Asianet Suvarna News Asianet Suvarna News

ರಾಮ ದೇವರೇ ಅಲ್ಲ, ತುಳಸಿದಾಸ್‌-ವಾಲ್ಮೀಕಿ ಬರೆದ ಕಾಲ್ಪನಿಕ ಕಥೆ ರಾಮಾಯಣ!

ಕಳೆದ ವರ್ಷ, ಪಾಟ್ನಾದಲ್ಲಿ ನಡೆದ ಭೂಯಾನ್-ಮುಶಾಹರ್ ಸಮುದಾಯದ ಸಭೆಯಲ್ಲೂ ಕೂಡ  ಮಾಂಜಿ, ರಾಮನನ್ನು ದೇವರೆಂದು ಪರಿಗಣಿಸಲು ನಿರಾಕರಿಸಿದ್ದಲ್ಲದೆ, ಬ್ರಾಹ್ಮಣ ಪುರೋಹಿತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.
 

Former Bihar Chief Minister Jitan Ram Manjhi says ram Not god Tulsidas Valmiki Created His Character san
Author
First Published Mar 18, 2023, 4:46 PM IST

ಪಾಟ್ನಾ (ಮಾ.18): ಬಿಹಾರದ ಮಾಜಿ ಮುಖ್ಯಮಂತ್ರಿ ಜತಿನ್‌ ರಾಮ್‌ ಮಾಂಝಿ ಮತ್ತೊಮ್ಮೆ ಹಿಂದೂ ದೇವರ ಬಗ್ಗೆ ಅದರಲ್ಲೂ ಶ್ರೀರಾಮನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಶುಕ್ರವಾರ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಜತಿನ್‌ ರಾಮ್‌ ಮಾಂಝಿ, ರಾಮ ಅನ್ನೋ ದೇವರೇ ಇಲ್ಲ. ತುಳಸಿದಾಸ್‌ ಹಾಗೂ ವಾಲ್ಮೀಕಿ ಈ ಕಾಲ್ಪನಿಕ ಪಾತ್ರವನ್ನು ರಚನೆ ಮಾಡಿದ್ದರು. ಆ ಮೂಲಕ ಜನರು ಉತ್ತಮರಾಗಲು ಏನನ್ನು ಮಾಡಬೇಕು ಎಂದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ. ಮಾಂಝಿ ಮಾತನಾಡಿಇದ್ದ ವಿಡಿಯೋವನ್ನು ಎಎನ್‌ಐ ಸುದ್ದಿಸಂಸ್ಥೆ ಶೇರ್‌ ಮಾಡಿಕೊಂಡಿದೆ. 'ರಾಮ ದೇವರೇ ಅಲ್ಲ. ತುಳಸಿದಾಸ್‌ ಹಾಗೂ ವಾಲ್ಮೀಕಿ ಈ ಪಾತ್ರವನ್ನು ರಚನೆ ಮಾಡಿದ್ದರಷ್ಟೇ. ಜನರು ಏನು ಮಾಡಬೇಕು ಏನು ಮಾಡಬಾರದು ಅನ್ನೋದನ್ನ ತಿಳಿಸಲು ರಾಮನ ಪಾತ್ರ ಸೃಷ್ಟಿಸಲಾಗಿತ್ತು. ಅದಕ್ಕಾಗಿ ಅವರು ಕಾವ್ಯ ಮತ್ತು ಮಹಾಕಾವ್ಯಗಳನ್ನು ಈ ಪಾತ್ರದೊಂದಿಗೆ ರಚನೆ ಮಾಡಿದರು. ಇದು ಬಹಳ ಒಳ್ಳೆಯ ಸಂಗತಿಗಳನ್ನು ಹೇಳುತ್ತದೆ ಮತ್ತು ನಾವು ಅದನ್ನು ಪಾಲಿಸುತ್ತಿದ್ದೇವೆ. ನಾನು ತುಳಸಿದಾಸ್‌ ಮತ್ತು ವಾಲ್ಮೀಕಿ ಅವರನ್ನು ನಂಬುತ್ತೇನೆ. ರಾಮ ಇದ್ದ ಅನ್ನೋದನ್ನ ನಂಬೋದಿಲ್ಲ' ಎಂದು ಹಿಂದುಸ್ತಾನ್‌ ಆವಾಂ ಮೋರ್ಚಾ (ಸೆಕ್ಯುಲರ್‌) ಅಧ್ಯಕ್ಷ ಮಾಂಝಿ ಹೇಳಿದ್ದಾರೆ. ಮಾಂಝಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಪಾಟ್ನಾದಲ್ಲಿ ನಡೆದ ಭೂಯಾನ್-ಮುಶಾಹರ್ ಸಮುದಾಯದ ಸಭೆಯಲ್ಲಿ, ರಾಮನನ್ನು ದೇವರೆಂದು ಪರಿಗಣಿಸಲು ನಿರಾಕರಿಸಿದ್ದ ಮಾಂಝಿ ಬ್ರಾಹ್ಮಣ ಪುರೋಹಿತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಂಝಿ, ತಾನು ರಾಮನನ್ನು ‘ದೇವರು’ ಎಂದು ಪರಿಗಣಿಸಿಲ್ಲ. "ಅವನು ಕಾಲ್ಪನಿಕ ಮತ್ತು ಕಾಲ್ಪನಿಕ ಪಾತ್ರ. ರಾಮ ಎನ್ನುವ ವ್ಯಕ್ತಿ ನಿಜವಾಗಿಯೂ ಇದ್ದಿರಲಿಲ್ಲ. ನಾನು ಅವನನ್ನು ಎಂದಿಗೂ ಪೂಜಿಸೋದಿಲ್ಲ ಮತ್ತು ಅವನನ್ನು ದೇವರಂತೆ ಪೂಜಿಸದಂತೆ ನನ್ನ ಸಹ ಸದಸ್ಯರಿಗೆ ಯಾವಾಗಲೂ ಸಲಹೆ ನೀಡುತ್ತೇನೆ' ಎಂದು ಹೇಳಿದ್ದಾರೆ. ದೀನದಲಿತರಲ್ಲಿ ಅತ್ಯಂತ ಹಿಂದುಳಿದಿರುವ ಮುಸಾಹರ್ ಸಮುದಾಯದ ಸದಸ್ಯರಿಗೆ ಹಿಂದೂ ದೇವರು ಮತ್ತು ದೇವಿಯನ್ನು ಪೂಜಿಸುವಂತೆ ಒತ್ತಾಯ ಹೇರಲಾಗುತ್ತಿದೆ ಎಂದು ಎಚ್‌ಎಎಂ(S) ಮುಖ್ಯಸ್ಥ ವಿಷಾದಿಸಿದ್ದಾರೆ. "ಮುಸಾಹರ್ ಸಮುದಾಯಕ್ಕೆ ಸೇರಿದವರು 'ಜೈ ಭೀಮ್' ಎಂದು ಘೋಷಣೆ ಕೂಗಿದಾಗ ನನಗೆ ಒಳಗಿನಿಂದ ನೋವಾಗುತ್ತದೆ," ಎಂದು ಅವರು ಹೇಳಿದರು.

ಅದರೊಂದಿಗೆ ಮಾಂಝಿ, ರಾಮಚರಿತಮಾನಸ್‌ ವಿವಾದವನ್ನು ಮತ್ತೊಮ್ಮೆ ಜಾಗೃತ ಮಾಡಿದ್ದಾರೆ. ಕಳೆದ ವರ್ಷ ಬಿಹಾರ ರಾಜ್ಯದ ಶಿಕ್ಷಣ ಸಚಿವ ಚಂದ್ರಶೇಖರ್‌ ಕೂಡ ರಾಮಚರಿತಮಾನಸ್‌ ಬಗ್ಗೆ ವಿವಾದಾತ್ಮಕ ಮಾತನ್ನು ಆಡಿದ್ದರು. ರಾಮ ಹಾಗೂ ರಾವಣ ಅನ್ನೋದೇ ಕಾಲ್ಪನಿಕ ಪಾತ್ರಗಳು. ರಾಮನಿಗಿಂತ ರಾವಣನೇ ಹೆಚ್ಚು ಜ್ಞಾನಿಯಾಗಿ ನನಗೆ ಕಂಡಿದ್ದಾನೆ ಎಂದು ಮಾಂಝಿ ಹೇಳಿದ್ದಾರೆ.

ಮನುಸ್ಮೃತಿ, ರಾಮಚರಿತಮಾನಸ್‌ಗೆ ಬೆಂಕಿ ಹಚ್ಚಿ ಎಂದ ಬಿಹಾರ ಸಚಿವನ ನಾಲಿಗೆ ಕತ್ತರಿಸಿದ್ರೆ 10 ಕೋಟಿ ರೂ. ಇನಾಮು..!

ಬಿಹಾರದ 'ಮಹಾಘಟಬಂಧನ್' ಸರ್ಕಾರದ ಭಾಗವಾಗಿರುವ ಮಾಂಝಿ, "...ರಾಮನಿಗೆ ಸಮಸ್ಯೆಗಳು ಎದುರಾದಾಗ, ಅವನಿಗೆ ಅಲೌಕಿಕ ಶಕ್ತಿಗಳ ಬೆಂಬಲವಿತ್ತು ಆದರೆ ಅದು ರಾವಣನಿಗೆ ಇದಾವುದೂ ಇರಲಿಲ್ಲ" ಎಂದು ಹೇಳಿದರು. ಸಾಮಾಜಿಕ ತಾರತಮ್ಯವನ್ನು ಮನ್ನಿಸುವ ವಿವಾದಾತ್ಮಕ ಭಾಗಗಳನ್ನು ಪುಸ್ತಕದಿಂದ ತೆಗೆದುಹಾಕಬೇಕು ಎಂದು ಮಾಂಝಿ ಹೇಳಿದರು.

ರಾಮ ದೇವರಲ್ಲ ಕಥೆಯಲ್ಲಿನ ಪಾತ್ರವಷ್ಟೇ: ಬಿಹಾರ ಮಾಜಿ ಸಿಎಂ ಹೇಳಿಕೆ

"ರಾಮನು ಕಾಲ್ಪನಿಕ ವ್ಯಕ್ತಿಯೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ ಎಂದು ನಾನು ಯಾವಾಗಲೂ ನಂಬಿದ್ದೇನೆ. ಹಾಗೆ ಹೇಳಿದವರಲ್ಲಿ ನಾನು ಮೊದಲಿಗನಲ್ಲ. ಇದೇ ರೀತಿಯ ಅಭಿಪ್ರಾಯಗಳನ್ನು ರಾಹುಲ್ ಸಾಂಕೃತ್ಯಾಯನ್ ಮತ್ತು ಲೋಕಮಾನ್ಯ ತಿಲಕ್ ಅವರಂತಹ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಬ್ರಾಹ್ಮಣರಾಗಿದ್ದರಿಂದ ಯಾರೂ ಇದಕ್ಕೆ ಹೊರತಾಗಿಲ್ಲ. ನಾನು ಅದನ್ನು ಹೇಳಿದಾಗ, ಜನರಿಗೆ ಸಮಸ್ಯೆಗಳಿವೆ ಎಂದಿದ್ದಾರೆ.

Follow Us:
Download App:
  • android
  • ios