'ಸೀತಾರಾಮ' ಧಾರಾವಾಹಿ ತಂಡ ಭೀಮಾ ಚಿತ್ರದ "ಡೋಂಟ್ ವರಿ ಬೇಬಿ ಅಮ್ಮ" ಹಾಡಿಗೆ ರೀಲ್ಸ್ ಮಾಡಿದೆ. ವೈಷ್ಣವಿ ಗೌಡ, ಮೇಘನಾ ಶಂಕರಪ್ಪ, ಪೂಜಾ ಲೋಕೇಶ್, ಸಿಂಧು ರಾವ್ ನೃತ್ಯ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸೀತಾಳ ದುಃಖದ ಸನ್ನಿವೇಶದಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದುನಿಯಾ ವಿಜಯ್​ ನಟನೆಯ ಭೀಮಾ ಚಿತ್ರದ ಡೋಂಟ್​ ವರಿ ಬೇಬಿಯಮ್ಮಾ.. ಹಾಡು ಸಕತ್​ ಹಿಟ್​ ಆಗಿದ್ದು, ಈಗಲೂ ಇದಕ್ಕೆ ರೀಲ್ಸ್​ ಮಾಡುತ್ತಲೇ ಇರುತ್ತಾರೆ ರೀಲ್ಸ್ ಪ್ರೇಮಿಗಳು. ಇದೀಗ ಸೀತಾರಾಮ ಸೀರಿಯಲ್​ ಟೀಮಿನ ನಟಿಯರು ಈ ಹಾಡಿಗೆ ಮೈಚಳಿ ಬಿಟ್ಟು ಸಕತ್​ ಸ್ಟೆಪ್​ ಹಾಕಿದ್ದು, ಅದೀಗ ವೈರಲ್​ ಆಗಿದೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ, ವಿಲನ್​ ಭಾರ್ಗವಿ ಪಾತ್ರಧಾರಿ ಪೂಜಾ ಲೋಕೇಶ್​ ಹಾಗೂ ರಾಮ್​ ಚಿಕ್ಕಮ್ಮನ ಪಾತ್ರದಲ್ಲಿ ನಟಿಸುತ್ತಿರುವ ಸಿಂಧು ರಾವ್​ ಅವರು ರೀಲ್ಸ್​ ಮಾಡಿದ್ದು, ಅದನ್ನು ವೈಷ್ಣವಿ ಗೌಡ ಅವರು ಶೇರ್​ ಮಾಡಿಕೊಂಡಿದ್ದಾರೆ.

ಇದಕ್ಕೆ ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಒಬ್ಬರಿಗಿಂತ ಒಬ್ಬರು ಸಕತ್​ ಸ್ಟೆಪ್​ ಹಾಕುತ್ತಿದ್ದಾರೆ. ಕೆಲವರು ಸೀತಾ ಅರ್ಥಾತ್ ವೈಷ್ಣವಿ ಅವರ ಕಾಲೆಳೆಯುತ್ತಿದ್ದಾರೆ. ಸೀರಿಯಲ್​ನಲ್ಲಿ ಮಗಳು ಸತ್ತು ಹುಚ್ಚಿಯಾಗಿದ್ರೆ, ಇಲ್ಲಿ ಹೀಗೆ ಡಾನ್ಸ್ ಮಾಡೋದಾ ಎನ್ನುತ್ತಿದ್ದಾರೆ. ಭಾರ್ಗವಿಗೇನೋ ಸಕತ್​ ಖುಷಿಯಾಗಿದೆ, ಡಾನ್ಸ್​ ಮಾಡ್ತಾಳಾ, ನೀನ್ಯಾಕಮ್ಮಾ ಹೀಗೆ ಮಾಡುತ್ತಿದ್ದೆಯಾ ಎಂದು ನಟಿಯನ್ನು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ನಟಿ ವೈಷ್ಣವಿ ಗೌಡ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆಕ್ಟೀವ್​ ಇದ್ದಾರೆ. 

ಫೋನ್​ಗಳೆಲ್ಲಾ ಜಿಮ್​ಗೆ ಹೋದ್ವಂತೆ ಯಾಕೆ? ಸೀತಾಳ ಉತ್ತರಕ್ಕೆ ತಲೆ ಚಚ್ಚಿಕೊಂಡ ಸೀತಾರಾಮ ಟೀಮ್​!

 ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

 ಇನ್ನು ಮೇಘನಾ ಶಂಕರಪ್ಪ ಅವರ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್‌

View post on Instagram