ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಹೆಸರು ಸೂಚಿಸಿದ ಮೋದಿ, ವಿಪಕ್ಷಗಳ ಅನುಮತಿ ಕೋರಿದ ಪ್ರಧಾನಿ!

ಹೊಸ ಸಂಸತ್ ಭವನದ ಮೊದಲ ಅಧಿವೇಶನಕ್ಕೂ ಮೊದಲು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಹಳೇ ಸಂಸತ್ ಭವನದ ಸೆಂಟ್ರಲ್ ಹಾಲ್‌ನ ವಿಶೇಷ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ.

keep our aspirations high surely we can succeed Says PM Modi in Central Hall ckm

ನವದೆಹಲಿ(ಸೆ.19)  ಹೊಸ ಸಂಸತ್ ಭವನದಲ್ಲಿನ ಮೊದಲ ಅಧಿವೇಶನಕ್ಕೂ ಮೊದಲು ಹಳೇ ಸಂಸತ್ ಭವನದ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಸ್ವತಂತ್ರ ಭಾರತದಲ್ಲಿ ಸಂಸತ್, ಸಂವಿಧಾನ, ಪ್ರಜಾಪ್ರಭುತ್ವ, ಸಂಸದರ ಕೊಡುಗೆಯನ್ನು ಸ್ಮರಿಸಿದ್ದಾರೆ. ಇದೇ ವೇಳೆ ಭಾರತ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಭಾಷಣದ ಅಂತ್ಯದಲ್ಲಿ ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಎಂದು ಹೆಸರು ಸೂಚಿಸಿದ್ದಾರೆ. ಈ ಹೆಸರಿಗೆ ವಿಪಕ್ಷಗಳು ಚರ್ಚಿಸಿ ನಿರ್ಧಾರ ತಿಳಿಸಲು ಸೂಚಿಸಿದ್ದಾರೆ.

ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ನಾವು ಹೊಸ ಸಂಸತ್ ಭವನ ಪ್ರವೇಶಿಸುತ್ತಿದ್ದೇವೆ. ನವ ಭಾರತದ ಸಂಕಲ್ಪದೊಂದಿಗೆ ನಾವು ಹೊಸ ಸಂಸತ್ ಭವನದಲ್ಲಿ ಅಧಿವೇಶನಕ್ಕೆ ಮುನ್ನಡಿ ಬರೆಯಲಿದ್ದೇವೆ. ಈ ಸಂಸತ್ ಭವನ ನಮ್ಮ ಕರ್ತವ್ಯಕ್ಕೆ ಪ್ರೇರಣೆ ನೀಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಈ ಸಂಸತ್ ಭವನದಲ್ಲಿ ಹಲವು ಚರ್ಚೆಗಳು, ಮಸೂದೆಗಳನ್ನ ಮಂಡಿಸಿ ಹೊಸ ಕಾನೂನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಇದೇ ಸೆಂಟ್ರಲ್ ಹಾಲ್‌ನಲ್ಲಿ ನಮಗೆ ಬ್ರಿಟಿಷರ್ ಅಧಿಕಾರ ಹಸ್ತಾಂತರಿಸಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ಹಲವು ಸರ್ಕಾರಗಳು, ವಿರೋಧ ಪಕ್ಷಗಳು ಜಂಟಿಯಾಗಿ ಇದೇ ಹಾಲ್‌ನಲ್ಲಿ ಕುಳಿತು ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಪಕ್ಷ ಯಾವುದೇ ಇರಬಹುದು, ನಾವೆಲ್ಲ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ, ಖರ್ಗೆ!

1952ರ ಬಳಿಕ 41 ರಾಷ್ಟ್ರಗಳ ಪ್ರಮುಖರು ನಮ್ಮ ಸಂಸದರನ್ನುದ್ದೇಶಿ ಮಾತನಾಡಿದ್ದಾರೆ. ಇನ್ನು 86 ಬಾರಿ ರಾಷ್ಟ್ರಪತಿ ಸಂಸದರನ್ನುದ್ದೇಶಿ ಮಾತನಾಡಿದ್ದಾರೆ.  ಬರೋಬ್ಬರಿ 4,000 ಕಾನೂನುಗಳು ಈ ಸಂಸತ್ ಭವನದಲ್ಲಿ ಪಾಸ್ ಆಗಿದೆ. ಜಂಟಿ ಅಧಿವೇಶನದ ಮೂಲಕ ಕಾನೂನು ಪಾಸ್ ಆಗಿದೆ. ಉಗ್ರರ ವಿರುದ್ಧ ಹೋರಾಟದ ಬಿಲ್, ತ್ರಿವಳಿ ತಲಾಖ್ ಸೇರಿದಂತೆ ಹಲವು ಕಾನೂನುಗಳಿಗೆ ಇದೇ ಹಾಲ್ ಸಾಕ್ಷಿಯಾಗಿದೆ.  ಮಂಗಳಮುಖಿಯರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಸೌಲಭ್ಯಗಳನ್ನು ನೀಡುವ ಕಾನೂನಿಗೆ ಕೂಡ ಇದೇ ಸೆಂಟ್ರಲ್ ಹಾಲ್‌ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಆರ್ಟಿಕಲ್ 370 ಮುಕ್ತಿ ನೀಡುವ ನಿರ್ಧಾರ, ಉಗ್ರರ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡುವ ಮಹತ್ವದ ನಿರ್ಧಾರಕ್ಕೂ ಈ ಸಂಸತ್ ಭವನ ಸಾಕ್ಷಿಯಾಗಿದೆ.   ಇಂದು ಭಾರತ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಆದರೆ 3ನೇ ಅತೀ ದೊಡ್ಡ ಆರ್ಥಿಕತೆಯಾಗುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ನಾನು ಸಂಪೂರ್ಣ ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ, ಭಾರತ ಖಂಡಿತವಾಗಿ 3ನೇ ಅರ್ಥವ್ಯವಸ್ಥೆಯಾಗಲಿದೆ ಎಂದು ಮೋದಿ ಹೇಲಿದ್ದಾರೆ. 

ಭಾರತದ ಆಡಳಿತ ವ್ಯವಸ್ಥೆ, ಯುಪಿಐ, ಭಾರತದಲ್ಲಿ ತಂತ್ರಜ್ಞಾನ ಬಳಸಿಕೊಂಡು ಯುವ ಸಮೂಹ ಯಾವ ರೀತಿ ಮುನ್ನಡೆಯುತ್ತಿದ್ದಾರೆ ಅನ್ನೋದು ಜಗತ್ತಿಗೆ ಕೌತುಕದ ವಿಷಯವಾಗಿದೆ. ಬ್ರಿಟಿಷರ ಆಡಳಿತದಲ್ಲಿ ಭಾರತದ ಯುವ ಸಮೂಹದ ಕನಸುಗಳನ್ನು ದಮನ ಮಾಡಲಾಗಿತ್ತು. ಆದರೆ ಕಳೆದ ಸಾವಿರ ವರ್ಷಗಳಿಗೆ ಹೋಲಿಸಿದರೆ ಭಾರತದ ಕನಸು ಹಾಗೂ ಆಕಾಂಕ್ಷೆಗಳು ಗಗನೆತ್ತರದಲ್ಲಿದೆ. ಈ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಡುತ್ತಿದೆ ಎಂದು ಮೋದಿ ಹೇಳಿದ್ದಾರೆ. 

ಆತ್ಮನಿರ್ಭರ ಭಾರತ ಸಂಕಲ್ಪದೊಂದಿದೆ ನಾವು ಕೆಲಸ ಮಾಡಬೇಕಿದೆ. ಮೋದಿ ಆತ್ಮನಿರ್ಭರ ಭಾರತ ಪರಿಕಲ್ಪನೆ ಪರಿಚಯಿಸಿದಾಗ ಹಲವು ಅರ್ಥಶಾಸ್ತ್ರಜ್ಞರು, ವಿದೇಶದ ಹಲವರು ಪ್ರಮುಖರು ಇದು ಸಾಧ್ಯವಿಲ್ಲ. ಜಾಗತಿಕ ಆರ್ಥಿಕತೆ ತಿಳಿದಿದೆಯಾ ಎಂದು ಪ್ರಶ್ನಿಸಿದ್ದರು. ಆದರೆ 5 ವರ್ಷದಲ್ಲಿ ಭಾರತ ಹಲವು ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಿದೆ. ರಕ್ಷಣಾ ಕ್ಷೇತ್ರ, ಅಡುಗೆ ಎಣ್ಣೆ, ಉತ್ಪಾದನಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಿದೆ. ಇದೀಗ ಜಗತ್ತು ಆತ್ಮನಿರ್ಭರತೆ ಕುರಿತು ಚರ್ಚೆ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಹೊಸ ಸಂಸತ್ ಭವನದ ಮೊದಲ ಅಧಿವೇಶನಕ್ಕೂ ಮೊದಲು ಲೋಕಸಭಾ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ!

ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಜಿ20 ಶೃಂಗಸಭೆಯಲ್ಲಿ ನಾವು ನಳಂದ ವಿಶ್ವವಿದ್ಯಾಲಯದ ಫೋಟೋ ಹಾಕಲಾಗಿತ್ತು. ಬಲಿಕ ನಾನು ಖುದ್ದು ಗಣ್ಯರಿಗೆ ಶತಶತಮಾನಗಳ ಹಿಂದೆ ನಮ್ಮಲ್ಲಿ ವಿಶ್ವದ ಅತ್ಯುತ್ತಮ ವಿಶಿವಿದ್ಯಾಲವಿತ್ತ ಅನ್ನೋದನ್ನು ಹೇಳಿದ್ದೇನೆ. ಶಿಕ್ಷಣದಲ್ಲಿ ಭಾರತದ ಸಾವಿರಾರು ವರ್ಷಗಳ ಹಿಂದೇ ಪ್ರಭುತ್ವ ಸಾಧಿಸಿತ್ತು. ನಮ್ಮ ಮತ್ತೊಂದು ಸೌಭಾಗ್ಯ ಎಂದರೆ ಅತೀ ಹೆಚ್ಚಿನ ಯುವ ಸಮೂಹ ಹೊಂದಿದೆ ವಿಶ್ವದ ಅಗ್ರ ರಾಷ್ಟ್ರ ಭಾರತ. ಈ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾರತದ ಯುವ ಸಮೂಹದ ವಿಶ್ವದ ಅಗ್ರಗಣ್ಯರಲ್ಲಿ ಕಾಣಿಸಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.

ಹೊಸ ಸದನಕ್ಕೆ ನಾವು ಪಾದಾರ್ಪಣೆ ಮಾಡುತ್ತಿದ್ದೇವೆ. ಈ ಹಳೇ ಸಂಸತ್ ಭವನನ್ನು ಸಂವಿಧಾನ ಸದನ ಎಂಬ ಹೆಸರಿನೊಂದಿಗೆ ಕರೆಯಲು ಇಚ್ಚಿಸುತ್ತೇನೆ. ಇದಕ್ಕೆ ನಿಮ್ಮ ಒಪ್ಪಿಗೆ ಇದ್ದರೆ ಸಹಮತಿ ಸೂಚಿಸಬೇಕು ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಹೊಸ ಪೀಳಿಗೆಗೆ ಈ ಸಂಸತ್ ಭವನ ಕಟ್ಟದ ಇತಿಹಾಸ ತಿಳಿಯಲು ನೆರವಾಗಬೇಕು ಎಂದು ಮೋದಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios