ನವದೆಹಲಿ(ಡಿ.28): ಪಾಕಿಸ್ತಾನ ವಿರುದ್ಧ ಯುದ್ಧ ಮಾತ್ರವಲ್ಲ, ಕ್ರೀಡೆ ಕೂಡ ಭಾರತೀಯರಿಗೆ ಯುದ್ಧದ ರೀತಿ ಇದ್ದಂತೆ. ಹೀಗಾಗಿ ಪಾಕ್ ವಿರುದ್ಧ ಗೆದ್ದ ಕ್ರೀಡಾಪಟುಗಳು, ಕ್ರಿಕೆಟಿಗರು ಹೀರೋಗಳಿದ್ದಂತೆ. ಇನ್ನು ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿದ ಭಾರತೀಯ ಯೋಧರು ನಮಗೆ ಹೀರೋಗಳಿಗಿಂತ ಮಿಗಿಲು. ಆದರೆ ಭಾರತ-ಪಾಕಿಸ್ತಾನ ಮೊದಲ ಯುದ್ಧದಲ್ಲಿ ಬೆಟಾಲಿಯನ್ ಪಡೆ ಮುನ್ನಡೆಸಿ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ಹುತಾತ್ಮರಾದ ಬ್ರಿಗೇಡಿಯರ್ ಉಸ್ಮಾನ್ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಹುತಾತ್ಮ ಯೋಧ ಮನೀಶ್ ಅವರ ಅಂತಿಮ ದರ್ಶನಕ್ಕೆ ಜನಸಾಗರ, ಜೈ ಹಿಂದ್..

ಬ್ರಿಗೇಡಿಯರ್ ಉಸ್ಮಾನ್ ಸಮಾಧಿ ದಕ್ಷಿಣ ದೆಹಲಿಯ ಜಾಮಿಯಾ ಇಸ್ಲಾಮಿಯಾದ ಖಬರಿಸ್ತಾನ ಬಾಟ್ಲಾ ಹೌಸ್ ಬಳಿ ಇದೆ.  50 ಪ್ಯಾರಾಚೂಟ್ ಬ್ರಿಗೇಡ್ ಮುನ್ನಡೆಸಿದ ಕೀರ್ತಿ ಬ್ರಿಗೇಡಿಯರ್ ಉಸ್ಮಾನ್‌ಗಿದೆ. ಇವರಿಗೆ ನೌಶೇರ ಕಾ ಶೇರ್ ಅನ್ನೋ ಬಿರುದು ಕೂಡ ಇದೆ. 1948ರಲ್ಲಿ ಪಾಕಿಸ್ತಾನ ವಶಪಡಿಸಿಕೊಂಡಿದ್ದ ಜಮ್ಮ ಮತ್ತು ಕಾಶ್ಮೀರದ ಭಾಗ ನೌಶೇರಾ ಹಾಗೂ ಜಹಾಂಗರ್  ವಲಯವನ್ನು ಕೈವಶ ಮಾಡಿದ್ದರು. 

18ನೇ ವಯಸ್ಸಿಗೆ ಸೈನಿಕನಾದ, 24ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧ!

ಯುದ್ಧದಲ್ಲಿ ಹುತಾತ್ಮರಾದ ಬ್ರಿಗೇಡಿಯರ್ ಉಸ್ಮಾನ್ ಅಂತ್ಯಸಂಸ್ಕಾರದಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಸೇರಿದಂತೆ ಸಂಪುಟ ಸಚಿವರು ಪಾಲ್ಗೊಂಡು ಗೌರವ ನಮನ ಸಲ್ಲಿಸಿದ್ದರು. ದೇಶದ ಹೀರೋ ಬ್ರಿಗೇಡಿಯರ್ ಉಸ್ಮಾನ್ ಸಮಾಧಿಯನ್ನು ಯಾರೋ ಕೇಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಈ ಸಮಾಧಿ ಸ್ಥಳ ಸರಿಯಾಗಿ ನಿರ್ವಹಣೆ ಕೂಡ ಮಾಡಿಲ್ಲ. ಎರಡೂ ಗೇಟ್‌ ದಿನದ 24 ಗಂಟೆಯೂ ತೆರೆಯುತ್ತಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತ ಸಮಾಧಿ ಸ್ಥಳದ ನಿರ್ವಹಣೆ ಮಾಡುತ್ತಿರುವ ಜಾಮಿಯಾ ಯುನಿವರ್ಸಿಟಿ ಇದಕ್ಕೆ ನಾವು ಕಾರಣರಲ್ಲ ಎಂದಿದೆ. ಸಮಾಧಿ ಸ್ಥಳ ಮಾತ್ರ ನಾವು ನಿರ್ವಹಣೆ ಮಾಡುತ್ತೇವೆ. ಆದರೆ ಪ್ರತಿಯೊಬ್ಬರ ಸಮಾಧಿಯನ್ನು ನಾವು ನಿರ್ವಹಣೆ ಮಾಡುತ್ತಿಲ್ಲ ಎಂದಿದೆ.