ಮಹಿಳಾ ಮೀಸಲು ಬಿಲ್ ರಕ್ಷಾ ಬಂಧನಕ್ಕೆ ನನ್ನ ಗಿಫ್ಟ್: ಪ್ರಧಾನಿ ಮೋದಿ
ರಕ್ಷಾ ಬಂಧನದಂದು ನೀವು ರಾಖಿ ಕಳಿಸಿದ್ದೀರಿ, ನಿಮ್ಮ ಸೋದರನಾಗಿ ಮಹಿಳಾ ಮೀಸಲು ಮಸೂದೆಯನ್ನು ನಿಮಗೆ ಉಡುಗೊಡೆಯಾಗಿ ನೀಡುತ್ತಿದ್ದೇನೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ.
ಅಹಮದಾಬಾದ್: ‘ರಕ್ಷಾ ಬಂಧನದಂದು ನೀವು ರಾಖಿ ಕಳಿಸಿದ್ದೀರಿ, ನಿಮ್ಮ ಸೋದರನಾಗಿ ಮಹಿಳಾ ಮೀಸಲು ಮಸೂದೆಯನ್ನು ನಿಮಗೆ ಉಡುಗೊಡೆಯಾಗಿ ನೀಡುತ್ತಿದ್ದೇನೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ. ಮಂಗಳವಾರ ತಮ್ಮನ್ನು ಗೌರವಿಸಲು ಏರ್ಪಡಿಸಲಾಗಿದ್ದ ಮಹಿಳಾ ಮೀಸಲು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು,‘10 ವರ್ಷದ ಹಿಂದ ಮಹಿಳಾ ಮೀಸಲು ಹಿಡಿದು ಜೋತಾಡುತ್ತಿದ್ದವರು, ನಾವು ಜಾರಿ ಮಾಡುತ್ತೇವೆ ಎಂದಾಗ, ‘ಆದರೆ’ ‘ಹೇಗೆ’ ಅಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಮಹಿಳೆಯರ ಶಕ್ತಿಗೆ ಅಂಜಿ ಮಸೂದೆಗೆ ಮತ ಹಾಕಿದ್ದಾರೆ. ಮಹಿಳಾ ಮೀಸಲು ಮಸೂದೆ ನನ್ನ ಗ್ಯಾರಂಟಿ’ ಎಂದರು. ಜೊತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ ಪ್ರವೇಶಿಸುತ್ತಿದ್ದಂತೆ ಅಭಿವೃದ್ಧಿ ತಂತಾನೇ ಆಗುತ್ತದೆ ಎಂದರು.
ಚೌಹಾಣ್‌ಗೆ ಟಿಕೆಟ್ ನಕಾರ ಎಂಬುದು ಸುಳ್ಳು: ಬಿಜೆಪಿ
ನವದೆಹಲಿ: ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Madhya Pradesh assembly election) ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Chief Minister Shivraj Singh Chouhan) ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಲಿದೆ ಎಂಬ ವರದಿಗಳು ತಪ್ಪು ಎಂದು ಬಿಜೆಪಿ ಮೂಲಗಳು ಹೇಳಿವೆ. ಪಕ್ಷದ ಅತ್ಯಂತ ಸುದೀರ್ಘ ಸಿಎಂ ಎಂಬ ಹಿರಿಮೆ ಹೊಂದಿರುವ ಚೌಹಾಣ್, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸಿಎಂ ಸ್ಥಾನ ಇರಲಿ, ಟಿಕೆಟ್ ನೀಡುವುದೇ ಅನುಮಾನ. ಈ ಕಾರಣಕ್ಕಾಗಿಯೇ ಅಭ್ಯರ್ಥಿಗಳ ಮೊದಲ ಎರಡು ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿಲ್ಲ ಎಂದು ವರದಿಗಳು ಹೇಳಿದ್ದವು. ಆದರೆ ಇದನ್ನು ಬಿಜೆಪಿ (BJP) ಮೂಲಗಳು ತಳ್ಳಿಹಾಕಿವೆ.
ಫೇಮಸ್ ಆಗಲು ಪಿಎಫ್ಐ ದಾಳಿ ಕತೆ ಕಟ್ಟಿದ ಕೇರಳ ಯೋಧ, ಸ್ನೇಹಿತನ ಬಂಧನ
ಗಣೇಶ ಪೆಂಡಾಲ್‌ಗೆ ಬೆಂಕಿ: ಬಿಜೆಪಿ ಅಧ್ಯಕ್ಷ ನಡ್ಡಾ ಪಾರು
ಪುಣೆ: ‘ಗಣೇಶೋತ್ಸವ ನಿಮಿತ್ತ ಬಿಜೆಪಿ ಅಧ್ಯಕ್ಷ (BJP president)ಜೆ.ಪಿ. ನಡ್ಡಾ ಅವರು ಇಲ್ಲಿನ ಲೋಕಮಾನ್ಯ ನಗರದ ಗಣೇಶ ಪೆಂಡಾಲ್ (Ganesh Pendal) ದೇವರ ದರ್ಶನಕ್ಕೆಂದು ಆಗಮಿಸಿದ್ದಾಗ ಅದಕ್ಕೆ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ. ಈ ವೇಳೆ ನಡ್ಡಾ ಹಾಗೂ ಅವರ ಜತೆಗೆ ಇದ್ದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವನ್‌ಕುಳೆ ಅವರನ್ನು ಪೊಲೀಸರು ಸುರಕ್ಷಿತವಾಗಿ ತೆರವು ಮಾಡಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ
ಇ.ಡಿ. ವಿಚಾರಣೆಯಿಂದ ಕೆಸಿಆರ್ ಪುತ್ರಿ ಕವಿತಾ ಸದ್ಯಕ್ಕೆ ಬಚಾವ್
ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ (Telangana Chief Minister) ಕೆ.ಚಂದ್ರಶೇಖರ ರಾವ್ (K. Chandrasekhara Rao) ಪುತ್ರಿ, ಕೆ.ಕವಿತಾ ಅವರನ್ನು ನ.20ರವರೆಗೆ ವಿಚಾರಣೆಗೆ ಕರೆಯದಂತೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ. ಹೀಗಾಗಿ ಕವಿತಾ ಸದ್ಯಕ್ಕೆ ವಿಚಾರಣೆಯಿಂದ ಬಚಾವಾದಂತಾಗಿದೆ. ತಮಗೆ ನೀಡಿರುವ ಸಮನ್ಸ್ ವಿರುದ್ಧ ಕವಿತಾ (Kavitha) ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರಿಗೆ ಸೆ.15ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಬಳಿಕ ಅದನ್ನು ದಿನ ವಿಸ್ತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದೀಗ ನ.20ರವರೆಗೆ ವಿಚಾರಣೆಗೆ ಕರೆಯದಂತೆ ಕೋರ್ಟ್ ಸೂಚನೆ ನೀಡಿದೆ.
18ರ ಹುಡುಗನಾಗಲು ಹೊರಟಿರುವ 46ರ ಹರೆಯದ ಉದ್ಯಮಿ ಬ್ರಿಯಾನ್ ಲೈಫ್‌ಸ್ಟೈಲ್ ಹೇಗಿದೆ ನೋಡಿ?