Asianet Suvarna News Asianet Suvarna News

60 ಅಂತಸ್ತಿನ ಐಷಾರಾಮಿ ಫ್ಲ್ಯಾಟ್‌ನಲ್ಲಿ ಬೆಂಕಿ, 19ನೇ ಮಹಡಿ ಧಗಧಗ, ಓರ್ವ ಸಾವು!

* 60 ಅಂತಸ್ತಿನ ಅವಿಘ್ನ ಪಾರ್ಕ್ ಕಟ್ಟಡದ 19 ನೇ ಮಹಡಿಯಲ್ಲಿ ಭಾರೀ ಬೆಂಕಿ

* ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ

* ಘಟನೆಯಲ್ಲಿ ಓರ್ವ ಸಾವು

Fire On 19th Floor Of Luxury Residential Tower In Mumbai 1 Dead pod
Author
Bangalore, First Published Oct 22, 2021, 2:25 PM IST
  • Facebook
  • Twitter
  • Whatsapp

ಮುಂಬೈ(ಅ.22): ಮುಂಬೈನ(Mumbai) ಲಾಲ್‌ಬಾಗ್(Lalbaug) ಪ್ರದೇಶದ 60 ಅಂತಸ್ತಿನ ಅವಿಘ್ನ ಪಾರ್ಕ್ ಕಟ್ಟಡದ 19 ನೇ ಮಹಡಿಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆವರಿಸಿದ್ದು, ಕಟ್ಟಡದಿಂದ ಅಗ್ನಿ ಜ್ವಾಲೆಗಳು ಎದ್ದಿವೆ. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಬೆಂಕಿಯನ್ನು(Fire) ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಅದರ ನಿಯಂತ್ರಣಕ್ಕೆ 14 ಅಗ್ನಿಶಾಮಕ ವಾಹನಗಳು ಬಂದಿದ್ದವು. ಪ್ರಸ್ತುತ, ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿದ್ದು, ಒಬ್ಬ ವ್ಯಕ್ತಿ ತನ್ನನ್ನು ಉಳಿಸಿಕೊಳ್ಳಲು ಬಾಲ್ಕನಿಗೆ ನೇತಾಡಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು, ಆತ ಮೃತಪಟ್ಟಿದ್ದಾನೆ. ಈ ವ್ಯಕ್ತಿಯ ಹೆಸರನ್ನು ಅರುಣ್ ತಿವಾರಿ ಎಂದು ಹೇಳಲಾಗುತ್ತಿದೆ, ಅವರ ವಯಸ್ಸು 30 ವರ್ಷ.

ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಈ ಬಗ್ಗೆ ಮಾಹಿತಿ ನೀಡುತ್ತಾ ಅಗ್ನಿಶಾಮಕ ದಳದ ತಂಡವು ಬೆಂಕಿಯ ಸುದ್ದಿ ತಿಳಿದ ತಕ್ಷಣ ತಲುಪಿದೆ ಎಂದು ಹೇಳಿದರು. ಅನೇಕ ಜನರನ್ನು ಹೊರಕರೆತರಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಬಾಲ್ಕನಿ ಮೂಲಕ ಕೆಳಗಿಳಿಯುತ್ತಿದ್ದ ವ್ಯಕ್ತಿ ಗಾಬರಿಯಿಂದ ಜಿಗಿದಿದ್ದಾನೆ. ಈ ವೇಳೆ ಮೃತಪಟ್ಟಿದ್ದಾನೆ. ಇದರಲ್ಲಿ ಅಗ್ನಿಶಾಮಕ ದಳದ ತಂಡದ ತಪ್ಪು ಎನ್ನಲು ಸಾಧ್ಯವಿಲ್ಲ. ಹೀಗಾಗಿ ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಹೇಳಿದ್ದಾರೆ.

Follow Us:
Download App:
  • android
  • ios