Asianet Suvarna News Asianet Suvarna News

RSS Vijayadashami Utsav: ಮಣಿಪುರ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ, ಸರಸಂಘಚಾಲಕ ಮೋಹನ್‌ ಭಾಗವತ್‌

ನಾಗ್ಪುರದಲ್ಲಿ ಆರ್‌ಎಸ್‌ಎಸ್ ದಸರಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ ಹತ್ತಿರವಾದಾಗ, ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸುವ ಕೆಲವು ಘಟನೆಗಳು ಸಂಭವಿಸುತ್ತವೆ. ಹಿಂಸಾಚಾರವು ತಾನಾಗಿಯೇ ನಡೆಯುತ್ತಿಲ್ಲ, ಬದಲಿಗೆ "ನಡೆಯುವಂತೆ ಮಾಡಲಾಗುತ್ತಿದೆ" ಎಂದು ಅವರು ಶಂಕಿಸಿದ್ದಾರೆ.

foreign powers behind Manipur violence says RSS Chief in Mohan Bhagwat in Nagpur Vijayadashami Utsav san
Author
First Published Oct 24, 2023, 3:30 PM IST

ನಾಗ್ಪುರ(ಅ.24): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಮಂಗಳವಾರ ಆರ್‌ಎಸ್‌ಎಸ್‌ನ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ, ಮಹಿಫುರ ಹಿಂಸಾಚಾರದಂಥ ಘಟನೆಗಳಿಗೆ ವಿದೇಶಿ ಶಕ್ತಿಗಳೇ ಲಾಭ ಮಾಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ. ಹಲವಾರು ತಿಂಗಳುಗಳಿಂದ ಈಶಾನ್ಯ ರಾಜ್ಯವನ್ನು ಕಂಗೆಡಿಸಿರುವ ವಿರಳವಾದ ಜನಾಂಗೀಯ ಘರ್ಷಣೆಗಳಲ್ಲಿ ಈ ವಿದೇಶಿ ಶಕ್ತಿಗಳು ಭಾಗಿಯಾಗಿರಲೂಬಹುದು ಎಂದು ಹೇಳಿದ್ದಾರೆ. 'ಮೈಟೀ ಮತ್ತು ಕುಕಿಗಳು ಅಲ್ಲಿ ದೀರ್ಘಕಾಲದಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇದು ಗಡಿ ರಾಜ್ಯ. ಇಂತಹ ಪ್ರತ್ಯೇಕತಾವಾದ ಮತ್ತು ಆಂತರಿಕ ಸಂಘರ್ಷದಿಂದ ಯಾರಿಗೆ ಲಾಭ? ಹೊರಗಿನ ಶಕ್ತಿಗಳಿಗೂ ಲಾಭವಾಗುತ್ತದೆ. ಅಲ್ಲಿ ನಡೆದ ಘಟನೆಯಲ್ಲಿ ಹೊರಗಿನ ಜನರು ಭಾಗಿಯಾಗಿರಬಹುದು ಎಂದು ನಾಗ್ಪುರದಲ್ಲಿ ಆರ್‌ಎಸ್‌ಎಸ್ ದಸರಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್ ಪ್ರಶ್ನೆ ಮಾಡಿದ್ದಾರೆ. ಮಣಿಪುರ ಹಿಂಸಾಚಾರವು ತಾನಾಗಿಯೇ ನಡೆಯುತ್ತಿಲ್ಲ ಮತ್ತು ಅದನ್ನು "ನಡೆಸಲಾಗುತ್ತಿದೆ" ಎಂದು ಭಾಗವತ್ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಕಾಲ ಮಣಿಪುರದಲ್ಲಿದ್ದರು. ಸಂಘರ್ಷಕ್ಕೆ ಉತ್ತೇಜನ ನೀಡಿದವರು ಯಾರು? ಹಿಂಸಾಚಾರ ನಡೆಯುತ್ತಿಲ್ಲ, ಹಿಂಸಾಚಾರ ಆಗುವಂತೆ ಮಾಡಲಾಗುತ್ತಿದೆ. ಮಣಿಪುರದಲ್ಲಿ ಅಶಾಂತಿ ಮತ್ತು ಅಸ್ಥಿರತೆಯ ಲಾಭ ಪಡೆಯಲು ವಿದೇಶಿ ಶಕ್ತಿಗಳು ಆಸಕ್ತಿ ಹೊಂದಿದೆ. ಆಗ್ನೇಯ ಏಷ್ಯಾದ ಭೌಗೋಳಿಕ ರಾಜಕೀಯವೂ ಈ ಘಟನೆಗಳಲ್ಲಿ ಪಾತ್ರವನ್ನು ಹೊಂದಿರಬಹುದು ಎಂದು ಶಂಕಿಸಿದ್ದಾರೆ.

ಶಾಂತಿಯ ಮರುಸ್ಥಾಪನೆಯ ಭರವಸೆಯ ಕಿರಣವಿದ್ದಾಗಲೆಲ್ಲಾ, "ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸುವ" ಮತ್ತೊಂದು ಹಿಂಸಾಚಾರದ ಘಟನೆ ನಡೆಯಿತ್ತಿದೆ ಎಂದು ಭಾಗವತ್ ಹೇಳಿದ್ದಾರೆ. “ಶಾಂತಿ ಮರುಸ್ಥಾಪನೆ ಇನ್ನೇನು ಸಾಧ್ಯ ಎನ್ನುವಾಗ, ಕೆಲವು ಘಟನೆಗಳು ಸಂಭವಿಸುತ್ತವೆ. ಇದು ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಇಂತಹ ಕೃತ್ಯಗಳನ್ನು ಮಾಡುತ್ತಿದ್ದವರ ಹಿಂದೆ ಯಾರಿದ್ದಾರೆ? ಹಿಂಸಾಚಾರವನ್ನು ಯಾರು ಪ್ರಚೋದಿಸುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.  ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಗುರಿಯೊಂದಿಗೆ ಕೆಲಸ ಮಾಡಿದ ಸಂಘಟನೆಯ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.

ಲೋಕಸಭೆ ಚುನಾವಣೆಗೆ ಎಚ್ಚರಿಕೆ ನೀಡಿದ ಭಾಗವತ್‌: 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಭಾವನೆಗಳನ್ನು ಕೆರಳಿಸುವ ಮೂಲಕ ಮತಗಳನ್ನು ಗಳಿಸುವ ರಾಜಕೀಯ ಪಕ್ಷಗಳ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು ಮತ್ತು ದೇಶದ ಏಕತೆ, ಸಮಗ್ರತೆ, ಗುರುತು ಮತ್ತು ಅಭಿವೃದ್ಧಿಯನ್ನು ಪರಿಗಣಿಸಿ ಮತ ಚಲಾಯಿಸುವಂತೆ ಜನರನ್ನು ಕೇಳಿಕೊಂಡರು. ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ದ್ವೇಷವನ್ನು ಸೃಷ್ಟಿಸಲು ಬಳಸುವ "ಟೂಲ್‌ಕಿಟ್‌ಗಳ" ಬಳಕೆಯನ್ನು ಭಾಗವತ್ ಉಲ್ಲೇಖಿಸಿದ್ದಾರೆ.

ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಸಮಾಜದಲ್ಲಿ ಅರಾಜಕತೆ, ಅವ್ಯವಸ್ಥೆ ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿದ್ದಾರೆ. ಮಾಧ್ಯಮ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಅವರ ಪ್ರಭಾವದಿಂದ, ಅವರು ಸಾಮಾಜಿಕ ಕ್ರಮಬದ್ಧತೆ, ನೈತಿಕತೆ, ಸಂಸ್ಕೃತಿ, ಘನತೆ ಮತ್ತು ಸಂಯಮವನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಖಂಡ ಭಾರತ ಧ್ಯೇಯವನ್ನು ಉಳಿಸುವಲ್ಲಿ ಆರ್‌ಎಸ್ಎಸ್‌ ಕೊಡುಗೆ ಶ್ಲಾಘಿಸಿದ ಶಂಕರ್‌ ಮಹದೇವನ್‌!

ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ: ದೇಶದ ಹಿಂದುಗಳ ಅಸ್ಮಿತೆಯಾಗಿರುವ ರಾಮಮಂದಿರ ಜನವರಿ 22ಕ್ಕೆ ಉದ್ಘಾಟನೆಯಾಗಲಿದೆ. ಅಂದು ಮಂದಿರಕ್ಕೆ ರಾಮ ಬರಲಿದ್ದಾನೆ. ಆ ದಿನ ಇಡೀ ದೇಶದ ದೇವಸ್ಥಾನಗಳಲ್ಲಿ ನಿಮ್ಮ ಹತ್ತಿರದ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದು ಹೇಳಿದ್ದಾರೆ.

ಇಸ್ರೇಲ್ - ಹಮಾಸ್‌ ರೀತಿ ಭಾರತದಲ್ಲಿ ಕೋಮು ವಿಚಾರವಾಗಿ ಯುದ್ಧ ನಡೆದಿಲ್ಲ: ಮೋಹನ್‌ ಭಾಗವತ್‌

Follow Us:
Download App:
  • android
  • ios