2022 - 23 ರಲ್ಲಿ ಬಾಂಡ್‌ ಮೂಲಕ 325 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದ ಡಿಎಂಕೆ ಈ ಪೈಕಿ ಶೇ. 84 ರಷ್ಟು ಹಣವನ್ನು ವ್ಯಯಿಸಿದೆ. ಅಂತೆಯೇ 181 ಕೋಟಿ ರೂ. ಸ್ವೀಕರಿಸಿದ ಟಿಎಂಸಿ ಶೇ. 97 ರಷ್ಟು, 152 ಕೋಟಿ ರೂ. ಸ್ವೀಕರಿಸಿದ್ದ ಬಿಜೆಡಿ ಶೇ. 70 ರಷ್ಟು, 52 ಕೋಟಿ ರೂ. ಗಳಿಸಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಶೇ. 71 ರಷ್ಟು ಹಣವನ್ನು ಖರ್ಚು ಮಾಡಿವೆ.

ನವದೆಹಲಿ (ಡಿಸೆಂಬರ್ 17, 2023): ಐದು ಪ್ರಾದೇಶಿಕ ಪಕ್ಷಗಳಾದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌), ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಡಿಎಂಕೆ, ಬಿಜು ಜನತಾ ದಳ (ಬಿಜೆಡಿ) ಮತ್ತು ವೈಎಸ್‌ಅರ್‌ ಕಾಂಗ್ರೆಸ್‌ ಪಕ್ಷಗಳು 2022 - 23 ನೇ ಸಾಲಿನಲ್ಲಿ ಒಟ್ಟಾರೆಯಾಗಿ ಚುನಾವಣಾ ಬಾಂಡ್‌ಗಳ ಮೂಲಕ 1,243 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿವೆ.

ಇದು 2021 - 22ನೇ ಸಾಲಿನ ಇದೇ ಪಕ್ಷಗಳ 1,338 ಕೋಟಿ ರೂ.ಗಳಿಗೆ ಹೋಲಿಸಿದರೆ ಕುಸಿತಗೊಂಡಿದೆ. ಈ ಪೈಕಿ ಬಿಆರ್‌ಎಸ್‌ 529 ಕೋಟಿ ದೇಣಿಗೆ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದೆ. 

ಇದನ್ನು ಓದಿ: ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

ಇನ್ನು, 2022 - 23 ರಲ್ಲಿ ಬಾಂಡ್‌ ಮೂಲಕ 325 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದ ಡಿಎಂಕೆ ಈ ಪೈಕಿ ಶೇ. 84 ರಷ್ಟು ಹಣವನ್ನು ವ್ಯಯಿಸಿದೆ. ಅಂತೆಯೇ 181 ಕೋಟಿ ರೂ. ಸ್ವೀಕರಿಸಿದ ಟಿಎಂಸಿ ಶೇ. 97 ರಷ್ಟು, 152 ಕೋಟಿ ರೂ. ಸ್ವೀಕರಿಸಿದ್ದ ಬಿಜೆಡಿ ಶೇ. 70 ರಷ್ಟು, 52 ಕೋಟಿ ರೂ. ಗಳಿಸಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಶೇ. 71 ರಷ್ಟು ಹಣವನ್ನು ಖರ್ಚು ಮಾಡಿವೆ.

ಇನ್ನು, ಇತ್ತೀಚೆಗೆ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಆಮ್‌ ಆದ್ಮಿ ಪಕ್ಷದ ದೇಣಿಗೆ ಮೊತ್ತವು ಒಂದು ವರ್ಷದಲ್ಲಿ 25 ಕೋಟಿ ರೂ. ಗಳಿಂದ 36 ಕೋಟಿಗೆ ಏರಿದೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಕ್ರೌಡ್‌ ಫಂಡಿಂಗ್; ಅಭಿಯಾನಕ್ಕೆ ನಾಳೆ ಚಾಲನೆ