Asianet Suvarna News Asianet Suvarna News

ಮುಂಬೈ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ: ಸ್ಥಳಕ್ಕೆ ಡೌಡಾಯಿಸಿದ 14 ಅಗ್ನಿಶಾಮಕ ವಾಹನ

ಮುಂಬೈನ ಬೋರಿವಲಿಯಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

Fire Breaks Out At Shopping Centre In Mumbai 14 Fire Engines At The Spot
Author
Bangalore, First Published Jul 11, 2020, 1:43 PM IST

ಮುಂಬೈ(ಜು.11): ಮುಂಬೈನ ಬೋರಿವಲಿಯಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಬೋರಿವಲಿಯ ಎಸ್‌ವಿ ರಸ್ತೆಯಲ್ಲಿರುವ ಇಂದ್ರಪ್ರಸ್ತ ಮಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗ್ಗೆ 3 ಗಂಟೆಗೆ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಬಂದಿತ್ತು. ಬೇಸ್‌ಮೆಂಟ್ ಹೊರತುಪಡಿಸಿ ಮೂರು ಮಹಡಿಯ ಮಾಲ್‌ನಲ್ಲಿ ದೊಡ್ಡ ಮಟ್ಟದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ.

26 ವರ್ಷದ ಕಿರುತೆರೆ ನಟಿಯ ಅತ್ಯಾಚಾರ; ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಪರಿಚಿತ ವ್ಯಕ್ತಿ!

ಬೇಸ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೇಲಿನ ಎರಡು ಮಹಡಿಗಳಿಗೆ ಬೆಂಕಿ ಹಬ್ಬಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಬೆಂಕಿಯ ತೀವ್ರತೆ ಆರಂಭದಲ್ಲಿ ಲೆವೆಲ್ 2 ನಲ್ಲಿದ್ದು, ನಂತರ 4 ಗಂಟೆಯ ಹೊತ್ತಿಗೆ 3ನೇ ಲೆವೆಲ್‌ಗೆ ಬಂದಿತ್ತು. ಬೆಳಗ್ಗೆ 6.25ರ ಹೊತ್ತಿಗೆ ಬೆಂಕಿಯ ತೀವ್ರತೆ ಲೆವೆಲ್ 4ರಷ್ಟಿತ್ತು.

'ಏನು ಆಗಲ್ಲ, ಮನೆಗೆ ಹೋಗಿ' ಚಿಕತ್ಸೆ ಸಿಗದೆ ಕೊರೋನಾ ಶಂಕಿತ ಉದ್ಯಮಿ ಫ್ಲಾಟ್‌ನಲ್ಲೇ ಸಾವು

ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಅಗ್ನಿ ಶಾಮಕ ರೊಬೋಟ್‌ನ್ನು ಸ್ತಳಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯ ಅಧಿಕಾರಿ ಪಿಎಸ್ ರಹಂಗ್ಡಲೆ ತಿಳಿಸಿದ್ದಾರೆ. 14 ಫೈರ್ ಎಂಜಿನ್. 13 ಜಂಬೋ ಟ್ಯಾಂಕರ್ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ರೋಬೋಟ್ ಕೂಡಾ ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"

Follow Us:
Download App:
  • android
  • ios