Asianet Suvarna News Asianet Suvarna News

ಮಹಾರಾಷ್ಟ್ರ: ಮಂಚದಿಂದ ಉರುಳಿಬಿದ್ದ 160 ಕೇಜಿ ತೂಕದ ವೃದ್ಧೆ ಎತ್ತಲು ಬಂದ ಅಗ್ನಿಶಾಮಕ!

ನಿದ್ರೆಯಲ್ಲಿ ಮಂಚದ ಮೇಲಿನಿಂದ ಕೆಳಗೆ ಬಿದ್ದ 160 ಕೇಜಿ ತೂಕದ ವೃದ್ಧೆಯನ್ನು ಮತ್ತೆ ಮಂಚದ ಮೇಲೆ ಎತ್ತಿ ಹಾಕಲು ಸಾಧ್ಯವಾಗದ ಆಕೆಯ ಕುಟುಂಬಸ್ಥರು ಸಹಾಯಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

Fire Department Called In After 160 Kg Thane Woman Falls From Bed in Maharashtra gow
Author
First Published Sep 8, 2023, 10:16 AM IST

ಥಾಣೆ (ಸೆ.8): ನಿದ್ರೆಯಲ್ಲಿ ಮಂಚದ ಮೇಲಿನಿಂದ ಕೆಳಗೆ ಬಿದ್ದ 160 ಕೇಜಿ ತೂಕದ ವೃದ್ಧೆಯನ್ನು ಮತ್ತೆ ಮಂಚದ ಮೇಲೆ ಎತ್ತಿ ಹಾಕಲು ಸಾಧ್ಯವಾಗದ ಆಕೆಯ ಕುಟುಂಬಸ್ಥರು ಸಹಾಯಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ನೆಲದ ಮೇಲೆ ಬಿದ್ದಿದ್ದ 62 ವರ್ಷದ ವೃದ್ಧೆಯನ್ನು ಮರಳಿ ಮಂಚದ ಮೇಲೆ ಎತ್ತಿ ಮಲಗಿಸಿದ್ದಾರೆ. ವೃದ್ಧೆ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ವಿಪತ್ತು ನಿರ್ವಹಣಾ ಅಧಿಕಾರಿಗಳು ಅನೇಕ ಕರೆಗಳನ್ನು ನಾವು ಸ್ವೀಕರಿಸುತ್ತೇವೆ. ಆದರೆ ಇದು ವಿಚಿತ್ರವಾದ ಪ್ರಕರಣವಾಗಿತ್ತು ಎಂದಿದ್ದಾರೆ.

ಪುರುಷ, ಮಹಿಳೆಯರ ಮೇಲಿನ ಕ್ರೌರ್ಯ ಒಂದೇ ರೀತಿಯಾಗಿ ಇರೋದಿಲ್ಲ: ಸುಪ್ರೀಂ

ಅಧಿಕಾರಿಗಳ ಪ್ರಕಾರ, ಮಹಾರಾಷ್ಟ್ರದ ಥಾಣೆ ನಗರದಲ್ಲಿ 160 ಕೆಜಿ ತೂಕದ ಅಸ್ವಸ್ಥ ಮಹಿಳೆ ಹಾಸಿಗೆಯಿಂದ ಬಿದ್ದ ನಂತರ ಆಕೆಯನ್ನು ಮೇಲೆತ್ತಲು ಕುಟುಂಬವು ಅಗ್ನಿಶಾಮಕ ಇಲಾಖೆಯ ಸಹಾಯವನ್ನು ಕೋರಿದೆ. 62ರ ಹರೆಯದ ಮಹಿಳೆಯು ಅಧಿಕ ತೂಕ ಮತ್ತು ಆಕೆಯ ಆರೋಗ್ಯದ ಕೊರತೆಯಿಂದಾಗಿ ಸಮಸ್ಯೆಗಳಿಂದ ಬಳಲುತ್ತಿದ್ದು, ವಾಘ್‌ಬಿಲ್ ಪ್ರದೇಶದ ತಮ್ಮ ಫ್ಲಾಟ್‌ನಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಹಾಸಿಗೆಯಿಂದ ಬಿದ್ದಿದ್ದಾರೆ. ಅವರನ್ನು ಎತ್ತಲು ಆಗದ ಕಾರಣ ನಮಗೆ ಬೆಳಗ್ಗೆ ಕರೆ ಮಾಡಿದರು ಎಂದು ತಿಳಿಸಿದ್ದಾರೆ.

ವಾಶ್‌ರೂಮ್‌ಗೆ ಫಸ್ಟ್‌ ಹೋಗೋಕೆ ಮಹಿಳೆಯರ ರಸ್ಲಿಂಗ್‌, ಮುಖ-ಮೂತಿ ನೋಡ್ದೆ ಚಚ್ಚಿ ಹಾಕಿದ್ರು!

ಮಹಿಳೆ ಬಿದ್ದ ನಂತರ ಕುಟುಂಬಕ್ಕೆ ಮೇಲೆ ಎತ್ತುವುದು ಮಾತ್ರವಲ್ಲ. ಮಂಚಕ್ಕೆ ಬೆನ್ನನ್ನು ಒರಗಿಸಿ  ಕುಳಿತುಕೊಳ್ಳಲು ಕೂಡ ಸಮಸ್ಯೆಯಾಯ್ತು. ಹೀಗಾಗಿ ಸಹಾಯಕ್ಕಾಗಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಕರೆದರು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದ್ದಾರೆ. ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್‌ಡಿಎಂಸಿ) ತಂಡವು ಫ್ಲಾಟ್‌ಗೆ ಆಗಮಿಸಿ ಮಹಿಳೆಯನ್ನು ಮೇಲಕ್ಕೆತ್ತಿ ಹಾಸಿಗೆಯ ಮೇಲೆ  ಮಲಗಿಸಿದರು. ಬಿದ್ದ ಕಾರಣ ಮಹಿಳೆಗೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Follow Us:
Download App:
  • android
  • ios