FIR against Mark Zuckerberg: ಅಖಿಲೇಶ್ ಬಗ್ಗೆ ವಿವಾದಾತ್ಮಕ ಪೋಸ್ಟ್: ಫೇಸ್‌ಬುಕ್‌ ಸಿಇಓ ವಿರುದ್ಧವೇ ದೂರು ದಾಖಲು!

*ಅಖಿಲೇಶ್ ಯಾದವ್ ವಿರುದ್ಧ ವಿವಾದಾತ್ಮಕ ಪೋಸ್ಟ್ ‌
*ಬುವಾ ಬಾಬುವಾ" ಶೀರ್ಷಿಕೆಯ ಫೇಸ್‌ಬುಕ್ ಪುಟ
*ಮಾರ್ಕ್ ವಿರುದ್ಧ ದೂರು ದಾಖಲಿಸಿದ ಕನೌಜ್  ನಿವಾಸಿ

FIR filed against Facebook CEO Mark Zuckerberg over defamatory post against Akhilesh Yadav mnj

ಉತ್ತರಪ್ರದೇಶ(ಡಿ. 01): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ವಿರುದ್ಧ ವಿವಾದಾತ್ಮಕ ಪೋಸ್ಟ್ (Post) ಮಾಡಿದ ಆರೋಪದ ಮೇಲೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ (Facebook CEO Mark Zuckerberg) ವಿರುದ್ಧವೇ ಪ್ರಕರಣ ದಾಖಲಾಗಿದೆ. ಯುಪಿಯ ಕನೌಜ್‌ ( Kannuaj ) ಜಿಲ್ಲೆಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಜುಕರ್‌ಬರ್ಗ್ ಜೊತೆಗೆ, ಮೊಕದ್ದಮೆಯಲ್ಲಿ ಇತರ 49 ಜನರನ್ನು ಹೆಸರನ್ನು ಸೇರಿಸಲಾಗಿದೆ ಎಂದು  ತಿಳಿದುಬಂದಿದೆ . ಕುತೂಹಲಕಾರಿಯಾಗಿ, ಜುಕರ್‌ಬರ್ಗ್ ಸ್ವತಃ ಯಾದವ್ ವಿರುದ್ಧ ಯಾವುದೇ ಮಾನಹಾನಿಕರ ಪೋಸ್ಟ್ ಮಾಡಿಲ್ಲ. ಅವರ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು (Comment) ಪೋಸ್ಟ್ ಮಾಡಲು ಸಾಮಾಜಿಕ ಜಾಲತಣಾ ಫೇಸ್‌ಬುಕ್ ಬಳಸಿದ್ದರಿಂದ ಅವರ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಯುಪಿಯ ಕನೌಜ್ ಜಿಲ್ಲೆಯ ಸರಹತಿ ಗ್ರಾಮದ ನಿವಾಸಿ ಅಮಿತ್ ಕುಮಾರ್‌ (Amit Kumar) ಅವರು ಅಖಿಲೇಶ್ ಯಾದವ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಜುಕರ್‌ಬರ್ಗ್ ಮತ್ತು ಇತರ 49 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. "ಬುವಾ ಬಾಬುವಾ (Bua Babua)" ಶೀರ್ಷಿಕೆಯ ಫೇಸ್‌ಬುಕ್ ಪುಟದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರ ಇಮೇಜ್‌ಗೆ ಕಳಂಕ ತರುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದ್ದಾರೆ. 

ಜುಕರ್‌ಬರ್ಗ್ ಅವರ ಹೆಸರನ್ನು ಕೈಬಿಟ್ಟ ಪೋಲಿಸ್!

ಗಮನಾರ್ಹವಾಗಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ (BSP cheif Mayawati) ಮತ್ತು ಜನಪ್ರಿಯ ರಾಜಕೀಯ ಪ್ರತಿಸ್ಪರ್ಧಿಗಳಾದ ಅಖಿಲೇಶ್ ಯಾದವ್ ಅವರು 2019 ರ ಸಂಸತ್ತಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಾಗ "ಬುವಾ ಬಾಬುವಾ" ಎಂಬ ಪದವನ್ನು ರಚಿಸಲಾಗಿತ್ತು. "ತನಿಖೆಯ ಸಂದರ್ಭದಲ್ಲಿ (ಫೇಸ್‌ಬುಕ್) ಪುಟದ ನಿರ್ವಾಹಕರ (Facebook Page Admin) ವಿರುದ್ಧ ತನಿಖೆ ನಡೆಸುತ್ತಿರುವಾಗ ಜುಕರ್‌ಬರ್ಗ್ ಅವರ ಹೆಸರನ್ನು ಕೈಬಿಡಲಾಗಿದೆ" ಎಂದು ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಧರಂವೀರ್ ಸಿಂಗ್ ಅವರು ಕುಮಾರ್ ಅವರ ಮನವಿ ಮೇರೆಗೆ ಪ್ರಕರಣವನ್ನು ದಾಖಲಿಸುವಂತೆ ಪೊಲೀಸರಿಗೆ ತಿಳಿಸಿದ್ದಾರೆ. 

Twitter new photo rules: ಹೊಸ CEO, ಹೊಸ ರೂಲ್ಸ್, ಫೋಟೊ ಸಂಬಂಧ ಹಲವು ನಿಬಂಧನೆ

ಅಮಿತ್ ಕುಮಾರ್‌ ಕುಮಾರ್  ಮೇ 25 ರಂದು ಪೊಲೀಸ್ ವರಿಷ್ಠಾಧಿಕಾರಿಗೆ ಅರ್ಜಿಯನ್ನು ಕಳುಹಿಸಿದ್ದರು ಆದರೆ ಅವರ ಅರ್ಜಿ ನೆನೆಗುದಿಗೆ ಬಿದ್ದಿತ್ತು. ಆದರೆ ಅಷ್ಟಕ್ಕೇ ಸುಮ್ಮನಾಗದ ಅಮಿತ್ ಮುಂದೆ ಹೋಗಿ ಎಫ್‌ಐಆರ್ ದಾಖಲಿಸಿದ್ದರು ಮತ್ತು ಸಿಇಒ ಜುಕರ್‌ಬರ್ಗ್ ಜೊತೆಗೆ ಫೇಸ್‌ಬುಕ್ ಪುಟದ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು.

ನಾಗರಿಕರಿಗೆ ಸಿಗಲಿದೆ ದತ್ತಾಂಶ ದುರ್ಬಳಕೆಯಿಂದ ರಕ್ಷಣೆ, ತಪ್ಪಿದರೆ ಭಾರೀ ದಂಡ!

 ಮಹತ್ವದ ದತ್ತಾಂಶ ರಕ್ಷಣಾ ಮಸೂದೆಯ ಕರಡು ವರದಿಯನ್ನು(Data Protection Draft Bill) ಸಂಸತ್ತಿನ ಜಂಟಿ ಸದನ ಸಮಿತಿ (JPC), ಸೋಮವಾರ ಬಹುಮತದಿಂದ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ನ.29ರಿಂದ ಆರಂಭ ಆಗುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯ ಕರಡು ವರದಿ ಮಂಡನೆ ಆಗಲಿದೆ. ದತ್ತಾಂಶ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದ ಹಿನ್ನೆಲೆಯಲ್ಲಿ 2019ರಲ್ಲೇ ದತ್ತಾಂಶ ರಕ್ಷಣಾ ಮಸೂದೆಯನ್ನು (The Personal Data Protection Bill, 2019) ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ ಇದರ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ಜೆಪಿಸಿಗೆ (Joint Parliamentary Committee) ಒಪ್ಪಿಸಲಾಗಿತ್ತು.

Twitterಗೆ ಭಾರತೀಯ ಮೂಲದ ಪರಾಗ್‌ ಮುಖ್ಯಸ್ಥ, ಡೋರ್ಸಿಗೆ ಬಲವಂತದ ನಿವೃತ್ತಿ!

ಈಗ ಇದಕ್ಕೆ ಜೆಪಿಸಿ ಒಪ್ಪಿಗೆ ಸೂಚಿಸಿದೆಯಾದರೂ ತಮ್ಮ ಅಭಿಪ್ರಾಯಗಳನ್ನು ಪರಿಗಣಿಸಿಲ್ಲ ಎಂದು ಸಮಿತಿ ಸದಸ್ಯರಾದ ಜೈರಾಂ ರಮೇಶ್‌ ಹಾಗೂ ಡೆರಿಕ್‌ ಓಬ್ರಿಯಾನ್‌ ಆಕ್ಷೇಪ ಸಲ್ಲಿಸಿದ್ದಾರೆ. ದತ್ತಾಂಶ ರಕ್ಷಣಾ ಕಾಯ್ದೆಯಿಂದ ಸರ್ಕಾರಿ ಇಲಾಖೆಗಳನ್ನು ಸಂಪೂರ್ಣ ಹೊರಗಿಡುವುದು ಸರಿಯಲ್ಲ ಎಂಬುದು ಜೈರಾಂ ಆಕ್ಷೇಪವಾಗಿದೆ.

Latest Videos
Follow Us:
Download App:
  • android
  • ios