Asianet Suvarna News Asianet Suvarna News

ಕುಟುಂಬ ತ್ಯಜಿಸಿ, 'ದೀದಿ ಮಾ' ಆಗ್ತಾರೆ ಬಿಜೆಪಿ ಬೆಂಕಿ ಚೆಂಡು ಉಮಾಭಾರತಿ!

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಒಂದು ಕಾಲದ ಬಿಜೆಪಿಯ ‘ಬೆಂಕಿಯ ಚೆಂಡು’ ಉಮಾ ಭಾರತಿ ತಮ್ಮ ಹೆಸರನ್ನು ‘ದೀದಿ ಮಾ’ ಎಂದು ಬದಲಿಸಿಕೊಂಡು ಸಾಂಸಾರಿಕ ಬದುಕನ್ನು ತ್ಯಜಿಸಲಿದ್ದಾರೆ.

Former Chief Minister of Madhya Pradesh Uma Bharathi will change her name as didima and sacrifice her family akb
Author
First Published Nov 6, 2022, 9:37 AM IST

ಭೋಪಾಲ್‌: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಒಂದು ಕಾಲದ ಬಿಜೆಪಿಯ ‘ಬೆಂಕಿಯ ಚೆಂಡು’ ಉಮಾ ಭಾರತಿ ತಮ್ಮ ಹೆಸರನ್ನು ‘ದೀದಿ ಮಾ’ ಎಂದು ಬದಲಿಸಿಕೊಂಡು ಸಾಂಸಾರಿಕ ಬದುಕನ್ನು ತ್ಯಜಿಸಲಿದ್ದಾರೆ. ನ.17ರಿಂದ ತಮ್ಮ ಹೆಸರು ‘ದೀದಿ ಮಾ’ ಎಂದು ಬದಲಾಗಲಿದೆ ಹಾಗೂ ಕುಟುಂಬದ ಜೊತೆಗಿನ ಎಲ್ಲಾ ನಂಟು ಕಡಿದುಕೊಂಡು ಜಗತ್ತನ್ನೇ ತಮ್ಮ ಕುಟುಂಬವನ್ನಾಗಿ ಮಾಡಿಕೊಳ್ಳುವುದಾಗಿ ಅವರು ಪ್ರಕಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ(Social Media)  ಈ ಬಗ್ಗೆ 17 ಪೋಸ್ಟ್‌ಗಳನ್ನು ಬರೆದಿರುವ ಉಮಾ ಭಾರತಿ, ಕರ್ನಾಟಕದಲ್ಲಿ(Karnataka) ಜನಿಸಿದ (ಈಗ ಬುಂದೇಲ್‌ಖಂಡದಲ್ಲಿದ್ದಾರೆ) ತಮ್ಮ ಗುರು ಜೈನ ಮುನಿ (Jain saint) ಆಚಾರ್ಯ ಶ್ರೀ ವಿದ್ಯಾಸಾಗರ ಜೀ ಮಹಾರಾಜ್‌ (Vidyasagar Ji maharaj) ಅವರ ಆದೇಶದಂತೆ ತಾವು ಸ್ವಂತ ಹೆಸರು ಹಾಗೂ ಕುಟುಂಬವನ್ನು ತ್ಯಜಿಸುತ್ತಿರುವುದಾಗಿ ಹೇಳಿದ್ದಾರೆ.

ಹರಿದ್ವಾರದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜೆ

ಉಮಾ ಭಾರತಿ (Uma Bharathi) 30 ವರ್ಷಗಳ ಹಿಂದೆ ಉಡುಪಿಯ ಪೇಜಾವರ ಮಠದ (Pejawara Mutt) ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ (sanyasa Deeksha) ಪಡೆದಿದ್ದರು. ಅದಕ್ಕೂ ಮೊದಲು 1997ರಲ್ಲಿ ಆನಂದಮಯಿ ಮಾ (Anandamayi ma) ಅವರಿಂದ ಬ್ರಹ್ಮಚರ್ಯ ದೀಕ್ಷೆ (Brahmacharya Deeksha) ಪಡೆದಿದ್ದರು. ನಂತರ ಮಧ್ಯಪ್ರದೇಶದ (Madhya Pradesh CM) ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವೆಯಾಗಿ ಸುದೀರ್ಘ ರಾಜಕಾರಣ ಮಾಡಿದ್ದರು. ಈಗ ತಮ್ಮ ಗುರುವಿನ ಅಣತಿಯಂತೆ ನ.17ರಿಂದ ಹೆಸರು ಬದಲಿಸಿಕೊಂಡು ಕುಟುಂಬವನ್ನು ತ್ಯಜಿಸುತ್ತೇನೆಂದು ಪ್ರಕಟಿಸಿದ್ದಾರೆ. ಆದರೆ, ರಾಜಕಾರಣದಲ್ಲಿ ಮುಂದುವರೆಯುತ್ತೇನೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ನೂಪುರ್ ಮೇಲೆ ಕ್ರಮ ಕೈಗೊಂಡಿದ್ದು ಸರಿ, ಈಗ ಆಕೆಯ ಭದ್ರತೆಯ ಬಗ್ಗೆ ಗಮನ ನೀಡಿ : ಉಮಾಭಾರತಿ

Follow Us:
Download App:
  • android
  • ios