Asianet Suvarna News Asianet Suvarna News

ಡ್ರಗ್ಸ್ ಜಾಲದ ಬೇಟೆ ‌ಮುಂದುವರೆಸಿದ ಪೊಲೀಸ್ರು: ಬೆಂಗ್ಳೂರಲ್ಲಿ 1 ಕೋಟಿ ಮೌಲ್ಯದ ಮಾಲು ವಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಡ್ರಗ್ಸ್ ಜಾಲದ ಬಗ್ಗೆ ಬೇಟೆ ‌ಮುಂದುವರೆಸಿದ್ದಾರೆ. ಹೊಸ ವರ್ಷಾಚರಣೆಗೆ ಡ್ರಗ್ಸ್​ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

two drug smugglers arrested In Bengaluru rbj
Author
Bengaluru, First Published Dec 24, 2020, 11:05 PM IST

ಬೆಂಗಳೂರು, (ಡಿ.24): ಬೈಯಪ್ಪನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಡಾರ್ಕ್​ ನೆಟ್​ ವೆಬ್​ನ ಮೂಲಕ ಡ್ರಗ್ಸ್​ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು 2 ನೈಜೀರಿಯನ್​ ಪ್ರಜೆಗಳನ್ನು ಬಂಧಿಸಿದ್ದಾರೆ. 

ಡಾನ್ಚಕ್ಸ್​ ಒಕೇಕೆ , ಸೆಲೆಸ್ಟೈನ್​​ ಅನುಗ್ವಾ ಬಂಧಿತ ಆರೋಪಿಗಳು. ಆರೋಪಿಗಳು ಸೂಕ್ತವಾದ ವೀಸಾ, ಪಾಸ್​ಪೋರ್ಟ್​ ಇಲ್ಲದೆ ಅಕ್ರಮವಾಗಿ ನಗರದಲ್ಲಿ ವಾಸಿಸುತ್ತಿದ್ದರು. ಅಲ್ಲಿಯೇ ಮಾದಕ ವಸ್ತುಗಳ ಮಾರಾಟವನ್ನೂ ಸಹ ಮಾಡುತ್ತಿದ್ದರು ಎನ್ನಲಾಗಿದೆ. 

ಗಾಂಜಾ ಸಾಗಾಟಕ್ಕೆಂದೇ ಐಷಾರಾಮಿ ಕಾರು ಖರೀದಿಸಿದ್ದ ಖದೀಮರು..! 

ಸದ್ಯ ಕ್ರಿಸ್​ಮಸ್​ ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ ಮಾದಕ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಬಾಗಮನೆ ಟೆಕ್​ಪಾರ್ಕ್​ ಬಳಿ ಇರುವ ಕೃಷ್ಣಪ್ಪ ಗಾರ್ಡನ್​ ಬಳಿ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಯತ್ನಮಾಡ್ತಿದ್ದರು. 

ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲಿಸರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಆರೋಪಿಗಳಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 3,300 ಎಂಡಿಎಂ ಟ್ಯಾಬ್ಲೆಟ್​ಗಳು ಮತ್ತು 600 ಗ್ರಾಂ ಟ್ಯಾಬ್ಲೆಟ್​ ಪೌಡರ್​ ವಶಕ್ಕೆ ಪಡೆಯಲಾಗಿದೆ. 

ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios