Asianet Suvarna News Asianet Suvarna News

ಪಟಾಕಿ ನಿಷೇಧ ಯಾವುದೇ  ಸಮುದಾಯ ವಿರುದ್ಧವಲ್ಲ; ಸುಪ್ರೀಂ ಸ್ಪಷ್ಟನೆ

* ಪಟಾಕಿ ನಿಷೇಧ ಯಾವುದೇ  ಸಮುದಾಯ ವಿರುದ್ಧವಲ್ಲ:
* ಸ್ಪಷ್ಟನೆ ನೀಡಿದ ಸುಪ್ರೀಂಕೋರ್ಟ್‌ 
* ಸಂಭ್ರಮಾಚರಣೆ ನೆಪದಲ್ಲಿ ಮೂಲಭೂತ ಹಕ್ಕಿಕೆ ಧಕ್ಕೆಯಾಗಬಾರದು
* ದೇಶಾದ್ಯಂತ ಪಟಾಕಿಗೆ ನಿಷೇಧ ಹೇರಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ

Firecracker ban not against any community says Supreme Court mah
Author
Bengaluru, First Published Oct 29, 2021, 4:30 AM IST

ನವದೆಹಲಿ (ಅ. 29) ಪಟಾಕಿ (Firecracker Ban) ನಿಷೇಧ ಮಾಡಿರುವ ತನ್ನ ಹಿಂದಿನ ಆದೇಶ ಯಾವುದೇ ಸಮುದಾಯದ ವಿರುದ್ಧವಲ್ಲ ಎಂದು (clarification) ಸ್ಪಷ್ಟಪಡಿಸಿರುವ (Supreme Court) ಸುಪ್ರೀಂಕೋರ್ಟ್‌, ಸಂಭ್ರಮಾಚರಣೆ ನೆಪದಲ್ಲಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದಷ್ಟೇ ತನ್ನ ಆದೇಶ ಹಿಂದಿನ ಉದ್ದೇಶ ಎಂದು ಹೇಳಿದೆ.

ಪರಿಸರ ಮಾಲಿನ್ಯ (Environmental Pollution) ತಡೆಯಲು ದೇಶಾದ್ಯಂತ ಪಟಾಕಿ ಸಿಡಿತಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಾತುಗಳನ್ನು ಆಡಿದ ನ್ಯಾ. ಎಂ.ಆರ್‌.ಶಾ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ‘ ಸಂಭ್ರಮಾಚರಣೆಯ ನೆಪ ಹೇಳಿಕೊಂಡು ನೀವು(ತಯಾರಕರು) ನಾಗರೀಕರ ಜೀವದ ಜೊತೆ ಆಟವಾಡುವುದು ಸಮಂಜಸವಲ್ಲ. ಕೋರ್ಟ್‌ ಯಾವುದೇ ಸಮುದಾಯದ ವಿರುದ್ಧವಾಗಿ ಈ ಆದೇಶ ನೀಡಿಲ್ಲ. ಜನರ ಮೂಲಭೂತ ಹಕ್ಕನ್ನು ರಕ್ಷಿಸುವುದಕ್ಕೋಸ್ಕರ ಈ ಆದೇಶ ನೀಡಲಾಗಿದೆ. ಆದೇಶದ ಸಂಪೂರ್ಣ ಪಾಲನೆಯಾಗಬೇಕು. ದೇಶದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧ ಮಾಡಿಲ್ಲ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿ ಇದೆ. ದೆಹಲಿಯ ಜನ ಮಾಲಿನ್ಯ ಅನುಭವಿಸುತ್ತಿರುವ ತೊಂದರೆ ಎಲ್ಲರಿಗೂ ತಿಳಿದಿದೆ. ಕೋರ್ಟ್‌ ಇರುವುದು ಜನರ ರಕ್ಷಣೆಗಾಗಿ’ ಎಂದು ಹೇಳಿದೆ.

ಏಳು ರಾಜ್ಯಗಳಲ್ಲಿ ಪಟಾಕಿ ಸಂಪೂರ್ಣ ನಿಷೇಧ

ಈ ಹಿಂದೆ ಪಟಾಕಿ ನಿಷೇಧಿಸುವ ವೇಳೆ ಸಂಪೂರ್ಣವಾಗಿ ಆದೇಶದ ಬಗ್ಗೆ ವಿವರಿಸಲಾಗಿದೆ ಎಂದು ಹೇಳಿರುವ ಕೋರ್ಟ್‌ ಆದೇಶ ಜಾರಿಗೆ ತರುವಲ್ಲಿ ಆಡಳಿತ ವಿಫಲವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದೆ.

ದೀಪಾವಳಿ ಹಬ್ಬ ಎದುರಾದಾಗ ಪಟಾಕಿ ನಿಷೇಧದ ಸುದ್ದಿ ಮತ್ತೆ ಮತ್ತೆ ಚರ್ಚೆಗೆ ಬರುತ್ತದೆ. ಬಾಲಿವುಡ್ ಮತ್ತು ಕ್ರೀಡಾ ಸೆಲೆಬ್ರಿಟಿಗಳು ಪಟಾಕಿ ನಿಷೇಧದ ಬಗ್ಗೆ ಮಾತನಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆಗಳು ಬಂದಿದ್ದವು.  ಕೊರೋನಾ ಕಾರಣಕ್ಕೆ ಕಳೆದ ದೀಪಾವಳಿಯಲ್ಲಿಯೂ ಹಲವು ರಾಜ್ಯಗಳು ಪಟಾಕಿಗೆ ಅವಕಾಶ ನೀಡಿರಲಿಲ್ಲ.  ಹಸಿರು ಪಟಾಕಿಗೆ ಈಗಲೂ ಅವಕಾಶ ಇದೆ.

 

 

Follow Us:
Download App:
  • android
  • ios