ಭಾರತದ ಕೊರೋನಾ ಲಸಿಕೆ ಕೋವಿಶೀಲ್ಡ್| ಕೋವಿಶೀಲ್ಡ್ ತಯಾರಕ ಸಂಸ್ಥೆ ಸೀರಂನಲ್ಲಿ ಭಾರೀ ಅಗ್ನಿ ಅವಘಡ| ಸೀರಂ ಇನ್ಸ್ಟಿಟ್ಯೂಟ್‌ನ ಟರ್ಮಿನಲ್ ಒಂದರ ಬಳಿ ಕಾಣಿಸಿಕೊಂಡ ಬೆಂಕಿ
ಪುಣೆ(ಜ.21): ದೇಶಾದ್ಯಂತ ಸದ್ಯ ನಿಡಲಾಗುತ್ತಿರುವ ಕೋವಿಶೀಲ್ಡ್, ಮೇಡ್ ಇನ್ ಇಂಡಿಯಾ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ ಪುಣೆಯ ಸೀರಂ ಸಂಸ್ಥೆಯ ಒಂದನೇ ಗೇಟ್ ಬಳಿ ಭಾರೀ ಅಗ್ನ ಅವಘಡ ಸಂಭವಿಸಿದೆ. ಈ ಅಗ್ನಿ ಅನಾಹುತಕ್ಕೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.
Bacillus Calmette–Guérin (BCG) ಲಸಿಕೆ ಉತ್ಪಾದನಾ ಘಟಕದಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ. ಕೊರೋನಾ ಲಸಿಕೆ ಕೋವಿಶೀಲ್ಡ್ ಘಟಕ ಸಂಪೂರ್ಣ ಸುರಕ್ಷಿತವಾಗಿದೆ.
ಘಟನೆ ಬೆನ್ನಲ್ಲೇ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ಆರಂಭವಾಗಿದೆ.
ಮೂಲಗಳ ಪ್ರಕಾರ, ಘಟನೆಯಲ್ಲಿ ನಾಲ್ವರು ಸಿಲುಕಿಕೊಂಡಿದ್ದು, ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಆಕ್ಸ್ ಫರ್ಡ್ ಯೂನಿರ್ವಸಿಟಿ ಮತ್ತು ಆಸ್ಟ್ರಾಜೆನೀಕಾ ಅಭಿವೃದ್ದಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸೀರಂ ಇನ್ಸ್ ಟಿಟ್ಯೂಟ್ ಉತ್ಪಾದಿಸುತ್ತಿದೆ.
