Asianet Suvarna News Asianet Suvarna News

ಮರ ಏರಿ ಕುಳಿತ ವಲಸೆ ಹಕ್ಕಿಗಳು... ಮನಮೋಹಕ ದೃಶ್ಯ ವೈರಲ್

  • ತಮಿಳುನಾಡಿನ ಪಕ್ಷಿಧಾಮಕ್ಕೆ ಆಗಮಿಸಿದ ವಲಸೆ ಹಕ್ಕಿಗಳು
  • ಮರವೇರಿ ಕುಳಿತ ಮನಮೋಹಕ ದೃಶ್ಯ ವೈರಲ್
  • ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯಕಾವ್ಯ
Flock of birds perch atop trees at Tamil Nadu sanctuary akb
Author
Bangalore, First Published Jan 14, 2022, 8:22 PM IST

ಚೆನ್ನೈ(ಜ.14) : ಇದು ಭಾರತಕ್ಕೆ ವಲಸೆ ಹಕ್ಕಿಗಳ ಆಗಮನದ ಸಮಯ. ತಮಿಳುನಾಡಿನ(Tamil Nadu) ತಿರುನಲ್ವೇಲಿ (Tirunelveli) ಜಿಲ್ಲೆಯ ಕೂಂತಂಕುಲನ್ (Koonthankulan) ಪಕ್ಷಿಧಾಮಕ್ಕೆ ವಲಸೆ ಹಕ್ಕಿಗಳ ಆಗಮನವಾಗಿದ್ದು, ಮರವೇರಿ ಕುಳಿತ ಹಕ್ಕಿಗಳ ಮನಮೋಹಕ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಪಕ್ಷಿಗಳು ಮರಗಳ ಮೇಲೆ ಕುಳಿತಿರುವ ವಿಡಿಯೋವನ್ನು ಡ್ರೋನ್‌ನಿಂದ ಸೆರೆಹಿಡಿಯಲಾಗಿದೆ. ಈ ದೃಶ್ಯವನ್ನು   ಡಿಎಫ್ಒ ಆರ್. ಮುರುಗನ್ (R. Murugan) ಚಿತ್ರೀಕರಿಸಿದ್ದಾರೆ. 

ಇದೀಗ ವೈರಲ್ ಆಗಿರುವ  ಈ ವಿಡಿಯೋದಲ್ಲಿ ತಮಿಳುನಾಡಿನ ಕೂಂತಂಕುಲನ್ ಪಕ್ಷಿಧಾಮದಲ್ಲಿ ವಲಸೆ ಹಕ್ಕಿಗಳ ಹಿಂಡು ಮರಗಳ ಮೇಲೆ ಕುಳಿತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ (IAS officer) ಸುಪ್ರಿಯಾ ಸಾಹು ( Supriya Sahu) ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 

ತಮಿಳುನಾಡಿನಲ್ಲಿ ವಲಸೆ ಹಕ್ಕಿಗಳು ನಮ್ಮ ಪಕ್ಷಿಧಾಮಕ್ಕೆ  ಜೀವಂತಿಕೆಯ ಕಳೆ ನೀಡುವ ವರ್ಷದ ಸಮಯ ಬಂದಿದೆ. ತಿರುನಲ್ವೇಲಿ ಜಿಲ್ಲೆಯ ಕೂಂತಂಕುಲನ್ ಪಕ್ಷಿಧಾಮವು ಈ ರೆಕ್ಕೆ ಇರುವ ಪ್ರವಾಸಿಗರನ್ನು ಸ್ವಾಗತಿಸಲು ಖುಷಿ ಪಡುತ್ತಿದೆ. ಇವುಗಳ ಸುಂದರವಾದ ಮರಿಗಳನ್ನು ನೋಡಲು ವಿಡಿಯೋ ಜೂಮ್ ಮಾಡಿ ಎಂದು ಬರೆದು ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. 

ಫ್ಲೆಮಿಂಗೋ ಹಕ್ಕಿಗಳ ಹೆರಿಗೆ ಕೇಂದ್ರವಾದ Rann of Kutch... ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತ ಮೋಹಕ ದೃಶ್ಯ

ತಮಿಳುನಾಡಿನ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಜನವರಿ 12 ರಂದು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ವೀಡಿಯೊವನ್ನು ಸಾವಿರಾರು ಜನ ಈಗಾಗಲೇ ವೀಕ್ಷಿಸಿದ್ದಾರೆ.  ಈ ವಿಡಿಯೋವನ್ನು ನೆಟ್ಟಿಗರು ಇಷ್ಟ ಪಟ್ಟಿದ್ದು ತುಂಬಾ ಸುಂದರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

No Visa No Passport... ತಮಿಳುನಾಡಿನ ಈ ಪಕ್ಷಿಧಾಮದಲ್ಲಿ ಈಗ ವಿದೇಶಿಯರದ್ದೇ ಕಲರವ...! 

ಇತ್ತೀಚೆಗೆ ತಮಿಳುನಾಡಿನ ಕೊಡಿಯಾಕರೈ ಪಕ್ಷಿಧಾಮದ ವಿಡಿಯೋ ಕೂಡ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಕೂಡ ಸುಪ್ರಿಯಾ ಸಾಹು(Supriya Sahu) ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದರು. ತಮಿಳುನಾಡಿನ ಪಾಯಿಂಟ್ ಕ್ಯಾಲಿಮೆರೆ (ಕೋಡಿಯಾಕರೈ) ವನ್ಯಜೀವಿ ಮತ್ತು ಪಕ್ಷಿಧಾಮವು ಸಾವಿರಾರು ವಲಸೆ ಹಕ್ಕಿಗಳಿಂದ ತುಂಬಿ ತುಳುಕುತ್ತಿದೆ #TNForest ಎಂದು ಐಎಎಸ್ ಅಧಿಕಾರಿ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದರು.

ಅಮೆರಿಕಾ ಖಂಡದಲ್ಲಿ ನಾಲ್ಕು ರೀತಿಯ ಫ್ಲೆಮಿಂಗೊ ಪಕ್ಷಿ ​​ಜಾತಿಗಳು ಕಂಡುಬರುತ್ತವೆ ಮತ್ತು ಇದರ ಇನ್ನೆರಡು ಜಾತಿಯ ಪಕ್ಷಿಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ ಮೂಲದ್ದಾಗಿವೆ. ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮಕ್ಕೆ ಆಗಮಿಸುವ ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಈಗ ಇಳಿಮುಖವಾಗಿದೆ ಎಂದು ವರದಿಯಾಗಿದೆ. ಅಭಯಾರಣ್ಯದಲ್ಲಿರುವ ನೀರಿನಿಂದ ಆವೃತವಾದ ಪ್ರದೇಶಗಳು ಈ ವಲಸೆ ಹಕ್ಕಿಗಳ ಪ್ರಮುಖ ಆಕರ್ಷಣೆಯಾಗಿದೆ. 
 

Follow Us:
Download App:
  • android
  • ios