುಜರಾತ್ ಸರ್ಕಾರ ಎಸ್ಐಟಿ ತಂಡ ರಚಿಸಿತ್ತು.  ಈ ತಂಡದ ಪ್ರಮುಖ ಸದಸ್ಯರಾಗಿರುವ ಅಧಿಕಾರಿ ಮಂದ್ಲಿಕ್ ಇದೀಗ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. 2002ರ ಗುಜರಾತ್ ಗಲಭೆ ಪ್ರಕರಣದ ಕುರಿತು ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಹಲವರ ಮೇಲೆ ಸುಳ್ಳು ಕೇಸ್ ದಾಖಲಾಗಿತ್ತು. ಗುಜರಾತ್ ಗಲಭೆ ಹಾಗೂ ಪ್ರಕರಣ ದಾರಿ ತಪ್ಪಿಸುವಲ್ಲಿ ಸಂಜೀವ್ ಭಟ್, ಡೈರೆಕ್ಟರ್ ಜನರಲ್ ಪೊಲೀಸ್ ಶ್ರೀಕುಮಾರ್, ಹಾಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಪಾತ್ರದ ಕುರಿತು ತನಿಖೆ ನಡೆಸಲು ಸರ್ಕಾರ ಎಸ್ಐಟಿ ತನಿಖಾ ತಂಡ ರಚಿಸಿದೆ.

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮಾಜಿ ಸಿಎಂಗೆ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.  ಇದರಲ್ಲಿ ಮೋದಿ ಪಾತ್ರ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ತನಿಖಾ ತಂಡ ಶ್ರೀಕುಮಾರ್ ಹಾಗೂ ತೀಸ್ತಾ ಅವರನ್ನು ಬಂಧಿಸಿತ್ತು.  ಗುಜರಾತ್‌ ಹತ್ಯಾಕಾಂಡದ ಬಳಿಕ ಗಲಭೆ ಕುರಿತು ಸುಳ್ಳು ದಾಖಲೆ ಸೃಷ್ಟಿಮಾಡಿದ ಆರೋಪದ  ಮೇಲೆ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರನ್ನು ಬಂಧಿಸಲಾಗಿದೆ.  ಅಂದಿನ ಗುಜರಾತ್‌ನ ಮೋದಿ ಸರ್ಕಾರದ ವಿರುದ್ಧ ಆರೋಪಿಸಿದ ಮಾಜಿ ಐಪಿಎಸ್‌ ಅಧಿಕಾರಿ ಶ್ರೀಕುಮಾರ್‌, ಸಂಜೀವ್‌ ಭಟ್‌ ಅವರ ವಿರುದ್ಧವೂ ಶನಿವಾರ ಪ್ರಕರಣ ದಾಖಲಿಸಲಾಗಿದ್ದು, ಶ್ರೀಕುಮಾರ್‌ ಅವರನ್ನು ಬಂಧಿಸಲಾಗಿತ್ತು. ಭಟ್‌ ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಮಾಜಿ IPS ಅಧಿಕಾರಿ ಸಂಜೀವ್ ಭಟ್ ಗೆ ಸುಪ್ರೀಂ ಶಾಕ್: ಜಾಮೀನು ನಿರಾಕರಣೆ!
 

Follow Us:
Download App:
  • android
  • ios