ಕರ್ನಾಟಕ್ಕೆ ತೆರಿಗೆ ಅನ್ಯಾಯ ಆರೋಪ, ವಿಶೇಷ ಸಂದರ್ಶನದಲ್ಲಿ ಅಂಕಿ ಅಂಶ ತೆರೆದಿಟ್ಟ ಪ್ರಧಾನಿ ಮೋದಿ!
ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ತೆರಿಗೆ ಅನ್ಯಾಯ ಆರೋಪ ಮಾಡಿದೆ. ನಮ್ಮಿಂದ ಕಸಿದುಕೊಂಡು ಮರಳಿ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣಕ್ಕೆ ಕತ್ತರಿ ಹಾಕಲಾಗುತ್ತಿದೆ ಎಂದು ಆರೋಪಿಸಿದೆ. ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.
ನವದೆಹಲಿ(ಏ.20) ಉತ್ತರ-ದಕ್ಷಿಣ ವಿಭಜನೆ, ಕರ್ನಾಟಕಕ್ಕೆ ತೆರಿಗೆ ಅನ್ಯಾ, ಪ್ರತ್ಯೇಕ ರಾಷ್ಟ್ರದ ಕೂಗು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದಕ್ಷಿಣದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಕೇಂದ್ರದ ಮೇಲೆ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸರ್ಕಾರ, ಕೇಂದ್ರ ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಅನ್ನೋ ಆರೋಪ ಮಾಡಿದೆ. ರಾಜ್ಯದಲ್ಲಿ ಬಹುಪಾಲು ಕಸಿದು, ಉತ್ತರ ರಾಜ್ಯಗಳಿಗೆ ನೀಡಲಾಗುತ್ತಿದೆ. ಕರ್ನಾಟಕದ ಪಾಲಿಗೆ ಕತ್ತರಿ ಹಾಕಲಾಗುತ್ತಿದೆ ಅನ್ನೋ ಆರೋಪ ಮಾಡಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.
ನಾವೆಲ್ಲಾ ಇರೋದು ಭಾರತ ಮಾತೆಯ ಸೇವೆ ಮಾಡೋದಿಕ್ಕೆ. ನಮ್ಮೆಲ್ಲರ ಜವಾಬ್ದಾರಿ ಇರೋದು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ. ದೇಶ 140 ಕೋಟಿ ಜನರ ಜವಾಬ್ದಾರಿ ನಮ್ಮದು. ವ್ಯವಸ್ಥೆಯಲ್ಲಿ ಬೇರೆ ಬೇರೆ ಜನರಿಗೆ ಬೇರೆ ಬೇರೆ ಕೆಲಸ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ. ನಮ್ಮೆಲ್ಲರ ಗುರಿ ಏನಾಗಬೇಕು ಅಂದ್ರೆ, ಕೇರಳದ ಯಾವುದೋ ಒಂದು ಹಳ್ಳಿಯ ವ್ಯಕ್ತಿಗೆ ಯೋಜನೆಗಳ ಲಾಭ ಸಿಗುವಂತಿದ್ದರೆ ಅದು ಸಿಗುವಂತೆ ನೋಡಿಕೊಳ್ಳೋದು. ಕರ್ನಾಟಕದ ವ್ಯಕ್ತಿಗೆ ಯಾವುದಾದರೂ ವ್ಯಕ್ತಿಗೆ ಲಾಭ ಸಿಗಬೇಕಿದ್ರೆ ಅದು ಸಿಗಲೇಬೇಕು. ಇದು ಸಂವಿಧಾನದ ಮೂಲ ಉದ್ದೇಶ. ನೀವು ನನಗೆ ಹೇಳಿ.. ಹಿಮಾಲಯದಿಂದ ನದಿಗಳು ಹರಿಯುತ್ತವೆ. ಹಿಮಾಲಯದ ರಾಜ್ಯಗಳು ನಮ್ಮ ನೀರನ್ನ ಯಾರೂ ಬಳಸುವಂತಿಲ್ಲ ಎಂದು ಹೇಳಿದ್ರೆ, ದೇಶವನ್ನ ನಡೆಸೋಕೆ ಆಗುತ್ತಾ? ಕಲ್ಲಿದ್ದಲು ಗಣಿಗಳಿರುವ ರಾಜ್ಯಗಳು. ನಾವು ಕಲ್ಲಿದ್ದಲ್ಲನ್ನ ಹೊರಗೆ ಕೊಡೋದಿಲ್ಲ ಅಂದ್ರೆ. ಬೇರೆ ರಾಜ್ಯಗಳು ಕತ್ತಲಲ್ಲಿ ಮುಳುಗಬೇಕಾಗುತ್ತೆ. ಈ ರೀತಿ ಯೋಚಿಸೋಕೆ ಆಗಲ್ಲ. ಈ ಸಂಪತ್ತು ದೇಶದ್ದು. ಯಾರೂ ಕೂಡ ಇದರ ಮಾಲೀಕರಲ್ಲ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.
Exclusive ಕರ್ನಾಟಕ ಬರ ಪರಿಹಾರ, ತೆರಿಗೆ ಅನ್ಯಾಯ; ಏಷ್ಯಾನೆಟ್ ಸುವರ್ಣನ್ಯೂಸ್ ಸಂದರ್ಶನದಲ್ಲಿ ಮೋದಿ ಉತ್ತರ!
ಈ ವ್ಯವಸ್ಥೆ ಸಂವಿಧಾನದ ನಿಯಮದಂತೆ ನಡೆಯುತ್ತೆ. ಯಾವುದೇ ಸರ್ಕಾರದ ಅಣತಿಯಂತೆ ನಡೆಯಲ್ಲ. 14ನೇ ಹಣಕಾಸು ಆಯೋಗ ಎಂಥಾ ಕಠಿಣ ನಿರ್ಧಾರ ತೆಗೆದುಕೊಳ್ತು ಅಂದ್ರೆ, ಮೊದಲು 32 ಪರ್ಸೆಂಟ್ ಹಣ ಹಂಚಿಕೆ ಮಾಡಲಾಗ್ತಿತ್ತು. ಅದನ್ನ 42 ಪರ್ಸೆಂಟ್ಗೆ ಏರಿಕೆ ಮಾಡಿದ್ರು. ನನ್ನ ಮೇಲೆ ಒತ್ತಡ ಬಿತ್ತು, ಆದರೂ 42 ಪರ್ಸೆಂಟ್ ನೀಡಲೇ ಬೇಕಾಯ್ತು.. ದೇಶ ನಡೆಯಲೇ ಬೇಕು. ಇಲ್ಲಾಂದ್ರೆ ಸರ್ಕಾರ ವಿಫಲವಾಗುತ್ತಿತ್ತು. ಇಷ್ಟಾದ್ರೂ ಸರ್ಕಾರಕ್ಕೆ ಅಧಿಕಾರವಿತ್ತು. ಅದರಲ್ಲಿ ಹೆಚ್ಚೂ ಕಡಿಮೆ ಮಾಡುವ ಅಧಿಕಾರ ಪಾರ್ಲಿಮೆಂಟ್ಗೆ ಇತ್ತು. ನನಗೆ ಆಗ ಅನ್ನಿಸ್ತು.. ತುಂಬಾ ಕಷ್ಟವಾಗುತ್ತೆ ಈ ರೀತಿ ಹಂಚಿಕೆ ಮಾಡಿದ್ರೆ.. ಸರ್ಕಾರ ನಡೆಸೋದೆ ಕಷ್ಟವಾಗುತ್ತೆ ಎಂದು ಅನಿಸಿತು. ಆದ್ರೆ ನಾನು ಹೆದರಲಿಲ್ಲ. ರಾಜ್ಯಗಳ ಮೇಲೆ ನನಗೆ ಭರವಸೆ ಇತ್ತು. ರಾಜ್ಯಗಳಿಗೆ ಹಣ ಕೊಟ್ಟರೆ ಅವರು ಅಭಿವೃದ್ಧಿ ಕೆಲಸ ಮಾಡ್ತಾರೆ. 14ನೇ ಹಣಕಾಸು ಆಯೋಗ ಹೇಳಿದಂತೆ 32 ರಿಂದ 42 ಪರ್ಸೆಂಟ್ ಏರಿಕೆಯನ್ನ ಅವರು ಹೇಗೆ ಹೇಳಿದ್ರೋ ಹಾಗೇ ಅದನ್ನ ಸ್ವೀಕಾರ ಮಾಡಿದ್ದೇವೆ ಎಂದು ಮೋದಿ ಹೇಲಿದ್ದಾರೆ.
ಅದೇ ಯುಪಿಎ ಕಾಲಘಟ್ಟದಲ್ಲಿ, ಮನಮೋಹನ್ ಸಿಂಗ್ ಸರ್ಕಾರ... ರಿಮೋಟ್ ಕಂಟ್ರೋಲ್ ಸರ್ಕಾರ ನಡೀತಿತ್ತು. ಆಗ ಕರ್ನಾಟಕಕ್ಕೆ ಕೇಂದ್ರದ ಪಾಲಿನಲ್ಲಿ 10 ವರ್ಷದಲ್ಲಿ 80 ಸಾವಿರ ಕೋಟಿ ಸಿಕ್ಕಿತ್ತು. ನಮ್ಮ ಸರ್ಕಾರ ಹೆಚ್ಚೂ ಕಡಿಮೆ 3 ಲಕ್ಷ ಕೋಟಿ ಕೊಟ್ಟಿದ್ದೇವೆ. ಕೇರಳಕ್ಕೆ ಯುಪಿಎ ಸಮಯದಲ್ಲಿ 46 ಸಾವಿರ ಕೋಟಿ ನೀಡಿದ್ರು. ನಮ್ಮ ಸರ್ಕಾರ 1.5 ಲಕ್ಷ ಕೋಟಿ ನೀಡಿದ್ದೇವೆ. ತಮಿಳುನಾಡಿಗೆ ಯುಪಿಎ ಸರ್ಕಾರ 95 ಸಾವಿರ ಕೋಟಿ ನೀಡಲಾಗಿತ್ತು. ಆ ಸರ್ಕಾರದಲ್ಲಿ ಅವರೇ ಪಾಲುದಾರರಾಗಿದ್ರು. ಕೇರಳದವರು ಕೂಡ ದೆಹಲಿಯಲ್ಲಿ ಸರ್ಕಾರದಲ್ಲಿದ್ರು. ಆ ಸಮಯದಲ್ಲಿ ತಮಿಳುನಾಡಿಗೆ 95 ಸಾವಿರ ಕೋಟಿ ಸಿಕ್ಕಿತ್ತು. ಈಗ ಅವರಿಗೆ ಸುಮಾರು 3 ಲಕ್ಷ ಕೋಟಿ ಅಂದ್ರೆ 2 ಲಕ್ಷದ 90 ಸಾವಿರ ಕೋಟಿ ತಮಿಳುನಾಡಿಗೆ ಸಿಕ್ಕಿದೆ ಎಂದಿದ್ದಾರೆ.
ಈಗ ಎಂಥೆಂಥಾ ಸುಳ್ಳು ಹಬ್ಬಿಸುತ್ತಿದ್ದಾರೆ. ಸ್ವಾರ್ಥ ರಾಜಕಾರಣಕ್ಕೆ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ. ದೌರ್ಭಾಗ್ಯ ಅಂದ್ರೆ ಕಾಂಗ್ರೆಸ್ ಕೂಡ ಇಂತಾ ಜನರ ಜತೆಗೆ ನಿಂತಿದೆ. ಒಂದು ರಾಷ್ಟ್ರೀಯ ಪಕ್ಷವಾಗಿ 5-6 ದಶಕಗಳ ಕಾಲ ದೇಶವನ್ನ ನಡೆಸಿ ಕಾಂಗ್ರೆಸ್ ಇಂಥಾ ಕೊಳಕು ಮನಸ್ಥಿತಿಗೆ ಬಂದಿದೆ ಎಂದಿದ್ದಾರೆ.
ತ್ರಿಪುರ ಬದಲಾಗಿದೆ, ಕೇರಳ ಬದಲಾವಣೆಯತ್ತ ದಾಪುಗಾಲಿಡುತ್ತಿದೆ, ಸಂದರ್ಶನದಲ್ಲಿ ಮೋದಿ ನೀಡಿದ್ರು ಸುಳಿವು!
ಮಾತು ಮುಂದುವರಿಸಿದ ಮೋದಿ, ಉತ್ತರ ಹಾಗೂ ದಕ್ಷಿಣ ವಿಭಜನೆ ಚರ್ಚೆ ಕುರಿತು ಕರ್ನಾಟಕ ಸಂಸದ ಡಿಕೆ ಸುರೇಶ್ ಹೇಳಿಕೆ ಕುರಿತು ಮೋದಿ ಮಾತನಾಡಿದ್ದಾರೆ. ದೇಶದ ರಾಜಕೀಯ ಪಕ್ಷಗಳು ಸಂವಿಧಾನಕ್ಕೆ ತಮ್ಮನ್ನ ಮೊದಲು ಸಮರ್ಪಿಸಿಕೊಳ್ಳಬೇಕು. ಭಾರತದ ಸಂವಿಧಾನ ನಮಗೆ ಏಕತೆ ಹಾಗೂ ಅಖಂಡತೆಯ ಜವಾಬ್ದಾರಿ ನೀಡಿದೆ. ಯಾರಾದ್ರೂ ಇಂಥ ಪ್ರವೃತ್ತಿ ಮಾಡಿದ್ರೆ, ಅಂತಹ ರಾಜಕೀಯ ಪಕ್ಷಗಳೇ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಏನೋ ಮಾತಾಡ್ವಾಗ ಹೇಳಿದ್ದಾರೆ ಅನ್ನೋದಿದ್ಯಲ್ಲ, ಈ ಬೀಜ ಇದ್ಯಲ್ಲ... ತಮ್ಮ ಕೈಯಿಂದಲೇ ನೀರು ಹಾಕಿ ಬೆಳೆಸಿ ಯಾವಾಗ ವಟವೃಕ್ಷವಾಗುತ್ತೆ ಅಂತ ಗೊತ್ತಾಗೋದಿಲ್ಲ. ಇಂಥಾ ಸ್ವಾರ್ಥದ ಮಾತುಗಳು ಹಾಗೂ ಇಂಥಾ ಭಾಷೆಯಿಂದ ನಾವು ರಕ್ಷಿಸಿಕೊಳ್ಳಬೇಕಿದೆ. ಇಂಥಾ ಮಾತುಗಳಿಂದ ದೇಶಕ್ಕೆ ಕೆಟ್ಟದು.. ಯಾವುದೇ ಸರ್ಕಾರ ಇರಲಿ ಇಂಥಾ ಮಾತುಗಳಿಂದ ಲಾಭವಾಗಲ್ಲ ಎಂದಿದ್ದಾರೆ.
ನಾನು ಗುಜರಾತ್ನಲ್ಲಿದ್ದಾಗ ಕೇಂದ್ರ ಸರ್ಕಾರದಿಂದ ನನಗೆ ಸಾಕಷ್ಟು ಅನ್ಯಾಯಗಳಾದವು, ಪ್ರತಿಯೊಂದರಲ್ಲೂ ಅನ್ಯಾಯ ಮಾಡಿದ್ರು. ಆದ್ರೆ ನನ್ನದು ಒಂದೇ ಮಂತ್ರ ಇದ್ದಿದ್ದು ಬಹಿರಂಗವಾಗಿ.. ಭಾರತದ ವಿಕಾಸಕ್ಕಾಗಿ ಗುಜರಾತ್ನ ವಿಕಾಸ್. ನಾವೆಲ್ಲಾ ಒಟ್ಟಾಗಿ ದೇಶವನ್ನ ಮುಂದೆ ತರಬೇಕು. ಇದರಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಮೋದಿ ಹೇಳಿದ್ದಾರೆ.