ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್‌ನ ಜನಪ್ರಿಯತೆ ಗಗನಕ್ಕೇರಿದೆ. ಒಂದು ಕಾಲದಲ್ಲಿ ಶ್ರೀಮಂತ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸಂಪ್ರದಾಯ ಇದೀಗ ಹಳ್ಳಿಗಳಿಗೂ ವ್ಯಾಪಿಸಿದೆ. ಗ್ರಾಮೀಣ ಮದುವೆಗಳಲ್ಲೂ ಪ್ರೀ-ವೆಡ್ಡಿಂಗ್ ಶೂಟ್‌ನ ಕಲ್ಚರ್ ಬೇರೂರಿದ್ದು, ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಯಾದಗಿರಿ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಎದ್ದುಕಾಣುತ್ತಿದೆ.
ಯಾದಗಿರಿ (ಏ.21) ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್‌ನ ಜನಪ್ರಿಯತೆ ಗಗನಕ್ಕೇರಿದೆ. ಒಂದು ಕಾಲದಲ್ಲಿ ಶ್ರೀಮಂತ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸಂಪ್ರದಾಯ ಇದೀಗ ಹಳ್ಳಿಗಳಿಗೂ ವ್ಯಾಪಿಸಿದೆ. ಗ್ರಾಮೀಣ ಮದುವೆಗಳಲ್ಲೂ ಪ್ರೀ-ವೆಡ್ಡಿಂಗ್ ಶೂಟ್‌ನ ಕಲ್ಚರ್ ಬೇರೂರಿದ್ದು, ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಯಾದಗಿರಿ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಎದ್ದುಕಾಣುತ್ತಿದೆ.
ಗ್ರಾಮೀಣ ಸೊಗಡಿನ ಪ್ರೀ-ವೆಡ್ಡಿಂಗ್ ಶೂಟ್
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುಮನೂರು ಗ್ರಾಮದ ಕುಪೇಂದ್ರ ಹಾಗೂ ವಡಗೇರಾ ಪಟ್ಟಣದ ಶ್ರೀದೇವಿಯ ವಧು-ವರರ ಪ್ರೀ-ವೆಡ್ಡಿಂಗ್ ಶೂಟ್ ಗಮನ ಸೆಳೆದಿದೆ. ಈ ಜೋಡಿಯ ಫೋಟೋ ಶೂಟ್ ಸಂಪೂರ್ಣವಾಗಿ ಗ್ರಾಮೀಣ ಸೊಗಡಿನಲ್ಲಿ ನಡೆದಿದ್ದು, ಆಧುನಿಕ ಫ್ಯಾಷನ್ ಡ್ರೆಸ್‌ಗಳ ಬದಲಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷವಾಗಿದೆ.

ಕುಪೇಂದ್ರ ಪಂಚೆ ಧರಿಸಿ, ತಲೆಗೆ ಟವೆಲ್ ಸುತ್ತಿಕೊಂಡು ಕುರಿಗಾಹಿಯ ವೇಷದಲ್ಲಿ ಕಾಣಿಸಿಕೊಂಡರೆ, ಶ್ರೀದೇವಿ ಇಲಕಲ್ ಸೀರೆಯಲ್ಲಿ, ಕೈಯಲ್ಲಿ ಬಡಿಗೆ ಹಿಡಿದು ಕುರಿ ಕಾಯುವ ಗ್ರಾಮೀಣ ಯುವತಿಯಾಗಿ ಚಿತ್ರಿತರಾಗಿದ್ದಾರೆ. ಈ ಶೂಟ್‌ನಲ್ಲಿ ಗ್ರಾಮದ ಸರಳತೆ, ಸಾಂಪ್ರದಾಯಿಕ ಜೀವನಶೈಲಿಯ ಸೊಗಸು ಪ್ರತಿಬಿಂಬಿಸಿದೆ.

ಇದನ್ನೂ ಓದಿ:ಹೊನ್ನಾವರ ಈಗ ಪ್ರೀ ವೆಡ್ಡಿಂಗ್ ಶೂಟ್ ಹಾಟ್‌ಸ್ಪಾಟ್, ಶರಾವತಿ ಹಿನ್ನೀರು, ಬೀಚ್‌ನಲ್ಲಿ ತಾಸಿಗೆ ಶುಲ್ಕ ಎಷ್ಟು?
ಹೊಸ ಒಲವಿನ ಸಂಕೇತ
ಈ ಪ್ರೀ-ವೆಡ್ಡಿಂಗ್ ಶೂಟ್ ಗ್ರಾಮೀಣ ಯುವ ಜೋಡಿಗಳಿಗೆ ಹೊಸ ಒಲವಿನ ಸಂಕೇತವಾಗಿದೆ. ಆಧುನಿಕತೆಯ ಗಾಳಿಯೊಂದಿಗೆ ಸಾಂಪ್ರದಾಯಿಕ ಮೌಲ್ಯಗಳನ್ನು ಒಟ್ಟುಗೂಡಿಸುವ ಈ ಶೂಟ್, ಯಾದಗಿರಿಯಲ್ಲಿ ಮಾತ್ರವಲ್ಲದೇ ಇತರ ಗ್ರಾಮೀಣ ಭಾಗಗಳಿಗೂ ಸ್ಫೂರ್ತಿಯಾಗಿದೆ. ಇಂದು ಹಸೆಮಣೆ ಏರಲಿರುವ ಕುಪೇಂದ್ರ ಮತ್ತು ಶ್ರೀದೇವಿಯ ಈ ಜೋಡಿ, ತಮ್ಮ ಪ್ರೀ-ವೆಡ್ಡಿಂಗ್ ಶೂಟ್ ಮೂಲಕ ಗ್ರಾಮೀಣ ಸಂಸ್ಕೃತಿಯ ಸೌಂದರ್ಯವನ್ನು ಅಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಆ್ಯಕ್ಟರ್ಸ್ ಹಣೆಬರಹ ನೋಡಿ... ಬಚ್ಚಲು ಮನೆಯ ಪೊರಕೆಯಲ್ಲಿ ಹೂವು ಗುಡಿಸಿ ತಲೆ ಮೇಲೆ ಸುರೀತಾರೆ...
ಒಟ್ಟಿನಲ್ಲಿ ಪ್ರೀ-ವೆಡ್ಡಿಂಗ್ ಶೂಟ್‌ನ ಈ ಹೊಸ ರೂಪವು ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಸಮ್ಮಿಲನವನ್ನು ಸೂಚಿಸುತ್ತದೆ. ಯಾದಗಿರಿಯ ಕುಪೇಂದ್ರ ಮತ್ತು ಶ್ರೀದೇವಿಯ ಈ ಶೂಟ್, ಹಳ್ಳಿಗಳಲ್ಲಿ ಬೆಳೆಯುತ್ತಿರುವ ಈ ಕಲ್ಚರ್‌ಗೆ ಒಂದು ಉದಾಹರಣೆಯಾಗಿದ್ದು, ಇದು ಮುಂದಿನ ಮದುವೆ ಸೀಸನ್‌ಗಳಲ್ಲಿ ಇನ್ನಷ್ಟು ಜನಪ್ರಿಯವಾಗುವ ಸಾಧ್ಯತೆಯನ್ನು ತೋರಿಸಿದಂತಿದೆ.
