ವಾರಣಸಿ(ಜು.17): ಭಾರತದ ಜೊತೆ ಗಡಿ ಖ್ಯಾತೆ ತೆಗೆದ ನೇಪಾಳ ಬಳಿಕ ಶ್ರೀರಾಮ ನೇಪಾಳಿ, ಆಯೋಧ್ಯೆ ಇರುವುದು ನೇಪಾಳದಲ್ಲಿ ಎಂಬ ಹೇಳಿಕೆ ನೀಡಿತ್ತು. ಇದು ಭಾರತೀಯರ ಆಕ್ರೋಷಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಬೆನ್ನಲ್ಲೇ ವಾರಣಸಿ ವಿಶ್ವ ಹಿಂದೂ ಸೇನೆ, ನೇಪಾಳಿ ಪ್ರಜೆ ಮೇಲೆ ಹಲ್ಲೆ ಮಾಡಿದೆ. ನೇಪಾಳಿ ಪ್ರಧಾನಿ ಹೇಳಿಕೆಯಿಂದ ಕೆರಳಿದ ವಿಶ್ವ ಹಿಂದೂ ಸೇನೆ ಹಲ್ಲೆ ನಡೆಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ವಿಶ್ವ ಹಿಂದೂ ಸೇನೆ ವಿರುದ್ಧ ಪ್ರಕರಣ ದಾಖಲಾಗಿದೆ.

'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ

ವಾರಣಸಿಯಲ್ಲಿನ ನೇಪಾಳಿ ಪ್ರಜೆ ಮೇಲೆ ವಿಶ್ವ ಹಿಂದೂ ಸೇನೆ ಹಲ್ಲೆ ಮಾಡಿದೆ. ನೇಪಾಳಿ ಪ್ರಧಾನಿ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು, ನೇಪಾಳಿಗರು ಭಾರತದಿಂದಲೇ ತೊಲಗಬೇಕು ಎಂದು ವಿಶ್ವ ಹಿಂದೂ ಸೇನೆ ಸಂಸ್ಥಾಪಕ ಅರುಣ್ ಪಾತಕ್ ನೇಪಾಳಿ ಪ್ರಜೆಯ ತಲೆ ಕೂದಲು ಬೋಳಿಸಿದ್ದಾರೆ. ಇಷ್ಟೇ ಅಲ್ಲ ಹಿಂದೂಸ್ಥಾನ್ ಜಿಂದಾಬಾದ್, ಜೈ ಶ್ರೀರಾಮ್ ಎಂಬ ಹೇಳಿಕೆಯನ್ನು ನೀಡಿಲು ಬೆದರಿಸಲಾಗಿದೆ. . ಈ ವೇಳೆ ಇತರ ಕಾರ್ಯಕರ್ತರೂ ಸಾಥ್ ನೀಡಿದ್ದಾರೆ. ವಿಡಿಯೋ ಆಧರಿಸಿ ಇದೀಗ ಪೊಲೀಸರು ಅರುಣ್ ಪಾತಕ್ ಹಾಗೂ ಹಲವರ ಮೇಲೆ ಕೇಸ್ ದಾಖಲಾಗಿದೆ.

ರಾಮನ ಕುರಿತ ಓಲಿ ಹೇಳಿಕೆಗೆ ನೇಪಾಳದಲ್ಲೇ ತೀವ್ರ ಟೀಕೆ!

ಭೇಲುಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಪಾಳಿ ಪ್ರಧಾನಿ ಹೇಳಿಕೆಯನ್ನು ಉಲ್ಲೇಖಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಇಷ್ಟೇ ಅಲ್ಲ ನೇಪಾಳಿ ಪ್ರಧಾನಿ ವಿರುದ್ಧ ಘೋಷಣೆಗಳನ್ನೂ ಕೂಗಲಾಗಿದೆ.  ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಹಲ್ಲೆ , ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಭಾರತದಲ್ಲಿರುವ ಪ್ರತಿಯೊಬ್ಬರಿಗೂ ರಕ್ಷಣೆ ನೀಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ ಎಂದು ವಾರಣಸಿ ಸಿಟಿ ಪೊಲೀಸ್ SP ಚಂದ್ರ ತ್ರಿಪಾಠಿ ಹೇಳಿದ್ದಾರೆ