ಭಾರತ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ, ಪಾಕಿಸ್ತಾನದಿಂದ ಹಾರಿಬಂತು ವಿಮಾನ ಆಕೃತಿ ಬಲೂನ್!

ಪಾಕಿಸ್ತಾನದಿಂದ ಬಲೂನ್ ಭಾರತಕ್ಕೆ ಹಾರಿ ಬಂದಿದೆ. ವಿಮಾನ ಆಕೃತಿಯ ಬಲೂನ್ ಹಾರಿ ಬಂದು ಭಾರತದಲ್ಲಿ ಬಿದ್ದಿದೆ. ಕಳೆದ 35 ದಿನಗಳಲ್ಲಿ ಇದು 3ನೇ ಘಟನೆ. ಇಷ್ಟೇ ಅಲ್ಲ ಮತ್ತೊಂದು ಭದ್ರತಾ ಆತಂಕ ಕಾಡುತ್ತಿದೆ.

Flight shape balloon lands Rajasthan from Pakistan BSF police registered complaint ckm

ಜೈಪುರ(ಡಿ.09) ಭಾರತ ಗಡಿ ಸದಾ ಅಲರ್ಟ್‌ನಲ್ಲಿರುತ್ತದೆ. ಯೋದರು ದಿನದ 24 ಗಂಟೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಇದರ ನಡುವೆ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿ ತೋರಿಸುತ್ತಲೇ ಇರುತ್ತದೆ. ಇದೀಗ ಕಳೆದ  ಕಳೆದ ತಿಂಗಳಿನಿಂದ ಭಾರತದ ಗಡಿ ಹಾಗೂ ಗಡಿ ಪ್ರದೇಶದ ಕೆಲ ಘಟನೆಗಳು ನಡೆಯುತ್ತಿದೆ. ಪಾಕಿಸ್ತಾನದಿಂದ ಬಲೂನ್ ಹಾರಿಬಂದು ಭಾರತದೊಳಗೆ ಬೀಳುತ್ತಿದೆ. ಇದೀಗ ವಿಮಾನ ಆಕೃತಿಯ ಬಲೂನ್ ಭಾರತದ ರಾಜಸ್ಥಾನದ ಬಿಕಾನೆರ್‌ನ ಖಜುವಾಲ ಬಳಿ ಬಿದ್ದಿದೆ. ಕಳೆದ 35 ದಿನಗಳಲ್ಲಿ ಇದು 3ನೇ ಘಟನೆಯಾಗಿದೆ.

2 ಅಡಿ ಉದ್ದದ ಬಲೂನ್ ಭಾರತದ ಗಡಿ ಪ್ರದೇಶದೊಳಗೆ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಬಿಎಸ್ಎಫ್ ಯೋಧರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರು ಹಾಗೂ ಯೋಧರು ಸ್ಥಳಕ್ಕೆ ಧಾವಿಸಿದ್ದಾರೆ. ಬಲೂನ್ ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಸಿದ್ದಾರೆ.

ವಕ್ಫ್ ಆಸ್ತಿ ಮಾತು ಬಿಡಿ, ಈ ರೈಲು ನಿಲ್ದಾಣದ ಪಕ್ಕದ ಸ್ಥಳ ಪಾಕಿಸ್ತಾನ ಪ್ರಧಾನಿ ಆಸ್ತಿ ಎಂದ ಅಧಿಕಾರಿಗಳು!

ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆಟಿಕೆ ಬಲೂನ್ ಅನ್ನೋದು ಪತ್ತೆಯಾಗಿದೆ. ಬಲೂನ್‌ನಲ್ಲಿ ಯಾವುದೇ ರೀತಿಯ ಸ್ಫೋಟಕವಾಗಲಿ, ಮಾದಕ ವಸ್ತುಗಳಾಗಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ. ಗಡಿ ಭಾಗದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಟ ನಡೆಯುತ್ತಿದೆ. ಈ ಬಲೂನ್‌ನಲ್ಲಿ ಈ ರೀತಿಯಾ ಸಾಗಾಟ ನಡೆಸಲಾಗಿದೆಯಾ ಅನ್ನೋದು ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ. ಪದೇ ಪದೇ ಈ ರೀಯ ಬಲೂನ್ ಭಾರತದ ಗಡಿಯಲ್ಲಿ ಪತ್ತೆಯಾಗುತ್ತಿದೆ. ಹೀಗಾಗಿ ಪಾಕಿಸ್ತಾನದಿಂದ ಬಲೂನ್ ಮೂಲಕ ಮಾದಕ ವಸ್ತುಗಳ ಸಾಗಾಟ ನಡೆಯುತ್ತಿದೆ. ಈ ಕುರಿತು ಹಲವು ದೂರುಗಳು ದಾಖಲಾಗಿದೆ. ಇದೀಗ ಈ ಬಲೂನ್ ಘಟನೆಗಳು ಮಾದಕ ವಸ್ತುಗಳ ಸಾಗಾಟದ ಅನುಮಾನ ಹೆಚ್ಚಿಸಿದೆ ಎಂದು ಪೊಲೀಸರು ಹೇಳಿದ್ದಾರೆ. 

ಪಾಕಿಸ್ತಾನದ ಗಡಿ ಪ್ರದೇಶದಲ್ಲಿನ ಜನರು, ಭಯೋತ್ಪಾದಕ ಕ್ಯಾಂಪ್‌ಗಳಲ್ಲಿ ಮಾದಕ ವಸ್ತುಗಳನ್ನು ಬೆಳೆಯಲಾಗುತ್ತದೆ. ಪಾಕಿಸ್ತಾನ ಸೇನಾ ನೆರವವಿನೊಂದಿಗೆ ಈ ಕೆಲಸ ನಡೆಯುತ್ತಿದೆ ಅನ್ನೋ ಆರೋಪ ಇಂದು ನಿನ್ನೆಯದ್ದಲ್ಲ. ಈ ರೀತಿ ಬೆಳೆದ ಮಾದಕ ವಸ್ತುಗಳನ್ನು ಭಾರತದೊಳಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತದೆ. ಡ್ರೋನ್ ಮೂಲಕ, ಬಲೂನ್ ಮೂಲಕ ಸಾಗಟ ಮಾಡಲಾಗುತ್ತದೆ. ಇಷ್ಟೇ ಅಲ್ಲ ಭಾರತದಿಂದ ಪಡೆದ ಹಣದಲ್ಲಿ ಬಳಿಕ ಭಾರತದ ವಿರುದ್ಧವೇ ದಾಳಿ ಸಂಘಟಿಸಲಾಗುತ್ತದೆ. 
 

Latest Videos
Follow Us:
Download App:
  • android
  • ios