ಇಂದಿನಿಂದ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೋಲಿಯೊ ಲಸಿಕಾ ಅಭಿಯಾನ ಆರಂಭವಾಗಿದ್ದು, 2022 ರ ಮೊದಲ ಉಪ ರಾಷ್ಟ್ರೀಯ ಪ್ರತಿರಕ್ಷಣಾ ದಿನವನ್ನು ಇಂದು ಆಚರಿಸಲಾಗುತ್ತಿದೆ.
ನವದೆಹಲಿ: ಇಂದಿನಿಂದ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೋಲಿಯೊ ಲಸಿಕಾ ಅಭಿಯಾನ ಆರಂಭವಾಗಿದ್ದು, 2022 ರ ಮೊದಲ ಉಪ-ರಾಷ್ಟ್ರೀಯ ಪ್ರತಿರಕ್ಷಣೆ ದಿನವನ್ನು ಇಂದು ಆಚರಿಸಲಾಗುತ್ತಿದೆ. ಬಿಹಾರ (Bihar), ಚಂಡೀಗಢ (Chandigarh), ದೆಹಲಿ (Delhi), ಗುಜರಾತ್ (Gujarat), ಹರಿಯಾಣ (Haryana), ಜಾರ್ಖಂಡ್ (Jharkhand), ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ (Uttarakhand) ಮತ್ತು ಪಶ್ಚಿಮ ಬಂಗಾಳದಲ್ಲಿ (West Bengal) ಈ ಲಸಿಕಾ ಅಭಿಯಾನ ನಡೆಯಲಿದೆ.
ಈ ಪೋಲಿಯೊ ಅಭಿಯಾನದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.9 ಕೋಟಿ ಮಕ್ಕಳಿಗೆ ವಿವಿಧೆಡೆ ನಿರ್ಮಿಸಿದ ಬೂತ್‌ಗಳಲ್ಲಿ ಮನೆ ಮನೆಗೆ ತೆರಳಿ, ಮೊಬೈಲ್ ಮತ್ತು ಟ್ರಾನ್ಸಿಟ್ ತಂಡಗಳ ಮೂಲಕ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ಮಕ್ಕಳಿಗೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸಲು, ಭಾರತ ಸರ್ಕಾರವು ಪೋಲಿಯೊ ವೈರಸ್ ಲಸಿಕೆಯನ್ನು ತನ್ನ ದಿನನಿತ್ಯದ ಪ್ರತಿ ರಕ್ಷಣೆ ಕಾರ್ಯಕ್ರಮದಲ್ಲಿ ಪರಿಚಯಿಸಿದೆ.
Pulse Polio Drive in Karnataka: ಮಗುವಿಗೆ ಲಸಿಕೆ ಹಾಕಿ ಪೋಲಿಯೋ ಅಭಿಯಾನಕ್ಕೆ ಸಿಎಂ ಚಾಲನೆ
ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾ ವಲಯದ ಇತರ 10 ದೇಶಗಳೊಂದಿಗೆ ಭಾರತವನ್ನು ಕೂಡ 27 ಮಾರ್ಚ್ 2014 ರಂದು ಪೋಲಿಯೊ ಮುಕ್ತ ಎಂದು ಘೋಷಣೆ ಮಾಡಿತ್ತು. ದೇಶದಲ್ಲಿ ಕೊನೆಯ ಪೋಲಿಯೊ ಪ್ರಕರಣವು 13 ಜನವರಿ 2011 ರಂದು ಪಶ್ಚಿಮ ಬಂಗಾಳದ (West Bengal) ಹೌರಾದಲ್ಲಿ (Howrah) ಪತ್ತೆಯಾಗಿದೆ. ಜಾಗತಿಕವಾಗಿ, ಪೋಲಿಯೊ ಎರಡು ದೇಶಗಳಾದ ಅಫ್ಘಾನಿಸ್ತಾನ (Afghanistan) ಮತ್ತು ಪಾಕಿಸ್ತಾನದಲ್ಲಿ (Pakistan) ಇನ್ನೂ ಪಿಡುಗಾಗಿಯೇ ಉಳಿದಿದೆ.
30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಪತ್ತೆಯಾಯ್ತು ಪೋಲಿಯೋ !
ಭಾರತವು ಪೋಲಿಯೊ-ಮುಕ್ತ ಎಂದು ಪ್ರಮಾಣೀಕರಿಸಲ್ಪಟ್ಟಿದ್ದರೂ, ಜಾಗತಿಕ ಮಟ್ಟದಲ್ಲಿ ಪೊಲೀಯೋ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಮತ್ತೆ ಪೋಲಿಯೊ ಬರುವ ಅಪಾಯವಿರುತ್ತದೆ. ಹೀಗಾಗಿ ಇದು ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯ ಪ್ರತಿ ರಕ್ಷಣಾ ವ್ಯವಸ್ಥೆ ಮತ್ತು ಸೂಕ್ಷ್ಮ ಕಣ್ಗಾವಲು ಕಾಯ್ದುಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಭಾರತವೂ ತನ್ನ ದೇಶದ ಮಕ್ಕಳನ್ನು ರೋಗಗಳಿಂದ ರಕ್ಷಿಸಲು ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಹೆಚ್ಚುವರಿ ಲಸಿಕೆಗಳನ್ನು ಪರಿಚಯಿಸುವ ಮೂಲಕ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಿಂದ (VPDs) ರಕ್ಷಿಸಲು ಪ್ರಯತ್ನಿಸುತ್ತಿದೆ. ಎಲ್ಲಾ ಲಸಿಕೆಗಳು ದೇಶದ ಕೊನೆಯ ಮಗುವಿನವರೆಗೂ ತಲುಪುವುದು ಮುಖ್ಯವಾಗಿದೆ. ಕಲಿತ ಪಾಠಗಳು ಮತ್ತು ರಾಷ್ಟ್ರೀಯ ಪೋಲಿಯೊ ಕಾರ್ಯಕ್ರಮದ ಅಡಿಯಲ್ಲಿ ರಚಿಸಲಾದ ವ್ಯವಸ್ಥೆಗಳನ್ನು ದಿನನಿತ್ಯದ ಪ್ರತಿರಕ್ಷಣೆಯನ್ನು ಬಲಪಡಿಸಲು ಮತ್ತು 90% ಕ್ಕಿಂತ ಹೆಚ್ಚು ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯನ್ನು ಸಾಧಿಸಲು ಬಳಸಲಾಗುತ್ತಿದೆ.
ರಾಜ್ಯ ಸರ್ಕಾರಗಳು ಮತ್ತು WHO, UNICEF, ರೋಟರಿ ಇಂಟರ್‌ನ್ಯಾಶನಲ್ (Rotary International) ಮತ್ತು ಇತರ ಪಾಲುದಾರರಂತಹ ಸಂಸ್ಥೆಗಳು ಪೋಲಿಯೊ ನಿರ್ಮೂಲನೆಯಲ್ಲಿ ಮಾತ್ರವಲ್ಲದೆ ದಿನನಿತ್ಯದ ರೋಗನಿರೋಧಕ ಕ್ರಮಗಳನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಎಲ್ಲಾ ಪಾಲಕರು ತಮ್ಮ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕಿಸಲು ಒತ್ತಾಯಿಸಲಾಗಿದೆ.
