Asianet Suvarna News Asianet Suvarna News

ಐವರ ಮೇಲೆ ನಡೆಯಲಿದೆ ಭಾರತದ ಮೊದಲ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ದೇಶಗಳು ಲಸಿಕೆ ಸಂಶೋಧನೆ ನಡೆಸುತ್ತಿದೆ. ಭಾರತ ಕೂಡ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಭಾರತದ ಮೊದಲ ಕೊರೋನಾ ಔಷದ, ಕೊವಾಕ್ಸಿನ್ ಲಸಿಕೆಯನ್ನು ದೆಹಲಿಯ ಐವರು ಸೋಂಕಿತರ ಮೇಲೆ ಪ್ರಯೋಗ ಮಾಡಲಾಗುತ್ತಿದೆ

Five volunteers will be vaccinated first phase of human clinical trials of COVAXIN
Author
Bengaluru, First Published Jul 24, 2020, 6:39 PM IST

ನವದೆಹಲಿ(ಜು.24): ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಆಶಾಕಿರಣವಾಗಿರುವ ಭಾರತದ ಮೊದಲ ಲಸಿಕೆ ಕೊವಾಕ್ಸಿನ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಐವರಿಗೆ ನೀಡಲು ನಿರ್ಧರಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಮುಂದೆ ಬಂದ 5 ಮಂದಿಗೆ ಲಸಿಕೆ ಪ್ರಯೋಗ ಮಾಡಲು ಸಿದ್ಧತೆ ನಡೆದಿದೆ.. ಭಾರತ್ ಬಯೋಟೆಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಜಂಟಿಯಾಗಿ ಈ ಲಸಿಕೆ ಸಂಶೋಧನೆ ಮಾಡಿದೆ.

30 ಸೆಕೆಂಡ್‌ನಲ್ಲಿ ಕೊರೋನಾ ಪರೀಕ್ಷೆ; ಭಾರತ-ಇಸ್ರೇಲ್ ಜಂಟಿಯಾಗಿ ಕಿಟ್ ಅಭಿವೃದ್ದಿ!

ಮೊದಲ ಹಂತದ ಪ್ರಯೋಗಕ್ಕೆ 100 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಯೋಗ ಮಾಡಿದವರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಹಂತದ ಹಂತದ ವರದಿ ತರಿಸಿ ಅಧ್ಯಯನ ನಡೆಯಲಿದೆ.  ಒಟ್ಟು 50 ವಿದಧ ಟೆಸ್ಟ್ ಮಾಡಲಿದ್ದೇವೆ. ಈ ಮೂಲಕ ಒಟ್ಟು 3,500 ಮಂದಿ ಮೇಲೆ ಲಸಿಕೆ ಪ್ರಯೋಗ ಮಾಡಲಿದ್ದೇವೆ ಎಂದು ದೆಹಲಿ ಏಮ್ಸ್ ಆಸ್ಪತ್ರೆಯ ಡಾಕ್ಟರ್ ಸಂಜಯ್ ರೊಯ್ ಹೇಳಿದ್ದಾರೆ.

ನಾಲ್ಕೇ ದಿನದಲ್ಲಿ ಕೊರೋನಾ ಮಂಗಮಾಯ! 'ಧೈರ್ಯವಿದ್ದಷ್ಟು ಬೇಗ ಗುಣಮುಖ

ICMR ಭಾರತದ 12 ಮೆಡಿಕಲ್ ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಈ ಸಂಸ್ಥೆಗಳಲ್ಲಿ ಕೊವ್ಯಾಕ್ಸಿನ್ ಪ್ರಯೋಗ ನಡೆಯಲಿದೆ. ಭಾರತದ ಮೊದಲ ಕೊರೋನಾ ಲಸಿಕೆ ಕೊವಾಕ್ಸಿನ್ ಭರವಸೆ ಮೂಡಿಸಿದ್ದು, ಶೀಘ್ರದಲ್ಲೇ ಪರೀಕ್ಷೆ ಯಶಸ್ವಿಯಾಗಲಿದೆ ಎಂದು ಸಂಜಯ್ ರೊಯ್ ಹೇಳಿದ್ದಾರೆ.

Follow Us:
Download App:
  • android
  • ios