ರಾಯ್‌ಪುರ್(ಮೇ.13)‌: ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ನರಮಂಡಲ ಬಹುತೇಕ ನಿಷ್ಕಿ್ರಯವಾಗಿ ಕೋಮಾಗೆ ಜಾರಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೋಗಿ ಅವರನ್ನು ಕೋಮಾದಿಂದ ಹೊರತರಲು ವೈದ್ಯರು ‘ಆಡಿಯೋ ಥೆರಪಿ’ ಮೊರೆ ಹೋಗಿದ್ದಾರೆ.

ಅವರ ಇಷ್ಟದ ಹಾಡುಗಳನ್ನು ಇಯರ್‌ಫೋನ್‌ ಮೂಲಕ ಕೇಳಿಸಿ ಮೆದುಳು ಚಟುವಟಿಕೆಯ ಪುನಶ್ಚೇತನಕ್ಕಾಗಿ ಶತಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಯಾವ ಚಿಕಿತ್ಸೆಗೂ ಜೋಗಿ ಅವರ ಆರೋಗ್ಯ ಸ್ಪಂದಿಸುತ್ತಿಲ್ಲ. ಹುಣಸೆ ಬೀಜ ಶ್ವಾಸನಾಳದಲ್ಲಿ ಸಿಲುಕಿದ್ದರಿಂದ ಜೋಗಿ ಅವರಿಗೆ ಹೃದಯ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೃದಯ ಮತ್ತು ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಜೋಗಿ ಅವರನ್ನು ಶನಿವಾರ (ಮಾ.9) ಶ್ರೀ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಣಸೆ ಹಣ್ಣಿನ ಬೀಜ ಶ್ವಾಸನಾಳದಲ್ಲಿ ಸಿಕ್ಕಿಬಿದ್ದಿದೆ ಎಂದು ವೈದ್ಯರು ಹೇಳಿದ್ದಾರೆ.

2000ದಿಂದ 2003ರವರೆಗೆ ಛತ್ತೀಸ್‌ಗಢದ ಮೊದಲ ಮುಖ್ಯಮಂತ್ರಿಯಾಗಿ ಅಜಿತ್‌ ಜೋಗಿ ಅವರು ಕಾರ‍್ಯನಿರ್ವಹಿಸಿದ್ದರು. ಬಳಿಕ ಕಾಂಗ್ರೆಸ್‌ ತೊರೆದು ಜನತಾ ಕಾಂಗ್ರೆಸ್‌ ಛತ್ತೀಸಗಢ(ಜೆ) ಪಕ್ಷವನ್ನು ಹುಟ್ಟಿಹಾಕಿದ್ದರು