2 ತ್ರಿಡಿ ಮನೆಗಳ ನಿರ್ಮಿಸಿದ ಭಾರತೀಯ ಸೇನೆ ಗುಜರಾತ್‌ನಲ್ಲಿ ಮೊದಲ ತ್ರಿಡಿ ಮನೆಗಳ ಉದ್ಘಾಟನೆ ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ವಿಭಾಗದಿಂದ ನಿರ್ಮಾಣ

ಗುಜರಾತ್‌ನಲ್ಲಿ ಭಾರತೀಯ ಸೇನೆ ಜವಾನರಿಗಾಗಿ ಮೊದಲ 3D ಮನೆಗಳನ್ನು ನಿರ್ಮಿಸಿದೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಸೌತ್ ವೆಸ್ಟರ್ನ್ ಏರ್ ಕಮಾಂಡ್‌ನಲ್ಲಿ ಮೊಟ್ಟಮೊದಲ 3ಡಿ-ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಹೆಂಚು, ಮುಳಿಹುಲ್ಲು, ಮಾಡಿನ ಮನೆಗಳ ಕಾಲ ಹೋಗಿ ಎಷ್ಟು ಕಾಲಗಳಾಗಿದೆ. ಈಗ ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ಮನೆಗಳು, ಅದರಲ್ಲೂ ಈಗ ತ್ರಿಡಿ ತಂತ್ರಜ್ಞಾನದ ಯುಗವಿದು. ಚಿತ್ರಗಳಲ್ಲಿ, ಸಿನಿಮಾಗಳಲ್ಲಿ ನೀವು ತ್ರಿಡಿ ತಂತ್ರಜ್ಞಾನವನ್ನು ನೋಡಿರಬಹುದು. ಆದರೆ ಈಗ ಮನೆಗಳಿಗೂ ತ್ರಿಡಿ ತಂತ್ರಜ್ಞಾನ ಕಾಲಿಟ್ಟಿದೆ. ಹೌದು ಈಗ ಭಾರತೀಯ ಸೇನೆಯು ಇತ್ತೀಚೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಿಬ್ಬಂದಿಗೆ ಎರಡು ಮನೆಗಳನ್ನು ನಿರ್ಮಿಸಿದೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಸೌತ್ ವೆಸ್ಟರ್ನ್ ಏರ್ ಕಮಾಂಡ್‌ನಲ್ಲಿ ಮೊಟ್ಟಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ.

ಭಾರತೀಯ ಸೇನೆಯ (Indian Army) ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು (MES) ಎರಡು ಮನೆಗಳನ್ನು ನಿರ್ಮಿಸಲು ನಾಲ್ಕು ವಾರಗಳನ್ನು ತೆಗೆದುಕೊಂಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇಂಜಿನಿಯರ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ( Harpal Singh) ಅವರ ಉಪಸ್ಥಿತಿಯಲ್ಲಿ ಈ 3ಡಿ ಮುದ್ರಿತ ಮನೆಗಳನ್ನು ಉದ್ಘಾಟಿಸಲಾಯಿತು.ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು 3D ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ನಾಲ್ಕು ವಾರಗಳಲ್ಲಿ ಎರಡು ಮನೆಗಳನ್ನು ನಿರ್ಮಿಸಿವೆ. ಭಾರತೀಯ ಸೇನೆಯು ಹೊಸದಾಗಿ ನಿರ್ಮಿಸಲಾದ ಈ ಕ್ವಾರ್ಟರ್ಸ್‌ನ ಅದ್ಭುತ ಫೋಟೋಗಳನ್ನು ವೀಡಿಯೊದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Scroll to load tweet…
Scroll to load tweet…

3ಡಿ ಪ್ರಿಂಟಿಂಗ್ ಪ್ರಕ್ರಿಯೆಯೊಂದಿಗೆ ಮನೆಗಳ ನಿರ್ಮಾಣವನ್ನು ಹೇಗೆ ಕೈಗೊಳ್ಳಲಾಗಿದೆ ಎಂಬುದರ ವೇಗದ ಆವೃತ್ತಿಯನ್ನು ವೀಡಿಯೊ ತೋರಿಸಿದೆ. ಮೊದಲಿಗೆ, ಅಡಿಪಾಯವನ್ನು ಹಾಕಲಾಯಿತು. ನಂತರ ಬೃಹತ್ 3D ಮುದ್ರಕಗಳನ್ನು ಬಳಸಿ ಮಾಡಿದ ಗೋಡೆಗಳನ್ನು ಇರಿಸಲಾಯಿತು. ಎಲ್ಲವನ್ನೂ ಒಟ್ಟಿಗೆ ಜೋಡಿಸಿ ನಂತರ ಅಂತಿಮ ಸ್ಪರ್ಶ ನೀಡಲಾಯಿತು. ವೀಡಿಯೊದಲ್ಲಿ ಮನೆಗಳ ಒಳಭಾಗವನ್ನು ಸಹ ತೋರಿಸಲಾಗಿದೆ. 

Ram Mandir: ಮಂದಿರ ನಿರ್ಮಾಣದ 3D ವಿಡಿಯೋ ಬಿಡುಗಡೆ, ಹೀಗಿದೆ ರಾಮಲಲ್ಲಾನ ದೇಗುಲ!
ಕಂಪ್ಯೂಟರ್‌ ನೆರವಿನಿಂದ ಪ್ರಿಂಟರ್‌ ಮೂಲಕ ಸಿಂಚನಗೊಂಡ ಶಾಯಿ ಬಿಂದುಗಳು ಚಿತ್ರ ಅಥವಾ ಪತ್ರವನ್ನು ಹಾಳೆಯ ಮೇಲೆ ಮೂಡಿಸುವ ಹಾಗೆ, ಪ್ಲಾಸ್ಟಿಕ್‌ ಅಥವಾ ಲೋಹದ ಬಿಂದುಗಳನ್ನು ಸಿಂಚನ ಮಾಡಿ ಒಂದೊಂದೇ ಪದರದಂತೆ ಮೂರು ಆಯಾಮಗಳಲ್ಲಿ ನಿರ್ದಿಷ್ಟ ಆಕಾರ ಹಾಗೂ ವಿನ್ಯಾಸಗಳಲ್ಲಿ ಬಿಡಿಭಾಗಗಳನ್ನು ರೂಪಿಸುವ ಕಲೆಯೇ ಈ 3ಡಿ ತಂತ್ರಜ್ಞಾನ. ಉತ್ಪಾದನೆ, ಕೈಗಾರಿಕಾ ವಿನ್ಯಾಸ, ಆಭರಣ, ಪಾದರಕ್ಷೆಗಳು, ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ನಿರ್ಮಾಣ, ಆಟೊಮೋಟಿವ್, ಏರೋಸ್ಪೇಸ್, ದಂತ ಮತ್ತು ವೈದ್ಯಕೀಯ ಕೈಗಾರಿಕೆಗಳು, ಶಿಕ್ಷಣ, ಭೌಗೋಳಿಕ ಮಾಹಿತಿ ವ್ಯವಸ್ಥೆಗಳು, ಸಿವಿಲ್ ಎಂಜಿನಿಯರಿಂಗ್ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ 3ಡಿ ಮುದ್ರಣವು ಉಪಯುಕ್ತವಾಗಿದ್ದು, ಬಹು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ.

3D Printed Space Planes: ಹೈಡ್ರೋಜನ್ ಎಂಜಿನ್, ಶೂನ್ಯ ಇಂಗಾಲ: ಉಪಗ್ರಹ ಉಡಾವಣೆಗೆ ಹೊಸ ತಂತ್ರಜ್ಞಾನ!