3D Printed Space Planes: ಹೈಡ್ರೋಜನ್ ಎಂಜಿನ್, ಶೂನ್ಯ ಇಂಗಾಲ: ಉಪಗ್ರಹ ಉಡಾವಣೆಗೆ ಹೊಸ ತಂತ್ರಜ್ಞಾನ!

ಹಸಿರು ಇಂಧನವನ್ನು ಬಳಸುವ ಮತ್ತು 3D ಮುದ್ರಿತ ವಸ್ತುಗಳಿಂದ ಮಾಡಲ್ಪಟ್ಟ ಶಬ್ದದ ವೇಗಕ್ಕಿಂತ ಸ್ಪೀಡಾಗಿ ಹಾರುವ ಸ್ಪೇಸ್ ಪ್ಲೇನನ್ನು (Space Plane) ಆಸ್ಟ್ರೇಲಿಯನ್ ಸ್ಟಾರ್ಟ್‌ಅಪ್ ಸಿದ್ಧಪಡಿಸುತ್ತಿದೆ.

3D printed space planes with Hydrogen engine and no carbon emissions may soon take satellites to orbit mnj

Tech Desk: ಉಪಗ್ರಹಗಳನ್ನು (Satellites) ಭೂಮಿಯ ಕಕ್ಷೆಗೆ ತಲುಪಿಸಲು ಸಾಂಪ್ರದಾಯಿಕವಾಗಿ ಲಾಂಚ್‌ಪ್ಯಾಡ್‌ನಿಂದ ಲಂಬವಾಗಿ ( vertically) ಹಾರುವ ದೊಡ್ಡ ರಾಕೆಟ್‌ಗಳನ್ನು ಬಳಸಲಾಗುತ್ತದೆ. ಆದರೆ ಆಸ್ಟ್ರೇಲಿಯನ್ ಏರೋಸ್ಪೇಸ್ ಇಂಜಿನಿಯರಿಂಗ್ ಸ್ಟಾರ್ಟ್‌ಅಪ್ ಹೈಪರ್‌ಸೋನಿಕ್ಸ್ ಲಾಂಚ್ ಸಿಸ್ಟಮ್ಸ್ (Hypersonix Launch Systems) ಈಗ ಹೊಸ ತಂತ್ರಜ್ಞಾನವೊಂದನ್ನು ಪರೀಕ್ಷಿಸುತ್ತಿದೆ. ಹಸಿರು ಇಂಧನವನ್ನು ಬಳಸುವ ಮತ್ತು 3D ಮುದ್ರಿತ ವಸ್ತುಗಳಿಂದ ಮಾಡಲ್ಪಟ್ಟ ಶಬ್ದದ ವೇಗಕ್ಕಿಂತ ಸ್ಪೀಡ್‌ ಆಗಿ ಹಾರು ಸ್ಪೇಸ್ ಪ್ಲೇನನ್ನು (Space Plane) ಈ ಸ್ಟಾರ್ಟ್‌ಅಪ್  ಸಿದ್ಧಪಡಿಸುತ್ತಿದೆ.

ಡೆಲ್ಟಾ ವೆಲೋಸ್ ( Delta Velos) ಎಂದು ಕರೆಯಲ್ಪಡುವ ಈ ಬಾಹ್ಯಾಕಾಶ ವಾಹನವನ್ನು ಸಿಡ್ನಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಸಂಸ್ಥೆಯು ತಯಾರಿಸುತ್ತಿದೆ. ಇಂಥಹ ವಿಮಾನದ ಉತ್ಪಾದನೆ ಮತ್ತು ಪರೀಕ್ಷೆಯನ್ನು ಪ್ರಸ್ತುತ ಸಿಡ್ನಿ ವಿಶ್ವವಿದ್ಯಾನಿಲಯದ ಡಾರ್ಲಿಂಗ್ಟನ್ ಕ್ಯಾಂಪಸ್‌ನ ಎಂಜಿನಿಯರಿಂಗ್ ಆವರಣದಲ್ಲಿ ನಡೆಸಲಾಗುತ್ತಿದೆ. 

ಇದನ್ನೂ ಓದಿ: Cryogenic Engine Test: ಮಾನವಸಹಿತ ಗಗನಯಾನದ ಎಂಜಿನ್‌ ಪರೀಕ್ಷೆ ಯಶಸ್ವಿ!

ಶೂನ್ಯ ಇಂಗಾಲದ ಹೊರಸೂಸುವಿಕೆ: ಈ ಪರೀಕ್ಷೆಗಳು ಯಶಸ್ವಿಯಾದರೆ,  ಬಾಹ್ಯಾಕಾಶ ಯಾನದಲ್ಲಿನ ಎರಡು ದೊಡ್ಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೊಸ ಮೈಲುಗಲ್ಲು ಸಾಧಿಸಲಿದೆ. ಒಂದು, ಇದು ರಾಕೆಟ್ ಟೇಕ್-ಆಫ್ ಸಮಯದಲ್ಲಿ ಉತ್ಪತ್ತಿಯಾಗುವ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಎರಡನೆಯದಾಗಿ, ಇದು ಆವರ್ತಕ ಕೋಷ್ಟಕದಲ್ಲಿ (periodic table) ವಿವಿಧ ವಸ್ತುಗಳನ್ನು ಬಳಸುವುದರ ಜೊತೆಗೆ ಅವುಗಳ ಬಳಕೆಗಾಗಿ ಹೊಸ ತಂತ್ರಗಳ ಮೂಲಕ ಉತ್ಪಾದನಾ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. 

ಈ ತಂತ್ರಜ್ಞಾನದ ನಿರ್ಮಾಣಕ್ಕಾಗಿ, ಸಿಡ್ನಿ ವಿಶ್ವವಿದ್ಯಾಲಯದ ಪ್ರೊಫೆಸರ್ ಸೈಮನ್ ರಿಂಗರ್ ನೇತೃತ್ವದ ಎಂಜಿನಿಯರಿಂಗ್ ತಂಡವು ಪ್ರಾರಂಭದಲ್ಲಿ ಸಹಾಯ ಮಾಡಲಿದೆ. ತಂಡವು ಸುಧಾರಿತ 3D ಪ್ರಿಂಟರ್‌ಗಳನ್ನು ಬಳಸಿಕೊಂಡು ಡೆಲ್ಟಾ ವ್ಯಾಲಿಡ್‌ಗಾಗಿ (ಸುರಕ್ಷಿತ ಪ್ರಯಾಣ) ಫ್ಯೂಸ್ಲೇಜ್ ಮತ್ತು ಸ್ಕ್ರಾಮ್‌ಜೆಟ್ ಎಂಜಿನ್‌ಗಾಗಿ ಭಾಗಗಳನ್ನು ಉತ್ಪಾದಿಸುತ್ತದೆ. ಇದು ಆವರ್ತಕ ಕೋಷ್ಟಕದಿಂದ ಹೊಸ ಮಿಶ್ರಲೋಹಗಳಿಗೆ ವಿಭಿನ್ನ ಅಂಶಗಳ ಸಂಯೋಜನೆಯನ್ನು ಅನುಮತಿಸುವ ಜತೆಗೆ ಪ್ರಿಂಟರ್‌ಗಳು ಸಂಯೋಜಕ ಉತ್ಪಾದನಾ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತವೆ.

ಇದನ್ನೂ ಓದಿ: ISRO Chairman : ಇಸ್ರೋ ಮುನ್ನಡೆಸಲಿದ್ದಾರೆ ಸೋಮನಾಥ್, ರಾಕೆಟ್ ವಿಜ್ಞಾನಿಗೆ ದೊಡ್ಡ ಜವಾಬ್ದಾರಿ

3D Printed: 'ಮೆಟಲರ್ಜಿಕಲ್ ವಸ್ತುಗಳನ್ನು ತಯಾರಿಸಲು ಇದು ಸಂಪೂರ್ಣವಾಗಿ ಹೊಸ ವಿಧಾನವಾಗಿದೆ. ಇದು ಫೌಂಡರಿಗಿಂತ (ಸಾಂಪ್ರದಾಯಿಕ ಲೋಹದ ಉತ್ಪಾದನೆ) ಭಿನ್ನವಾಗಿದೆ, ಇದು ಉಕ್ಕಿನ ಸ್ಥಾವರದಲ್ಲಿ ನಡೆಯುವ ಸಂಗತಿಗಳಿಗಿಂತ ಭಿನ್ನವಾಗಿದೆ. ನಾವು ಹಿಂದೆಂದೂ ಮಾಡಲು ಸಾಧ್ಯವಾಗದಂತಹ ಆಕಾರಗಳು ಮತ್ತು ವಿನ್ಯಾಸಗಳನ್ನು ನಾವು 3D ಯಲ್ಲಿ ನಿರ್ಮಿಸಬಹುದು. ಇದು ನಿಜವಾಗಿಯೂ ನಿಮ್ಮ ಕಲ್ಪನೆ ಮೀರಲಿದೆ" ಎಂದು ಪ್ರೊಫೆಸರ್ ರಿಂಗರ್ ಹೇಳಿದ್ದಾರೆ. ಈ ಯೋಜನೆಯೂ ತಂಡಕ್ಕೆ ಹೊಸ ಮಿಶ್ರಲೋಹಗಳನ್ನು ನಿರ್ಮಿಸಲು ಮತ್ತು ಪರೀಕ್ಷಿಸಲು ಅವಕಾಶ  ನೀಡಲಿದೆ

ಒಮ್ಮೆ ಸಿದ್ಧವಾದ ನಂತರ, ಹೈಪರ್ಸಾನಿಕ್ ಬಾಹ್ಯಾಕಾಶ ನೌಕೆಯು ಪ್ರಪಂಚದ ಮೊದಲ 3D ಮುದ್ರಿತ ಸ್ಕ್ರ್ಯಾಮ್ಜೆಟ್ ಎಂಜಿನ್ ಅನ್ನು ಬಳಸಿಕೊಂಡು ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುತ್ತದೆ. ಆದರೂ ಇದನ್ನು ಸಾಧಿಸಲು ಹೆಚ್ಚು ಸಮಯದ ಅಗತ್ಯವಿದೆ. ಸದ್ಯಕ್ಕೆ ನಿಜವಾದ ಬಾಹ್ಯಾಕಾಶ ವಿಮಾನವನ್ನು ನಿರ್ಮಿಸುವ ಮೊದಲು, ಹೈಪರ್ಸೋನಿಕ್ಸ್ ಸ್ಕ್ರ್ಯಾಮ್ಜೆಟ್ ಎಂಜಿನ್ ಅನ್ನು ಪ್ರೂಫ್-ಆಫ್-ಕಾನ್ಸೆಪ್ಟ್ ವಾಹನಗಳಲ್ಲಿ ಪರೀಕ್ಷಿಸಲು ಯೋಜಿಸಿದೆ.

ಇದನ್ನೂ ಓದಿ: China Space Station: ಬಾಹ್ಯಾಕಾಶದಲ್ಲಿ ಚೀನಾ ಪ್ರಭುತ್ವ, ಈ ವರ್ಷ ಬಾಹ್ಯಾಕಾಶ ನಿಲ್ದಾಣ ರೆಡಿ!

ಹೈಡ್ರೋಜನ್ ಚಾಲಿತ ಎಂಜಿನ್: ಮೊದಲಿಗೆ ಕಂಪನಿ 500 ಕಿಮೀ  ದೂರ ಹಾರಟಕ್ಕೆ ಒಂದೇ ಹೈಡ್ರೋಜನ್ ಚಾಲಿತ ಎಂಜಿನ್ ಅನ್ನು ಬಳಸಿಕೊಂಡು ಮೂಲಮಾದರಿಯ ಬಾಹ್ಯಾಕಾಶ ವಿಮಾನಗಳನ್ನು ಉಡಾವಣೆ ಮಾಡಲಿದೆ. ಈ ಎಂಜಿನ್ ದಹನದ ಸಮಯದಲ್ಲಿ ನೀರನ್ನು ಉಪ-ಉತ್ಪನ್ನವಾಗಿ ಮಾತ್ರ ನೀಡುತ್ತದೆ ಮತ್ತು ಯಾವುದೇ ಇಂಗಾಲದ ಹೊರಸೂಸುವಿಕೆ ಇಲ್ಲದೆ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಬಾಹ್ಯಾಕಾಶ ಹಾರಾಟಕ್ಕೆ ಹೈಡ್ರೋಜನ್ ಎಂಜಿನ್ ಅನ್ನು ಬಳಸುವುದರಿಂದ ಹೈಪರ್ಸೋನಿಕ್ಸ್  ಇತಿಹಾಸ ಬರೆಯಲಿದೆ

Latest Videos
Follow Us:
Download App:
  • android
  • ios