ಭಾರತದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಬಹುಮತ ಸಾಧಿಸಿರುವ ಕುರಿತು ಅಮೆರಿಕ, ಯುಕೆ ಸೇರಿದಂತೆ ಅನೇಕ ವಿಶ್ವ ಮಾಧ್ಯಮಗಳು ಪ್ರಧಾನ ಸುದ್ದಿ ಪ್ರಕಟಿಸಿವೆ.

ವಾಷಿಂಗ್ಟನ್‌/ಲಂಡನ್‌: ಭಾರತದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಬಹುಮತ ಸಾಧಿಸಿರುವ ಕುರಿತು ಅಮೆರಿಕ, ಯುಕೆ ಸೇರಿದಂತೆ ಅನೇಕ ವಿಶ್ವಮಾಧ್ಯಮಗಳು ಪ್ರಧಾನ ಸುದ್ದಿ ಪ್ರಕಟಿಸಿವೆ.

ಮೋದಿ ಅಜೇಯತೆ ದಿಢೀರ್‌ ಛಿದ್ರವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ ಪ್ರಕಟಿಸಿದೆ. ಲಂಡನ್‌ ಮೂಲದ ಖ್ಯಾತ ಮಾಧ್ಯಮ ಬಿಬಿಸಿ ಜಾಗತಿಕ ಜನಪ್ರಿಯ ನಾಯಕ ನರೇಂದ್ರ ಮೋದಿಗೂ ಅಧಿಕಾರ ವಿರೋಧಿ ಅಲೆಯಿರುವುದಾಗಿ ಭಾರತೀಯರು ಸಾಬೀತಪಡಿಸಿದ್ದಾರೆ ಎಂದು ವಿಶ್ಲೇಷಿಸಿದೆ. ಇಷ್ಟೇ ಅಲ್ಲದೆ ವಾಲ್‌ ಸ್ಟ್ರೀಟ್‌ ಜರ್ನಲ್‌, ಪಾಕಿಸ್ತಾನದ ದಿ ಡಾನ್‌, ಸಿಎನ್ಎನ್‌, ಸಿಬಿಸಿ, ವಾಷಿಂಗ್ಟನ್‌ ಪೋಸ್ಟ್‌ ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಗೆಲುವು, ಸೋಲು ರಾಜಕೀಯದ ಭಾಗ: ಮೋದಿ

ನವದೆಹಲಿ: ಗೆಲುವು, ಸೋಲು ಎರಡೂ ರಾಜಕೀಯದ ಅವಿಭಾಜ್ಯ ಅಂಗ. ಕಳೆದ 10 ವರ್ಷಗಳಲ್ಲಿ ನಾವು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ. ಮುಂದೆಯೂ ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿದೇಶಿ ಮಾಧ್ಯಮಗಳು ಯುರೋಪ್ ದೇಶಗಳನ್ನೇಕೆ ಕ್ರಿಶ್ಚಿಯನ್ ನ್ಯಾಷನಲಿಸ್ಟ್ ಸರ್ಕಾರ ಎಂದು ಕರೆಯಲ್ಲ?

ಬುಧವಾರ ಹಾಲಿ ಸರ್ಕಾರ ಕಡೆಯ ಸಚಿವ ಸಂಪುಟ ಸಭೆ ನಡೆಸಿದ ಮೋದಿ, ಸಭೆಯಲ್ಲಿ ಚುನಾವಣಾ ಫಲಿತಾಂಶವನ್ನು ಮೆಲುಕು ಹಾಕಿದರು. ಈ ವೇಳೆ ಗೆಲುವು, ಸೋಲು ರಾಜಕೀಯದ ಭಾಗ. ನೀವು ಸಂಖ್ಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಲು ಹೋಗಬೇಡಿ. ಅವು ಹೆಚ್ಚೂ ಕಡಿಮೆ ಆಗುತ್ತಲೇ ಇರುತ್ತವೆ. ದೇಶ ಮತ್ತು ಸಮಾಜದ ಪರವಾಗಿ ಕೆಲಸ ಮಾಡುವುದನ್ನು ಮುಂದುವರೆಸಿ. ತಂತಾನೆ ನಮ್ಮ ಗೆಲುವಿನ ಸಂಖ್ಯೆಯೂ ಹೆಚ್ಚುತ್ತದೆ’ ಎಂದು ಸಹದ್ಯೋಗಿಗಳಿಗೆ ಹಿತನುಡಿಗಳನ್ನು ಆಡಿದರು’ ಎಂದು ಮೂಲಗಳು ತಿಳಿಸಿವೆ.

ಜನಾದೇಶವನ್ನು ಹತ್ತಿಕ್ಕಲು ಮೋದಿ ಯತ್ನ: ಜೈರಾಂ

ನವದೆಹಲಿ: ದೇಶಾದ್ಯಂತ ಜನರು ಮೋದಿಯ ವಿರುದ್ಧ ಜನಾದೇಶ ನೀಡಿದ್ದರೂ ಅವರು ಅದನ್ನು ಹತ್ತಿಕ್ಕುವ (ಡೆಮೊ-ಕರ್ಸಿ) ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ, ‘ನರೇಂದ್ರ ಮೋದಿಯ ವಿರುದ್ಧವಾಗಿ ಜನರು ತೀರ್ಪು ನೀಡಿದ್ದರೂ ತಮ್ಮ ಕುಗ್ಗಿದ ಎದೆಯನ್ನೇ ಬಡಿದುಕೊಂಡು ಹಂಗಾಮಿ ಪ್ರಧಾನಿ ಸತತವಾಗಿ ಮೂರನೇ ಸಲ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ಅಧಿಕಾರ ನೀಡಿರುವುದಾಗಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ನೆಹರು ಸತತ ಮೂರು ಬಾರಿ ಬಹುಮತ ಪಡೆದು ಅಧಿಕಾರಕ್ಕೇರಿದ್ದರು ಎಂಬುದನ್ನು ಮರೆಯಬಾರದು. 

ಸಿಎಂ ಜೊತೆ ಪ್ರಧಾನಿ ಮೋದಿ ಮಾತು, ವಿದೇಶಿ ಮಾಧ್ಯಮ ಭಾರತಕ್ಕೆ ಆಪತ್ತು; ಮೇ.16ರ ಟಾಪ್ 10 ಸುದ್ದಿ!

ಅಲ್ಲದೆ 1989ರಲ್ಲಿ ಕಾಂಗ್ರೆಸ್‌ಗೆ 197 ಸೀಟು ಬಂದರೂ ರಾಜೀವ್‌ ಗಾಂಧಿ ನೈತಿಕತೆಯಿಂದ ತಮ್ಮ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟರು. ಅದೇ ರೀತಿ ಪ್ರಧಾನಿ ಮೋದಿಯೂ ಸಹ ತಮ್ಮ ಪ್ರಧಾನಿ ಸ್ಥಾನ ಬಿಟ್ಟುಕೊಡದೆ ಅಹಂಕಾರ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.