Asianet Suvarna News Asianet Suvarna News

ಹುಸೇನ್ ಪೇಂಟಿಂಗ್‌ನ್ನು 2 ಕೋಟಿ ನೀಡಿ ಖರೀದಿಸುವಂತೆ ಪ್ರಿಯಾಂಕಾ ಗಾಂಧಿ ಒತ್ತಡ ಹೇರಿದ್ದರು: ರಾಣಾ ಕಪೂರ್

  • ಹುಸೇನ್ ಪೇಂಟಿಂಗ್‌ನ್ನು 2 ಕೋಟಿ ನೀಡಿ ಖರೀದಿಸುವಂತೆ 
  • ಕಾಂಗ್ರೆಸ್ ನಾಯಕರಿಂದ ಒತ್ತಡ: ರಾಣಾ ಕಪೂರ್ ಆರೋಪ
  • ಆ ಹಣದಲ್ಲಿ ಸೋನಿಯಾ ಗಾಂಧಿಗೆ ಅಮೆರಿಕಾದಲ್ಲಿ ಚಿಕಿತ್ಸೆ
forced to buy MF Husain painting from Priyanka Gandhi Vadra, paid Rs 2 cr says Rana Kapoor in ED chargesheet akb
Author
New Delhi, First Published Apr 24, 2022, 1:59 PM IST

ಮುಂಬೈ: ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರಿಂದ ಎಂಎಫ್ ಹುಸೇನ್ ಪೇಂಟಿಂಗ್‌ನ್ನು (MF Husain painting )  2 ಕೋಟಿ ರೂ.  ನೀಡಿ ಖರೀದಿಸುವಂತೆ ಒತ್ತಾಯಿಸಲಾಯಿತು ಮತ್ತು ಮಾರಾಟದ ಹಣವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ನ್ಯೂಯಾರ್ಕ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಗಾಂಧಿ ಕುಟುಂಬ ಬಳಸಿದೆ ಎಂದು ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ. 

ಎಂ ಎಫ್ ಹುಸೇನ್ ಪೇಂಟಿಂಗ್ ಅನ್ನು ಖರೀದಿಸಲು ನಿರಾಕರಿಸಿದರೆ ಇದು ಗಾಂಧಿ ಕುಟುಂಬದೊಂದಿಗೆ (Gandhi family) ಸಂಬಂಧವನ್ನು ಬೆಳೆಸುವುದನ್ನು ತಡೆಯುತ್ತದೆ ಮಾತ್ರವಲ್ಲದೆ ಪದ್ಮಭೂಷಣ (Padma Bhushan) ಪ್ರಶಸ್ತಿಯನ್ನು ಪಡೆಯುವುದನ್ನು ತಡೆಯುತ್ತದೆ ಎಂದು ಆಗಿನ ಪೆಟ್ರೋಲಿಯಂ ಸಚಿವ (petroleum minister) ಮುರಳಿ ದೇವೋರಾ (Murli Deora) ಹೇಳಿದ್ದರು ಎಂದು ಕಪೂರ್ ಇಡಿಗೆ ತಿಳಿಸಿದ್ದಾರೆ. ವಿಶೇಷ ನ್ಯಾಯಾಲಯದಲ್ಲಿ ಫೆಡರಲ್ ಆಂಟಿ ಮನಿ ಲಾಂಡರಿಂಗ್ ಏಜೆನ್ಸಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಈ ವಿಚಾರ ಇದೆ.


ಮನಿ ಲಾಂಡರಿಂಗ್ ಪ್ರಕರಣದಲ್ಲಿ ರಾಣಾ ಕಪೂರ್ ಅವರ ಈ ಹೇಳಿಕೆಗಳು,  ರಾಣಾ ಕಪೂರ್, ಅವರ ಕುಟುಂಬ, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ (DHFL) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ (Dheeraj Wadhawan) ಮತ್ತು ಇತರರ ವಿರುದ್ಧ ಇತ್ತೀಚೆಗೆ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಎರಡನೇ ಪೂರಕ ಆರೋಪಪಟ್ಟಿಯ ಭಾಗವಾಗಿದೆ. 

ತಾನು 2 ಕೋಟಿ ರೂಪಾಯಿ ಚೆಕ್ ಪಾವತಿಸಿದ್ದೇನೆ ಎಂದು ಹೇಳಿರುವ ಕಪೂರ್, ಈ ಹಣವನ್ನು ಗಾಂಧಿ ಕುಟುಂಬವು ಸೋನಿಯಾ ಗಾಂಧಿ ಅವರಿಗೆ ನ್ಯೂಯಾರ್ಕ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಬಳಸಿದೆ ಎಂದು ಮಿಲಿಂದ್ ದಿಯೋರಾ (Milind Deora) (ದಿವಂಗತ ಮುರಳಿ ದೇವೋರಾ ಅವರ ಪುತ್ರ ಮತ್ತು ಮಾಜಿ ಕಾಂಗ್ರೆಸ್ ಸಂಸದ) ಗೌಪ್ಯವಾಗಿ ತಿಳಿಸಿದ್ದರು ಎಂದು ಹೇಳಿದರು ಎನ್ನಲಾಗಿದೆ.

ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದ ಅಹ್ಮದ್ ಪಟೇಲ್ (Ahmed Patel) ಅವರು ಸೋನಿಯಾ ಗಾಂಧಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಸೂಕ್ತ ಸಮಯದಲ್ಲಿ ಗಾಂಧಿ ಕುಟುಂಬವನ್ನು ಬೆಂಬಲಿಸುವ ಮೂಲಕ, ನಾನು (ಕಪೂರ್) ಆ ಕುಟುಂಬಕ್ಕೆ ಒಳ್ಳೆಯ ಕಾರ್ಯವನ್ನು ಮಾಡಿದ್ದೇನೆ ಎಂದು ಹೇಳಿದ್ದರು ಎಂದು ಕಪೂರ್ ಇಡಿಗೆ ತಿಳಿಸಿದ್ದಾರೆ. ಅಲ್ಲದೇ ಈ ಕಾರಣಕ್ಕೆ ತಮ್ಮನ್ನು 'ಪದ್ಮಭೂಷಣ' ಪ್ರಶಸ್ತಿಗೆ ಸರಿಯಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದರೆನ್ನಲಾಗಿದೆ

ಪೈಂಟಿಂಗ್‌ ಅನ್ನು ನಿರಾಕರಿಸಲು ಯತ್ನಿಸಿದಾಗ ಮುರಳಿ ದೇವ್ರಾ ಅವರು ರಾಣಾ ಕಪೂರ್ ಅವರ ಮನವೊಲಿಸಲು ಪ್ರಯತ್ನಿಸಿದರು ಚಿತ್ರಕಲೆಯನ್ನು ಖರೀದಿಸಲು ನಿರಾಕರಿಸುವುದರಿಂದ ಮುಂದೆಂದು ತಮಗೆ  ಗಾಂಧಿ ಕುಟುಂಬದೊಂದಿಗೆ ಸಂಬಂಧವನ್ನು ಬೆಳೆಸಲು ಎಂದಿಗೂ ಅನುಮತಿಸುವುದಿಲ್ಲ. ಅದರ ಜೊತೆಗೆ ಪದ್ಮಭೂಷಣ ಪ್ರಶಸ್ತಿಯನ್ನು ತಾವು ಪಡೆಯುವುದನ್ನು ಇದು ತಡೆಯುತ್ತದೆ ಎಂದಿದ್ದಾರೆ ಎಂದು ಆರೋಪಪಟ್ಟಿಯಲ್ಲಿದೆ. 

ಚಿತ್ರಕಲೆಯನ್ನು ಖರೀದಿಸಲು ವಿಫಲವಾದರೆ ಕಪೂರ್‌ ಮೇಲೆ ಮತ್ತು ಯೆಸ್ ಬ್ಯಾಂಕ್ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು  ದಿಯೋರಾ ರಾತ್ರಿಯ ಊಟಕ್ಕೆ ಕರೆದು ಕಪೂರ್‌ಗೆ ಹೇಳಿದ್ದರು ಎಂದು ಕಪೂರ್ ಇಡಿಗೆ ನೀಡಿದ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಮಾರ್ಚ್ 2020 ರಲ್ಲಿ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ ಬ್ಯಾಂಕರ್ ಕಪೂರ್‌ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೊದಲನೆಯದಾಗಿ ನಾನು ಅದನ್ನು ಬಲವಂತದ ಮಾರಾಟ ಎಂದು ಹೇಳಲು ಬಯಸುತ್ತೇನೆ, ಅದರ ಖರೀದಿಗೆ ನಾನು ಎಂದಿಗೂ ಸಿದ್ಧವಾಗಿರಲಿಲ್ಲ ಎಂದು  ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಕಪೂರ್ ಖರೀದಿಸಿದ್ದಾರೆ ಎಂದು ಹೇಳಲಾದ ಪೇಂಟಿಂಗ್ ಬಗ್ಗೆ ಆರೋಪಪಟ್ಟಿ ಹೇಳಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಎಂಎಫ್ ಹುಸೇನ್ ಪೇಂಟಿಂಗ್ ಖರೀದಿಸಲು ಮನವೊಲಿಸಲು ಮಿಲಿಂದ್ ದಿಯೋರಾ ಅವರು, ರಾಣಾ ಕಪೂರ್ ಮನೆ ಮತ್ತು ಕಚೇರಿಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಅವರು ಅನೇಕ ಮೊಬೈಲ್ ಸಂಖ್ಯೆಗಳಿಂದ ಈ ನಿಟ್ಟಿನಲ್ಲಿ ಹಲವಾರು ಕರೆಗಳು ಮತ್ತು ಸಂದೇಶಗಳನ್ನು ಸಹ ಮಾಡಿದ್ದಾರೆ. ವಾಸ್ತವವಾಗಿ, ನಾನು ಈ ಒಪ್ಪಂದಕ್ಕೆ ಹೋಗಲು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ ವೈಯಕ್ತಿಕ ಭೇಟಿ ಮತ್ತು ನಾನು ಅವರ ಕರೆಗಳು/ಸಂದೇಶಗಳನ್ನು ನಿರ್ಲಕ್ಷಿಸುವ ಮೂಲಕ ಹಲವಾರು ಬಾರಿ ಈ ಒಪ್ಪಂದವನ್ನು ತಪ್ಪಿಸಲು ಪ್ರಯತ್ನಿಸಿದೆ ಎಂದು ಕಪೂರ್ ಚಾರ್ಜ್‌ಶೀಟ್‌ನಲ್ಲಿ ಇಡಿಗೆ ತಿಳಿಸಿದ್ದಾರೆ.

ಈ ಒಪ್ಪಂದವನ್ನು ತಪ್ಪಿಸಲು ನನ್ನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವರು ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸಲು ಭಾರಿ ಪಟ್ಟುಹಿಡಿದರು ಎಂದು ಕಪೂರ್ ಹೇಳಿದ್ದಾರೆ. ನಂತರ, 2010 ರಲ್ಲಿ, ಮುರಳಿ ದಿಯೋರಾ ಅವರು ತನಗೆ ಹೊಸದಿಲ್ಲಿಯ ಲೋಧಿ ಎಸ್ಟೇಟ್ ಬಂಗಲೆಯಲ್ಲಿ (Lodhi Estate Bungalow) ಸಸ್ಯಾಹಾರಿ ಭೋಜನಕ್ಕೆ (ಮಾರ್ವಾಡಿ ಭೋಜನ) ಭೇಟಿಯಾಗುವಂತೆ ಒತ್ತಾಯಿಸಿದರು ಎಂದು ಅವರು ಹೇಳಿದರು. ಅವರು ಆ ಸಮಯದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದರು ಮತ್ತು ಆ ಕಾರಣಕ್ಕೆ ಅವರಿಗೆ ಆ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು ಎಂದು ಕಪೂರ್ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಆ ಭೇಟಿಯ ಸಮಯದಲ್ಲಿ, ಮೇಲೆ ಹೇಳಿದ ಪೇಂಟಿಂಗ್ ಅನ್ನು ಖರೀದಿಸುವಲ್ಲಿ ಯಾವುದೇ ವಿಳಂಬ ಮಾಡಿದಲ್ಲಿ ನನ್ನ ಮೇಲೆ ಮತ್ತು ನನ್ನ ಯೆಸ್ ಬ್ಯಾಂಕ್ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು ಮತ್ತು ಇದು ದಿಯೋರಾ ಕುಟುಂಬದೊಂದಿಗಿನ ನನ್ನ ಸಂಬಂಧಕ್ಕೆ ಧಕ್ಕೆ ತರಬಹುದು ಎಂದು ಮುರಳಿ ದಿಯೋರಾ ಅವರು ನನಗೆ ಪರೋಕ್ಷವಾಗಿ ಹೇಳಿದ್ದರು ಎಂದು ಕಪೂರ್ ಹೇಳಿದ್ದಾರೆ.
 

Follow Us:
Download App:
  • android
  • ios