ಕಿರುತೆರೆ ಜನಪ್ರಿಯ ನಟಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಜುಲೈ 8ರಂದು ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ಸಾಥ್ ಭಾಯಿ ಚಂಪಾ' ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿಯ ದೂರು ಸ್ವೀಕರಿಸಿರುವ  ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Fact Check: ‘ಸೈಕಲ್‌ ಹುಡುಗಿ’ ಜ್ಯೋತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಯ್ತಾ? ...

ಅತ್ಯಾಚಾರವೆಸಗಿದ  ವ್ಯಕ್ತಿ ಮತ್ತು ನಟಿ ಹಲವು ವರ್ಷಗಳಿಂದ ಪರಿಚಯವಿದ್ದು ಇಬ್ಬರು ಸ್ನೇಹಿತರಾಗಿದ್ದರು. ಇತ್ತೀಚಿಗೆ ಅವರಿಬ್ಬರ ನಡುವೆ ವೈಮನಸ್ಸು ಉಂಟಾದ ಕಾರಣ ಈ ಘಟನೆ ನಡೆದಿರಬಹುದು ಎಂದು ಯುವತಿ ಆಪ್ತರು ತಿಳಿಸಿದ್ದಾರೆ. 

ಪಶ್ಚಿಮ ಬಂಗಾಳದ ಬಿಜೋಯ್‌ಗನ ಅಪಾರ್ಟೆಮೆಂಟ್‌ನಲ್ಲಿ ವಾಸವಿರುವ ನಟಿ ಮನೆಗೆ ಪರಿಚಿತ ವ್ಯಕ್ತಿ ಹಣ ಸಹಾಯ ಬೇಡಿ ಬಂದಿದ್ದಾನೆ. ಮನೆಯಲ್ಲಿ ನಟಿ ಒಬ್ಬಂಟಿಯಾಗಿರುವ ವಿಚಾರ ತಿಳಿದು ಅಸಭ್ಯವಾಗಿ ವರ್ತಿಸಿದ್ದಾನೆ. ಆತನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.

ಪರಿಚಿತ ವ್ಯಕಿ ತನ್ನ ವಿಡಿಯೋ ಮಾಡಿ ಹಣ ನೀಡುವಂತೆ ಒತ್ತಾಯ ಮಾಡುತ್ತಿರುವುದಾಗಿ ನಟಿ ತಿಳಿಸಿದ್ದಾರೆ. ಆದರೆ ವಿಡಿಯೋ ಮಾಡಿರುವುದು ನಿಜವೋ  ಅಥವಾ ಸುಳ್ಳೋ ಎಂದು ತಿಳಿಯಲು ಪೊಲೀಸರು ಆರೋಪಿಯ ಮೊಬೈಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತೊಂದು ಟ್ವಿಸ್ಟ್‌:

ಅತ್ಯಾಚಾರಕ್ಕೆ ಒಳಗಾದ ನಟಿ ದೂರು ನೀಡಿರುವುದು ಒಂದು ಕಥೆಯಾದರೆ ಕೆಲ ಮೂಲಗಳಿಂದ ಬೇರೆಯದ್ದೇ ರೀತಿಯ ಸ್ಟೋರಿ ಕೇಳಿ ಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ತಮ್ಮ ಅಭಿಮಾನಿಗಳೆಂದು ಮೆಸೇಜ್‌ ಮಾಡುವ ಅಪರಿಚಿತರೊಂದಿಗೆ ಮಾತನಾಡುತ್ತಾರೆ. ಈ ವೇಳೆ ಮೆಸೇಜ್‌ ಮಾಡಿದ ವ್ಯಕ್ತಿಯೊಬ್ಬ ಹಣ ಸಹಾಯ ಮಾಡುವಂತೆ ಮನವಿ ಮಾಡುತ್ತಾನೆ.  ಸಹಾಯ ಮಾಡುವುದಾಗಿ ಹೇಳಿದ ನಟಿ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡದೆ ಆತನನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದಾರೆ. ಆ ನಂತರ ನಡೆದ ಘಟನೆಯನ್ನು ಮಾತ್ರ ನಟಿ ಪೊಲೀಸರಿಗೆ ದೂರು ನೀಡಿರುವುದು.

ಅತ್ಯಾಚಾರ ಆರೋಪಿಯಿಂದಲೇ ಲಂಚ ಪಡೆದ ಮಹಿಳಾ PSI ಅರೆಸ್ಟ್

ನಟಿ ಮಾತ್ರವಲ್ಲದೇ ಮಾಡಲ್ ಆಗಿರುವ ಈ ಯುವತಿ ಸದ್ಯಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಪೊಲೀಸರು ತನಿಖೆ ತೀವ್ರಗೊಳಿಸಿರುವುದರಿಂದ ಸದ್ಯದಲ್ಲೇ ಸತ್ಯಾಂಶ ಹೊರಬೀಳಲಿದ್ದು ಪ್ರಕರಣದ ಅಸಲಿಯತ್ತು ಏನೆಂದು ತಿಳಿಯಬಹುದಾಗಿದೆ.