ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ: ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಅಂಬಾನಿಗೆ ನಂ.1, ಅದಾನಿಗೆ ನಂ.2 ಸ್ಥಾನ!
ಫೋರ್ಬ್ಸ್ ವಿಶ್ವ ಶ್ರೀಮಂತ ವ್ಯಕ್ತಿಗಳ ಪಟ್ಟಿ ತಯಾರಿಸಿದ್ದು, ಇದರಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ 9.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮೊದಲ ಬಾರಿಗೆ ಅಗ್ರ 10ರ ಒಳಗೆ ಸ್ಥಾನ ಪಡೆದಿದ್ದಾರೆ.
ನವದೆಹಲಿ (ಏ.04): ಫೋರ್ಬ್ಸ್ ವಿಶ್ವ ಶ್ರೀಮಂತ ವ್ಯಕ್ತಿಗಳ ಪಟ್ಟಿ ತಯಾರಿಸಿದ್ದು, ಇದರಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ 9.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮೊದಲ ಬಾರಿಗೆ ಅಗ್ರ 10ರ ಒಳಗೆ ಸ್ಥಾನ ಪಡೆದಿದ್ದಾರೆ. ಅಲ್ಲದೇ ಭಾರತದ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿ ಗಳಿಸಿದ್ದಾರೆ. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ 6.9 ಲಕ್ಷ ಕೋಟಿ ರು. ಮೌಲ್ಯದೊಂದಿಗೆ 17ನೇ ಸ್ಥಾನ ಪಡೆದು, ಭಾರತದ ಎರಡನೇ ಶ್ರೀಮಂತ ಎಂಬ ಗರಿ ಪಡೆದಿದ್ದಾರೆ.
ಕಾಸ್ಮೆಟಿಕ್ಸ್ ಕಂಪನಿ ಎಲ್‌ವಿಎಂಎಚ್ ಮುಖ್ಯಸ್ಥ ಬೆರ್ನಾಲ್ಡ್ ಅರ್ನಾಲ್ಟ್ 18.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಜಾಗತಿಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಎಲಾನ್ ಮಸ್ಕ್ (16.18 ಲಕ್ಷ ಕೋಟಿ ), ಜೆಫ್ ಬೆಜೋಜ್ (16.10 ಲಕ್ಷ ಕೋಟಿ ರು.), ಮಾರ್ಕ್ ಜುಕರ್‌ಬರ್ಗ್ (14.6 ಲಕ್ಷ ಕೋಟಿ ರು.) ಇದ್ದಾರೆ.
ಪೋರ್ಬ್ಸ್ ಪಟ್ಟಿಯ ಪ್ರಕಾರ ಅತ್ಯಂತ ಶ್ರೀಮಂತ ಯಾರು?: ಫ್ರೆಂಚ್ ಉದ್ಯಮಿ ಬೆರ್ನಾಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬ ಅತ್ಯಂತ ಶ್ರೀಮಂತ ಎನಿಸಿದ್ದು, 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದೆ. ಬೆರ್ನಾಡ್ ಅರ್ನಾಲ್ಟ್ ಎಲ್‌ವಿಎಂಹೆಚ್‌ನ ಮುಖ್ಯಸ್ಥರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಎಲಾನ್ ಮಸ್ಕ್ ಅವರಿದ್ದು, ಎಲಾನ್ ಮಸ್ಕ್ ನೆಟ್‌ವರ್ತ್ 195 ಬಿಲಿಯನ್ ಡಾಲರ್, ಹಾಗೆಯೇ ಮೂರನೇ ಸ್ಥಾನದಲ್ಲಿ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರಿದ್ದು, ಅವರ ನಿವ್ವಳ ಮೌಲ್ಯವೂ ಕೂಡ 195 ಬಿಲಿಯನ್ ಡಾಲರ್ ಆಗಿದೆ. ಅವರ ನಂತರದಲ್ಲಿ ಫೇಸ್‌ಬುಕ್ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಇದ್ದು, ಇವರ ನಿವ್ವಳ ಮೌಲ್ಯ 177 ಬಿಲಿಯನ್ ಡಾಲರ್ ಆಗಿದೆ.
12 ದಿನದಲ್ಲಿ ಕೇಜ್ರಿವಾಲ್ ತೂಕ 4.5 ಕೆ.ಜಿ ಇಳಿ: ಸಚಿವೆ ಅತಿಷಿ ಆರೋಪ
ಫಾಕ್ಸ್ ನ್ಯೂಸ್ ಸಂಸ್ಥಾಪಕ ರುಪರ್ಟ್ ಮುರ್ಡೊಕ್ ಹಾಗೂ ಅವರ ಕುಟುಂಬದ ಆಸ್ತಿ ಮೌಲ್ಯ 19.5 ಬಿಲಿಯನ್ ಡಾಲರ್, ಹಾಗೆಯೇ ಡಲ್ಲಾಸ್ ಕೌಬಾಯ್ ಜನರಲ್ ಮ್ಯಾನೇಜರ್ ಹಾಗೂ ಮುಖ್ಯಸ್ಥ ಜೆರ್ರಿ ಜಾನ್ ಆಸ್ತಿ ಮೌಲ್ಯ 13.9 ಬಿಲಿಯನ್ ಡಾಲರ್, ಹಾಗೆಯೇ ಅಮೆರಿಕನ್ ರಾಪರ್ ಜೇ-ಜೆಡ್ ನಿವ್ವಳ ಮೌಲ್ಯ 2.5 ಬಿಲಿಯನ್ ಡಾಲರ್, ಹಾಗೆಯೇ ಅಮೆರಿಕಾ ಮೀಡಿಯಾ ಪರ್ಸನಾಲಿಟಿ ನಟಿ ಕಿಮ್ ಕರ್ದಾಶಿಯನ್ ನಿವ್ವಳ ಮೌಲ್ಯ 1.7 ಆಗಿದೆ. ಹಾಗೆಯೇ ನಟ ಟೈಲರ್ ಸ್ವಿಫ್ಟ್ ನಿವ್ವಳ ಮೌಲ್ಯ 1.1 ಬಿಲಿಯನ್ ಡಾಲರ್.