ನವದೆಹಲಿ[ಮೇ.09]: NDPS ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸುವ ಮೂಲಕ ಸುಪ್ರೀಂ ಕೋರ್ಟ್ ಗುಜರಾತ್ ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ಟ್ ರವರಿಗೆ ಬಹುದೊಡ್ಡ ಶಾಕ್ ನೀಡಿದೆ. 2018ರ ಸಪ್ಟೆಂಬರ್ ನಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. ಇದಕ್ಕೂ ಮುನ್ನ ಗುಜರಾತ್ ಹೈಕೋರ್ಟ್ ಕೂಡಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ವಾಸ್ತವವಾಗಿ ಮಾಜಿ IPS ಸಂಜೀವ್ ಭಟ್ಟ್ ರನ್ನು, ಗುಜರಾತ್ CID ಅಧಿಕಾರಿಗಳು 22 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಬಂಧಿಸಿದ್ದರು. ಸಂಜೀತ್ ಭಟ್ಟ್ ಹಾಗೂ ಇನ್ನಿತರ 7 ಮಂದಿಯನ್ನು, 22 ವರ್ಷದ ಹಿಂದೆ ಅಕ್ರಮವಾಗಿ ಮಾದಕ ವಸ್ತುಗಳನ್ನಿಟ್ಟುಕೊಂಡಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಬಂಧಿಸಲಾಗಿತ್ತು. 1996ರಲ್ಲಿ ಸಂಜೀವ್ ಭಟ್ ಬನಾಸ್ಕಾಂಟ ಜಿಲ್ಲೆಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಏನು NDPS ಪ್ರಕರಣ?

ಲಭ್ಯವಾದ ಮಾಹಿತಿ ಅನ್ವಯ ಸಂಜೀವ್ ಭಟ್ ನೇತೃತ್ವದಲ್ಲಿ ಬನಾಸ್ಕಾಂಟ ಪೊಲೀಸರು, ಸುಮಾರು ಒಂದು ಕಿಲೋ ಮಾದಕ ವಸ್ತುಗಳನ್ನು ಇಟ್ಟುಕೊಂಡಿದ್ದ ಆರೋಪದಡಿಯಲ್ಲಿ ವಕೀಲ ಸುಮೇರ್ ಸಿಂಗ್ ರಾಜ್ ಪುರೋಹಿತ್ ರನ್ನು 1996ರಲ್ಲಿ ಬಂಧಿಸಿದ್ದರು. ಈ ಕುರಿತಾಗಿ ಸ್ಪಷ್ಟನೆ ನೀಡಿದ್ದ ಪೊಲೀಸರು ಮಾದಕ ವಸ್ತುಗಳು ವಕೀಲ ಸುಮೇರ್ ಉಳಿದುಕೊಂಡಿದ್ದ ಪಾಲನ್ಪುರ್ ನಲ್ಲಿರುವ ಹೋಟೆಲ್ ರೂಂನಲ್ಲಿ ಪತ್ತೆಯಾಗಿದ್ದವೆಂದು ತಿಳಿಸಿದ್ದರು. 

ಆದರೆ ಈ ಪ್ರಕರಣದ ಕುರಿತಾಗಿ ರಾಜಸ್ಥಾನ ಪೊಲೀಸರು ನಡೆಸಿದ್ದ ತನಿಖೆಯಲ್ಲಿ ವಕೀಲ ಸುಮೇರ್ ಮೇಲೆ ಬನಾಸ್ಕಾಂಟ ಪೊಲೀಸರು ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದಾರೆಂಬ ವಿಚಾರ ಬಹಿರಂಗವಾಗಿತ್ತು. ಈ ಮೂಲಕ ಬಂಧಿತ ಆರೋಪಿ ರಾಜಸ್ಥಾನದ ತನ್ನ ವಿವಾದಿತ ಆಸ್ತಿಯನ್ನು ಹಸ್ತಾಂತರಿಸಲು ಒತ್ತಡ ಹೇರಿದ್ದರೆಂಬ ಸ್ಪಷ್ಟನೆ ನೀಡಿದ್ದರು.