Asianet Suvarna News Asianet Suvarna News

ಓವೈಸಿ ಪಾಕಿಸ್ತಾನಕ್ಕೆ ಹೋದ್ರೆ ಭಾರತೀಯ ಮುಸ್ಲಿಂರಿಗೆ ನೆಮ್ಮದಿ; ಸೈಯದ್ ವಾಸೀಮ್ ತಿರುಗೇಟು!

ಶ್ರೀ ರಾಮ ಮಂದಿರ ಭೂಮಿ ಪೂಜೆ ಬೆನ್ನಲ್ಲೇ  AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾಮ ಮಂದಿರ ನಿರ್ಮಾಣಕ್ಕೆ ಅಸಮಾಧ ವ್ಯಕ್ತಪಡಿಸಿದ ಒವೈಸಿಗೆ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ಸೈಯ್ಯದ್ ವಾಸಿಮ್ ರಿಜ್ವಿ ತಿರುಗೇಟು ನೀಡಿದ್ದಾರೆ. 

Pakistan need Asaduddin Owaisi Let Indian Muslims live peacefully says Syed Waseem Rizvi
Author
Bengaluru, First Published Aug 6, 2020, 5:56 PM IST

ನವದೆಹಲಿ(ಆ.06): ಶ್ರೀ ರಾಮ ಮಂದಿರ ತೀರ್ಪು, ಶ್ರೀ ರಾಮ ಮಂದಿರ ನಿರ್ಮಾಣ ತಯಾರಿಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದ AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಇದೀಗ ತಕ್ಕ ತಿರುಗೇಟು ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ ಬೆನ್ನಲ್ಲೇ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಓವೈಸಿ ವಿರುದ್ಧ ತಿರುಗಿ ಬಿದ್ದಿರುವ ಶಿಯಾ ವಕ್ಫ್ ಬೋರ್ಡ್, ಓವೈಸಿ ಪಾಕಿಸ್ತಾನಕ್ಕೆ ಹೋಗಲಿ,  ಭಾರತೀಯ ಮುಸ್ಲಿಂರು ನೆಮ್ಮದಿಯಾಗಿ ಜೀವನ ನಡೆಸುತ್ತಾರೆ ಎಂದಿದೆ.

ಬಾಬ್ರಿ ಮಸೀದಿ ಇತ್ತು, ಇದೆ, ಅಲ್ಲೇ ಇರುತ್ತದೆ'

ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಛ  ಸೈಯ್ಯದ್ ವಾಸಿಮ್ ರಿಜ್ವಿ, ಓವೈಸಿ ಹೇಳಿಕೆಗೆ ಗರಂ ಆಗಿದ್ದಾರೆ. ಓವೈಸಿ ಸುಮ್ಮನಿರುವುದು ಒಳಿತು. ಸುಪ್ರೀಂ ಕೋರ್ಟ್ ಸರಿಯಾದ ನಿರ್ಧಾರವನ್ನು  ಪ್ರಕಟಿಸಿದೆ. ಹಿಂದೂಗಳಿಗೆ ಸೇರಿದ್ದ ರಾಮ ಜನ್ಮ ಭೂಮಿಯನ್ನು ಹಿಂದೂಗಳಿಗೆ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ಓವೈಸಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಎರಡು ಸಮುದಾಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸೈಯ್ಯದ್ ವಾಸಿಮ್ ಹೇಳಿದ್ದಾರೆ.

ಅಯೋಧ್ಯೆ ಶಿಲಾನ್ಯಾಸಕ್ಕೆ ಮುನ್ನ ಸೂರ್ಯ VS ಓವೈಸಿ, 'ಜಾತ್ಯತೀತತೆ  ಪಾಠ

ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಒಮರ್, ಒಸಾಮ ಬಿನ್ ಲಾಡೆನ್‌ನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನಕ್ಕೆ ನಿಮ್ಮ ಅವಶ್ಯಕತೆ ಇದೆ. ಓವೈಸಿ ಪಾಕಿಸ್ತಾನಕ್ಕೆ ತೆರಳಿದರೆ ಇಲ್ಲಿನ ಮಸ್ಲಿಂರು ನೆಮ್ಮದಿಯ ಜೀವನ ಮಾಡುತ್ತಾರೆ.  ಶಾಂತಿ ಕದಡುವ ಓವೈಸಿ ಅಗತ್ಯ ಭಾರತಕ್ಕಿಲ್ಲ ಎಂದು ಸೈಯ್ಯದ್ ವಾಸಿಮ್ ರಿಜ್ವಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಭೂಮಿ ಪೂಜೆ ಬೆನ್ನಲ್ಲೇ ಓವೈಸಿ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ರಾಮ ಮಂದಿರ ಭೂಮಿ ಪೂಜೆಯಿಂದ ಹಿಂದುತ್ವ ಹಾಗೂ ಬಹುಸಂಖ್ಯಾತರು ಗೆದ್ದಿದ್ದಾರೆ. ಆದರೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆ ಸೋತಿದೆ ಎಂದು ಟ್ವೀಟ್ ಮಾಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿ ಭೂಮಿ ಪೂಜೆಯಲ್ಲಿ ಭಾಗವಿಸುವ ಮೂಲಕ ಸಾಂವಿಧಾನಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಓವೈಸಿ ಆರೋಪಿಸಿದ್ದರು.

Follow Us:
Download App:
  • android
  • ios