- Home
- Entertainment
- Cine World
- ಅಮಿತಾಬ್ ಬಚ್ಚನ್ ಮನೆಯಲ್ಲಿ ಏನಾಗ್ತಿದೆ? ಮುಂಬೈನಲ್ಲಿದ್ದ ಐಷಾರಾಮಿ ಮನೆ ಭಾರೀ ಮೊತ್ತಕ್ಕೆ ಸೇಲ್!
ಅಮಿತಾಬ್ ಬಚ್ಚನ್ ಮನೆಯಲ್ಲಿ ಏನಾಗ್ತಿದೆ? ಮುಂಬೈನಲ್ಲಿದ್ದ ಐಷಾರಾಮಿ ಮನೆ ಭಾರೀ ಮೊತ್ತಕ್ಕೆ ಸೇಲ್!
ಅಮಿತಾಬ್ ಬಚ್ಚನ್ ಮನೆಯಲ್ಲಿ ಏನಾಗ್ತಿದೆ? ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಗಾಳಿಸುದ್ದಿ ಹರಿದಾಡ್ತಿತ್ತು. ಇದರ ಬೆನ್ನಲ್ಲೇ ಬಿಗ್ ಬಿ ತಮ್ಮ ಐಷಾರಾಮಿ ಮನೆ ಮಾರಾಟ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ.

ಅಮಿತಾಬ್ ಬಚ್ಚನ್ ಮುಂಬೈನ ಅಂಧೇರಿಯಲ್ಲಿರುವ ತಮ್ಮ ಐಷಾರಾಮಿ ಡೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ಭಾರಿ ಲಾಭಕ್ಕೆ ಮಾರಾಟ ಮಾಡಿದ್ದಾರೆ. ಈ ವಿಶಾಲವಾದ ಜಾಗದಲ್ಲಿ ದೊಡ್ಡ ಟೆರೇಸ್, ವಿಶಾಲವಾದ ಪಾರ್ಕಿಂಗ್ ಸ್ಥಳವಿದೆ. ಕೆಲವು ವರ್ಷಗಳ ಹಿಂದೆ ಖರೀದಿಸಿದ್ದ ಈ ಜಾಗವನ್ನು ಲಾಭಕ್ಕಾಗಿ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಯೋಜನೆಯ ಭಾಗವಾಗಿ ಇದು ನಡೆದಿದೆ ಎನ್ನಲಾಗಿದೆ.
ಅಮಿತಾಬ್ ಬಚ್ಚನ್ ಮುಂಬೈನ ಅಂಧೇರಿಯಲ್ಲಿರುವ ದಿ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿರುವ ತಮ್ಮ ಡೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು 83 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಈ ಆಸ್ತಿ 5,185 ಚದರ ಅಡಿ RERA ಕಾರ್ಪೆಟ್ ಪ್ರದೇಶದಲ್ಲಿದೆ. ಇದರೊಂದಿಗೆ ಸುಮಾರು 4,800 ಚದರ ಅಡಿ ಟೆರೇಸ್, ಆರು ಸ್ವಯಂಚಾಲಿತ ಕಾರ್ ಪಾರ್ಕಿಂಗ್ ಸ್ಥಳಗಳಿವೆ. ಈ ಮಾರಾಟ ಜನವರಿ 17 ರಂದು ಅಧಿಕೃತವಾಗಿ ನೋಂದಾಯಿಸಲಾಗಿದೆ, ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ಕ್ರಮವಾಗಿ 4.98 ಕೋಟಿ ರೂ. ಆಗಿದೆ.
ಬಚ್ಚನ್ 2021ರ ಏಪ್ರಿಲ್‌ನಲ್ಲಿ ಈ ಆಸ್ತಿಯನ್ನು 31 ಕೋಟಿ ರೂ.ಗೆ ಖರೀದಿಸಿದ್ದರು. ಈ ಡೂಪ್ಲೆಕ್ಸ್ ಅಪಾರ್ಟ್‌ಮೆಂಟ್ 83 ಕೋಟಿ ರೂ.ಗೆ ಮಾರಾಟವಾಗಿದ್ದು, ಶೇ.168ರಷ್ಟು ಲಾಭ ಗಳಿಸಿದ್ದಾರೆ. ನೋಂದಣಿ ಪತ್ರಗಳ ಪ್ರಕಾರ, ಅಪಾರ್ಟ್‌ಮೆಂಟ್ ಖರೀದಿದಾರರು ವಿಜಯ್ ಸಿಂಗ್ ಠಾಕೂರ್ ಮತ್ತು ಕಮಲ್ ವಿಜಯ್ ಠಾಕೂರ್ ಎಂದು ತಿಳಿದುಬಂದಿದೆ.
ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, 2021ರ ನವೆಂಬರ್‌ನಲ್ಲಿ, ಈ ಅಪಾರ್ಟ್‌ಮೆಂಟ್ ಅನ್ನು ನಟಿ ಕೃತಿ ಸನೋನ್‌ಗೆ ತಿಂಗಳಿಗೆ 10 ಲಕ್ಷ ರೂ. ಬಾಡಿಗೆಗೆ ಮತ್ತು 60 ಲಕ್ಷ ರೂ. ಭದ್ರತಾ ಠೇವಣಿಯೊಂದಿಗೆ ಬಾಡಿಗೆಗೆ ನೀಡಲಾಗಿತ್ತು. ಬಚ್ಚನ್ ಕುಟುಂಬ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ, 2020 ಮತ್ತು 2024ರ ನಡುವೆ ಸುಮಾರು 200 ಕೋಟಿ ರೂ.ಗಳನ್ನು ರಿಯಲ್ ಎಸ್ಟೇಟ್ ಮೂಲಕ ಗಳಿಸಿದೆ ಎನ್ನಲಾಗಿದೆ.
ಐಶ್ವರ್ಯಾ ರೈ ಜೊತೆ ಬಚ್ಚನ್ ಕುಟುಂಬಕ್ಕೆ ಹೊಂದಾಣಿಕೆ ಇಲ್ಲ, ಅದಕ್ಕೇ ಅವರು ದೂರ ಇದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಆದ್ದರಿಂದಲೇ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ವದಂತಿಗಳಲ್ಲಿ ಎಷ್ಟು ಸತ್ಯ ಎಂಬುದು ಭವಿಷ್ಯದಲ್ಲಿ ತಿಳಿದು ಬರಬೇಕಿದೆ.