ಸಂಕಷ್ಟದಲ್ಲಿ ಇನ್ಫೋಸಿಸ್: ಕಾನೂನು ಹೋರಾಟದ ಅನಿವಾರ್ಯತೆ!
ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವ ಇನ್ಫೋಸಿಸ್| ಅಲ್ಪಾವಧಿಯ ಲಾಭ ಪಡೆಯಲು ಸುಳ್ಳು ಮಾಹಿತಿ ಆರೋಪ| ಕಾನೂನು ಹೋರಾಟಕ್ಕೆ ಮುಂದಾದ ಷೇರುದಾರರ ಹಕ್ಕುಗಳ ಸಂಸ್ಥೆ| ಇನ್ಫೋಸಿಸ್ ವಿರುದ್ಧ ದಾವೆ ಹೂಡಲು ಸಜ್ಜಾದ ಲಾಸ್ ಎಂಜಿಲೀಸ್ ಮೂಲದ ಶಾಲ್ ಲಾ ಫರ್ಮ್| ಸಲೀಲ್ ಪರೇಖ್ ವಿರುದ್ಧ ಲೆಕ್ಕ ಪತ್ರಗಳ ಸಮೀಕ್ಷೆ ಮರೆಮಾಚಿದ ಆರೋಪ| 'ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ'| ಷೇರುದಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಶಾಲ್ ಲಾ ಫರ್ಮ್|
ಲಾಸ್ ಏಂಜಲೀಸ್(ಡಿ.13): ಈಗಾಗಲೇ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವ ಇನ್ಫೋಸಿಸ್’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಅಲ್ಪಾವಧಿಯ ಲಾಭವನ್ನು ಪಡೆಯಲು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ, ಲಾಸ್ ಎಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ಸಂಸ್ಥೆ ಇನ್ಫೋಸಿಸ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಇನ್ಫೋಸಿಸ್ ಸಿಇಒ ವಿರುದ್ಧ ಗಂಭೀರ ಆರೋಪ : ಆಡಳಿತ ಮಂಡಳಿಗೆ ಪತ್ರ
ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದು, ಲೆಕ್ಕ ಪತ್ರದ ವಿವರಗಳನ್ನು ಮ್ಯಾನೇಜ್’ಮೆಂಟ್ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ಶಾಲ್ ಲಾ ಫರ್ಮ್ ದೂರಿನಲ್ಲಿ ಉಲ್ಲೇಖಿಸಿದೆ.
ಇದರಿಂದ ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದೂ ಶಾಲ್ ಲಾ ಫರ್ಮ್ ತನ್ನ ದೂರಿನಲ್ಲಿ ತಿಳಿಸಿದೆ.
ದಕ್ಷಿಣದವರನ್ನು‘ ಮದ್ರಾಸಿ’ ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!
ಜುಲೈ 7, 2018 ರಿಂದ ಅಕ್ಟೋಬರ್ 20, 2019 ರವರೆಗೆ ಸೆಕ್ಯೂರಿಟಿಗಳನ್ನು ಖರೀದಿಸಿದ ಹೂಡಿಕೆದಾರರು ಶಾಲ್ ಲಾ ಫರ್ಮ್ ಅನ್ನು ಸಂಪರ್ಕಿಸಬಹುದು ಎಂದು ಕೋರಿದೆ.
ಶಾ ಲಾ ಫರ್ಮ್ ವಿಶ್ವದಾದ್ಯಂತ ಷೇರುದಾರರು ಮತ್ತು ಷೇರುದಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಸ್ಥೆಯಾಗಿದೆ.