ಪಿಟಿಐ ನವದೆಹಲಿ(ಡಿ.25): ಪ್ರತಿಷ್ಠಿತ ನಿರ್ಮಾಣ ಕಂಪನಿ ಲಾರ್ಸೆನ್‌ ಅಂಡ್‌ ಟರ್ಬೋ (ಎಲ್‌ ಅಂಡ್‌ ಟಿ) ತಮಿಳುನಾಡಿನ ಕಾಂಚಿಪುರಂನಲ್ಲಿರುವ ತನ್ನ ಘಟಕದಲ್ಲಿ ಭಾರತದ ಮೊದಲ 3ಡಿ ಪ್ರಿಂಟೆಡ್‌ ಮನೆ ನಿರ್ಮಿಸಿದೆ.

ಇದು 700 ಚದರಡಿ ಅಳತೆಯ ಎರಡು ಅಂತಸ್ತಿನ ಕಟ್ಟಡವಾಗಿದ್ದು, ಕಾಂಕ್ರೀಟ್‌ ಮಿಕ್ಸ್‌ ಮತ್ತು ನಿರ್ಮಾಣ ಕಾಮಗಾರಿಯಲ್ಲಿ ಬಳಕೆಯಾಗುವ ಸಾಮಾನ್ಯ ವಸ್ತುಗಳನ್ನೇ ಬಳಸಿ ಇದನ್ನು ನಿರ್ಮಿಸಲಾಗಿದೆ.

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಟ್ಯಾಬ್‌

ಕಂಪ್ಯೂಟರ್‌ನಲ್ಲಿ ಮನೆಯ 3ಡಿ ವಿನ್ಯಾಸ ಮಾಡಿ, ನಂತರ ಸ್ವಯಂಚಾಲಿತ ಯಂತ್ರಗಳ ಮೂಲಕವೇ ಈ ಮನೆಯನ್ನು ನಿರ್ಮಿಸಲಾಗುತ್ತದೆ. ಇದನ್ನು ಆಟೋಮೇಟೆಡ್‌ ರೋಬೋಟಿಕ್‌ ಕನ್‌ಸ್ಟ್ರಕ್ಷನ್‌ ವಿಧಾನವೆಂದು ಹೇಳಲಾಗುತ್ತದೆ. ಈ ಮೊದಲು ಮನೆಯ ಬೇರೆ ಬೇರೆ ಭಾಗಗಳನ್ನು ಹೀಗೆ ನಿರ್ಮಿಸಿ, ನಂತರ ಜೋಡಿಸಲಾಗುತ್ತಿತ್ತು.

ಆದರೆ, ಇದೇ ಮೊದಲ ಬಾರಿಗೆ ಇಡೀ ಮನೆಯನ್ನು ಇದೇ ತಂತ್ರಜ್ಞಾನದಡಿ ರೋಬೋಟಿಕ್‌ ಯಂತ್ರಗಳು ನಿರ್ಮಿಸಿವೆ. 2022ರ ವೇಳೆಗೆ ಸರ್ವರಿಗೂ ಸೂರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ 6 ಕೋಟಿ ಮನೆಗಳನ್ನು ನಿರ್ಮಿಸಲು ಈ ತಂತ್ರಜ್ಞಾನ ಬಳಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಡ್ರಗ್ಸ್ ಜಾಲದ ಬೇಟೆ ‌ಮುಂದುವರೆಸಿದ ಪೊಲೀಸ್ರು: ಬೆಂಗ್ಳೂರಲ್ಲಿ 1 ಕೋಟಿ ಮೌಲ್ಯದ ಮಾಲು ವಶ

2019ರಲ್ಲಿ 3ಡಿ ತಂತ್ರಜ್ಞಾನದಿಂದ 240 ಚದರಡಿಯ 1 ಬಿಎಚ್‌ಕೆ ಮನೆಯನ್ನು ಎಲ್‌ ಅಂಡ್‌ ಟಿ ನಿರ್ಮಿಸಿತ್ತು. ಈಗ ಎರಡು ಮಹಡಿಯ ಮನೆಯನ್ನು ನಿರ್ಮಿಸಿದೆ. ಜಗತ್ತಿನೆಲ್ಲೆಡೆ ಈಗಲೂ ಕಾಂಕ್ರೀಟ್‌ ರಚನೆಗಳಲ್ಲಿ 3ಡಿ ತಂತ್ರಜ್ಞಾನವು ಪ್ರಯೋಗದ ಹಂತದಲ್ಲೇ ಇದೆ. ಆದರೆ, ಎಲ್‌ ಅಂಡ್‌ ಟಿ ಸಂಸ್ಥೆ ಮೊದಲ ಬಾರಿ 106 ತಾಸಿನಲ್ಲಿ ಇಡೀ ಮನೆಯನ್ನು ಈ ತಂತ್ರಜ್ಞಾನದಡಿ ನಿರ್ಮಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.