Pulse Polio Drive in Karnataka: ಮಗುವಿಗೆ ಲಸಿಕೆ ಹಾಕಿ ಪೋಲಿಯೋ ಅಭಿಯಾನಕ್ಕೆ ಸಿಎಂ ಚಾಲನೆ
ಬೆಂಗಳೂರು(ಫೆ.27): ಇಂದು(ಭಾನುವಾರ) ಬೆಂಗಳೂರಿನಲ್ಲಿ(Bengaluru) ಐದು ವರ್ಷದ ಒಳಗಿನ ಮಗುವಿಗೆ ಪೋಲಿಯೋ(Polio) ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಚಾಲನೆ ನೀಡಿದ್ದಾರೆ.
ಇಂದು ರಾಜ್ಯದ 5 ವರ್ಷದೊಳಗಿನ ಅಂದಾಜು 64,77,102 ಮಕ್ಕಳಿಗೆ(Children) ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು ರಾಜ್ಯಾದ್ಯಂತ(Karnataka) ಆಯಕಟ್ಟಿನ ಸ್ಥಳಗಳಲ್ಲಿ 33,223 ಬೂತ್‌ಗಳನ್ನು ರಚಿಸಲಾಗಿದೆ.
ಆರೋಗ್ಯ ಇಲಾಖೆ(Department of Health) ರಾಜ್ಯಾದ್ಯಂತ ಇಂದಿನಿಂದ(ಭಾನುವಾರ) ಪಲ್ಸ್ ಪೋಲಿಯೋ(Pulse Polio) ಲಸಿಕೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. 5 ವರ್ಷದೊಳಗಿನ 64.77 ಲಕ್ಷ ಮಕ್ಕಳಿಗೆ ಪೊಲಿಯೋ ಹನಿ ಹಾಕುವ ಗುರಿ ಹೊಂದಿದೆ. ಕೊರೋನಾ(Coronavirus) ಮೂರನೇ ಅಲೆಯಿಂದಾಗಿ ಅಭಿಯಾನ(Campaign) ಮುಂದೂಡಲಾಗಿತ್ತು. ಭಾನುವಾರ ನಡೆಯಲಿರುವ ಅಭಿಯಾನದಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಅರೋಗ್ಯ ಇಲಾಖೆಯು 1.08 ಲಕ್ಷ ಕಾರ್ಯಕರ್ತರನ್ನು ಬಳಸಿಕೊಂಡು ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ.
ರಾಜ್ಯದ ಎಲ್ಲ ಅಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ 33223 ಬೂತ್‌ಗಳನ್ನು ತೆರೆದಿದೆ. ಮನೆ ಮನೆ ಭೇಟಿಗೆ 45933 ತಂಡಗಳು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಪೋಲಿಯೋ ಹನಿ ಹಾಕಲು 960 ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudakar), ಪಂಚಮಸಾಲಿ ಹರಿಹರ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ(Vachanand Swamiji ಹಾಗೂ ಇತರರು ಉಪಸ್ಥಿತರಿದ್ದರು.