ಪುಣೆ(ಜ.21): ಭಾರತದ ಕೊರೋನಾ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ, ಲಸಿಕಾ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 1ರಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಇದೀಗ ಅದೇ ಕಟ್ಟದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.

ಸೀರಂ ಸಂಸ್ಥೆಯಲ್ಲಿ ಅಗ್ನಿ ಅವಘಡ, ಕೊರೋನಾ ಲಸಿಕೆಗಳಿದ್ದ ಘಟಕ ಸೇಫ್!.

ಇಂದು ಮೊದಲ ಬಾರಿಗೆ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿತ್ತು. ಬೆಂಕಿಯಿಂದ ಸಾವನ್ನಪ್ಪಿದ ಐವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿತ್ತು. ಇನ್ನು ಕೆಲ ಕಾರ್ಮಿಕರಿಗೆ ಗಾಯಗಳಾಗಿತ್ತು. ಬೆಂಕಿ ನಂದಿಸಿದ ಬೆನ್ನಲ್ಲೇ ಅದೇ ಕಟ್ಟದ ಮತ್ತೊಂದು ತುದಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

1.1 ಕೋಟಿ ಡೋಸ್‌ ಕೋವಿಶೀಲ್ಡ್‌ ಖರೀದಿ

ಅಗ್ನಿಶಾಮಕ ದಳ ಇದೀಗ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ. ಸದ್ಯ ಅಗ್ನಿ ನಿಯಂತ್ರಣಕ್ಕೆ ಬಂದಿಲ್ಲ. ಎರಡನೇ ಬಾರಿಗೆ ಕಾಣಿಸಿಕೊಂಡ ಬೆಂಕಿಯಿಂದ ಕೋವಿಡ್ ಲಸಿಕೆಗೆ ಅಡ್ಡಿಯಾಗಿದೆಯಾ ಅನ್ನೋ ಕುರಿತು ಇನ್ನಷ್ಟೇ ಮಾಹಿತಿ ಬಹಿರಂಗವಾಗಬೇಕಿದೆ. 

ಮೊದಲ ಬಾರಿಗೆ ಕಾಣಿಸಿಕೊಂಡ ಬೆಂಕಿಯಿಂದ ಲಸಿಕೆಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸೆರಂ ಸಂಸ್ಥೆ ಸ್ಪಷ್ಟಪಡಿಸಿತ್ತು. ಪುಣೆಯ ಮಂಜಾರಿ ಬಳಿ 100 ಏಕರೆ ಪ್ರದೇಶದಲ್ಲಿರುವ ಸೆರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿ ಪಡಿಸಿ ವಿತರಣೆ ಮಾಡುತ್ತಿದೆ. ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ಬಳಸಲು ಭಾರತ ಅನುಮತಿ ನೀಡಿದೆ.