Asianet Suvarna News Asianet Suvarna News

ದೀಪಾವಳಿ ಸಂಭ್ರಮಕ್ಕೆ ಬ್ರೇಕ್, 7 ರಾಜ್ಯಗಳಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ!

  • ದುಬಾರಿ ದುನಿಯಾದಲ್ಲಿ ದೀಪಾವಳಿ ಹಬ್ಬಕ್ಕೆ ತಯಾರಿ ಬಲು ಜೋರು
  • ವಾಯು ಮಾಲಿನ್ಯ ತಡೆಯಲು ಹಲವು ರಾಜ್ಯದಲ್ಲಿ ಪಟಾಕಿಗೆ ನಿಷೇಧ
  • ಉತ್ತರ ಪ್ರದೇಶ, ಬಂಗಾಳ, ದೆಹಲಿ ಸೇರಿ 7 ರಾಜ್ಯಗಳಲ್ಲಿ ಪಟಾಕಿ ಬ್ಯಾನ್
Delhi to Bihar Diwal festival firecrackers ban to curb air pollution ckm
Author
Bengaluru, First Published Oct 27, 2021, 7:53 PM IST
  • Facebook
  • Twitter
  • Whatsapp

ನವದೆಹಲಿ(ಅ.27): ದೀಪಾವಳಿ(Diwali) ಹಬ್ಬದ ಸಡಗರ ಶುರುವಾಗಿದೆ. ಕೊರೋನಾ(Corona) ಕಾರಣ ಕಳೆದ ವರ್ಷ ದೀಪಾವಳಿ ಹಬ್ಬಕ್ಕೇ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ಕೊರೋನಾ ಹಾವಳಿ ತಗ್ಗಿದ ಕಾರಣ ಸಂಭ್ರಮಕ್ಕೆ ಕೊರತೆ ಇಲ್ಲ. ಆದರೆ ಪಟಾಕಿಗೆ(firecrackers) ನಿಷೇಧ ಹೇರಲಾಗಿದೆ. ಹಲವು ರಾಜ್ಯಗಳು ಈಗಾಗಲೇ ಪಟಾಕಿಗೆ ನಿಷೇಧ ಹೇರಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಕೆಲ ರಾಜ್ಯಗಳು ಶೀಘ್ರದಲ್ಲೇ ಪಟಾಕಿಗೆ ನಿಷೇಧ ಹೇರಲಿದೆ. 

ದೀಪಾವಳಿ ಪ್ರಯುಕ್ತ ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್‌ !

ಮಾಲಿನ್ಯ ತಡೆಗಟ್ಟಲು ಪಟಾಕಿಗೆ ಮೊದಲು ನಿಷೇಧ ಹೇರಿದ್ದು ದೆಹಲಿ. ವಾಯು ಮಾಲಿನ್ಯ(Air Pollution) ಈಗಾಗಲೇ ವಿಪರೀತವಾಗಿರುವ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧಿಸಲಾಗಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೆಪ್ಟೆಂಬರ್ 29 ರಂದೆ ಪಟಾಕಿಗೆ ನಿಷೇಧ ಹೇರಿದೆ. ಜನವರಿ 1, 2022ರ ವರೆಗೆ ದೆಹಲಿಯಲ್ಲಿ ಪಟಾಕಿ ನಿಷೇಧ(Ban) ಹೇರಿದೆ.

ಪಂಜಾಬ್ ಸರ್ಕಾರ ಕೂಡ ಪಟಾಕಿಗೆ ನಿಷೇಧ ಹೇರಿದೆ. ಕೇವಲ 2 ಗಂಟೆ ಹಸಿರು ಪಟಾಕಿಗೆ ಹೊಡೆಯಲು ಅವಕಾಶ ನೀಡಲಾಗಿದೆ. ಆದರೆ ಹಸಿರು ಪಟಾಕಿ ಬಿಟ್ಟು ಇತರ ಪಟಾಕಿಗೆ ಅವಕಾಶವಿಲ್ಲ. ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗಿ ಪಟಾಕಿ ಹೊಡೆಯಲು ಪಂಜಾಬ್ ಸರ್ಕಾರ ಅವಕಾಶ ನೀಡಿದೆ. ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಕ್ಕೆ ರಾತ್ರಿ 11.55 ರಿಂದ 12.30ರ ವರೆಗೆ 35 ನಿಮಿಷಗಳ ಕಾಲ ಪಟಾಕಿಗೆ ಅವಕಾಶ ನೀಡಲಾಗಿದೆ. 

ಚಿನ್ನದ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಸೆ; 4 ದಿನದಿಂದ ಬಂಗಾರದ ದರ ಏರಿಕೆ!

ಪಶ್ಚಿಮ ಬಂಗಾಳದಲ್ಲೂ ಪಟಾಕಿಗೆ ನಿಷೇಧ ಹೇರಲಾಗಿದೆ. ಕೇವಲ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ ಹಸಿರು ಪಟಾಕಿಗೆ ಕೇವಲ 2 ಗಂಟೆ ಸಮಯ ನೀಡಲಾಗಿದೆ. ದೀಪಾವಳಿ ಹಬ್ಬಕ್ಕೆ ರಾತ್ರಿ 8 ರಿಂದ 10 ಗಂಟೆ ವರೆಗೆ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಇನ್ನು ಚಾಟ್ ಪೂಜಾ ದಿನ ಬೆಳಗ್ಗೆ 6 ರಿಂದ 8 ಗಂಟೆ ವರೆಗೆ ಹಸಿರು ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. ಇನ್ನು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ರಾತ್ರಿ 11.55 ರಿಂದ 35 ನಿಮಿಷಗಳ ಕಾಲ ಅವಕಾಶ ನೀಡಲಾಗಿದೆ.

ರಾಜಸ್ಥಾನದಲ್ಲೂ ಕೇವಲ 2 ಗಂಟೆ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 18 ರಂದು ರಾಜಸ್ಥಾನ ಮಾಲಿನ್ಯ ನಿಯಂತ್ರಣ ಮಂಡಳಿ ಈ ಆದೇಶ ಹೊರಡಿಸಿದೆ. ಹಸಿರು ಪಟಾಕಿ ಹೊರತು ಪಡಿಸಿ ಇತರ ಎಲ್ಲಾ ಪಟಾಕಿಗೆ ನಿಷೇಧ ಹೇರಲಾಗಿದೆ.

ದೀಪಾವಳಿ ಪ್ರಯುಕ್ತ ಶಾರುಖ್ ಹೊಸ ಜಾಹೀರಾತು : ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಚತ್ತೀಸಘಡದಲ್ಲಿ ಹಸಿರು ಪಟಾಕಿಗೆ ಕೇವಲ 2 ಗಂಟೆ ಅವಕಾಶ ನೀಡಲಾಗಿದೆ. ಇನ್ನು ಬಿಹಾರದಲ್ಲಿ ಪಾಟ್ನಾ, ಗಯಾ, ಮುಜಾಫರ್‌ಪುರ ಮತ್ತು ವೈಶಾಲಿ ನಗರದಲ್ಲಿ ಪಟಾಕಿಗೆ  ಸಂಪೂರ್ಣ ನಿಷೇಧ ಹೇರಲಾಗಿದೆ. ಇನ್ನುಳಿದ ಜಿಲ್ಲಿಗಳಲ್ಲಿ 2 ಗಂಟೆ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತೀವ್ರ ಮುಜುಗರ ಅನುಭವಿಸುತ್ತಿದೆ. ಹಲವು ಎಚ್ಚರಿಕೆಗಳನ್ನು ಪಡೆದಿದೆ. ಇದರ ಜೊತೆಗೆ ಕೋವಿಡ್ ಸಂಕಷ್ಟಕ್ಕೂ ವಾಯು ಮಾಲಿನ್ಯ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಕರ್ನಾಟಕ ಸೇರಿದಂತೆ ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ಇತರೆ ಪಟಾಕಿಗೆ ಅವಕಾಶವಿಲ್ಲ. ಈ ನಿರ್ಧಾರ ಪರ ವಿರೋಧಕ್ಕೆ ಕಾರಣಾಗಿದೆ. ಹಿಂದೂಗಳ ಹಬ್ಬಕ್ಕೆ ಮಾತ್ರ ಪಟಾಕಿ ನಿಷೇಧ ಯಾಕೆ ಅನ್ನೋ ವಾದವೂ ಹೆಚ್ಚಾಗಿದೆ. 
 

Follow Us:
Download App:
  • android
  • ios