ರಾಜಸ್ಥಾನದಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಫೈಟರ್ ಜೆಟ್ಟೊಂದು ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾಜಸ್ಥಾನ: ರಾಜಸ್ಥಾನದಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಫೈಟರ್ ಜೆಟ್ಟೊಂದು ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಚುರು ಜಿಲ್ಲೆಯ ರತನ್‌ಗಢದ ರಾಜಲ್ದೇಸರ್ ಪ್ರದೇಶದಲ್ಲಿ ಫೈಟರ್ ಜೆಟ್ ಅಪಘಾತಕ್ಕೀಡಾಗಿದ್ದು, ರಾಜಲ್ದೇಸರ್‌ನ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ ಈ ಫೈಟರ್ ಜೆಟ್ ತೆರೆದ ಖಾಲಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಆರಂಭಿಕ ಮಾಹಿತಿಯ ಪ್ರಕಾರ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳ ವಿವರ ಇನ್ನಷ್ಟೇ ತಿಳಿಯಬೇಕಿದೆ. ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.

ಅಪಘಾತಕ್ಕೀಡಾದ ವಿಮಾನವೂ ಸೂರತ್‌ಗರ್ ವಾಯುನೆಲೆಯಿಂದ ಟೇಕಾಫ್‌ ಆಗಿದ್ದು, ಬನೋದ ಗ್ರಾಮದ ಕೃಷಿ ಭೂಮಿಯಲ್ಲಿ ಪತನಗೊಂಡು ಬಿದ್ದಿದೆ. ಜಾಗ್ವಾರ್ ಫೈಟ್ ಅಪಘಾತಕ್ಕೀಡಾದ ವಿಚಾರವನ್ನು ಭಾರತೀಯ ವಾಯುಸೇನೆ ಖಚಿತಪಡಿಸಿದೆ. ಮಧ್ಯಾಹ್ನ 1.25ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಎಂದು ರಾಜಲ್ದೇಸರ್ ಸ್ಟೇಷನ್ ಹೌಸ್ ಅಧಿಕಾರಿ ಕಮಲೇಶ್ ಮಾಹಿತಿ ನೀಡಿದ್ದಾರೆ.


Scroll to load tweet…

Scroll to load tweet…



Scroll to load tweet…