ಇಟ್ಟಿಗೆ ಗೂಡಿನ ಮೇಲೆ ದಾಳಿಗೆ ಬಂದ ಮಹಿಳಾ ಅಧಿಕಾರಿ ವೀಡಿಯೋ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಮಾಲೀಕನ ಫೋನ್ ಅನ್ನು ಇಟ್ಟಿಗೆಯಿಂದಲೇ ಒಡೆದು ಹಾಕಿದ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ.
ಲಖನೌ: ಇಟ್ಟಿಗೆ ಗೂಡಿನ ಮೇಲೆ ದಾಳಿಗೆ ಬಂದ ಮಹಿಳಾ ಅಧಿಕಾರಿ ವೀಡಿಯೋ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಮಾಲೀಕನ ಫೋನ್ ಅನ್ನು ಇಟ್ಟಿಗೆಯಿಂದಲೇ ಒಡೆದು ಹಾಕಿದ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ವಿನಿತಾ ಸಿಂಗ್ ಅವರು ಇಟ್ಟಿಗೆ ಗೂಡಿನ ಪರಿಶೀಲನೆಗೆ ಬಂದಿದ್ದು, ಈ ವೇಳೆ ದಾಳಿಯ ಪ್ರಕ್ರಿಯೆಯನ್ನು ಗೂಡಿನ ಮಾಲೀಕ ವೀಡಿಯೋ ಮಾಡುತ್ತಿದ್ದಿದ್ದು ಗಮನಕ್ಕೆ ಬಂದಿದೆ. ಇದರಿಂದ ಕೋಪಗೊಂಡ ಆಯುಕ್ತೆ ಅವರ ಕೈಯಿಂದ ಫೋನ್ ಕಿತ್ತುಕೊಂಡು ಅದನ್ನು ನೆಲಕ್ಕೆ ಎಸೆದು ನಂತರ ಇಟ್ಟಿಗೆಯಿಂದಲೇ ಜಜ್ಜಿರುವ ದೃಶ್ಯ ಸೆರೆ ಆಗಿದೆ. ಘಟನೆ ನಡೆಯುವ ವೇಳೆ ಇತರ ಪೊಲೀಸ್ ಸಿಬ್ಬಂದಿ ಕೂಡ ಅಲ್ಲಿದ್ದು, ಇಟ್ಟಿಗೆ ಮಾಲೀಕನ ಜೊತೆ ಪರಸ್ಪರ ಬಿಸಿಯೇರಿದ ಮಾತಿನ ಚಕಮಕಿಯನ್ನು ವೀಡಿಯೋದಲ್ಲಿ ಕಾಣಬಹುದಾಗಿಇದೆ.
ಅಲ್ಲದೇ ವೀಡಿಯೋದಲ್ಲಿ ಇಟ್ಟಿಗೆ ಗೂಡಿನ ಮಾಲೀಕ ಹಾಗೂ ಆಯುಕ್ತೆ ವಿನಿತಾ ಸಿಂಗ್ (Vinita Singh) ಪರಸ್ಪರ ವಾಗ್ವಾದದಲ್ಲಿ ತೊಡಗಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆಯುಕ್ತೆ ಇಟ್ಟಿಗೆ ಗೂಡಿನ ಮಾಲೀಕ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿದ್ದರೆ, ಆಯುಕ್ತೆಯ ಈ ಆರೋಪವನ್ನು ಇಟ್ಟಿಗೆ ಗೂಡಿನ ಮಾಲೀಕ ನಿರಾಕರಿಸಿದ್ದು, ಕಾರ್ಯಾಚರಣೆಯ ವಿಡಿಯೋ ಮಾಡುವ ಹಕ್ಕು ನನಗೆ ಇದೆ ಎಂದು ಹೇಳಿದ್ದಾನೆ.
ಇಟ್ಟಿಗೆ ಗೂಡಿನಲ್ಲಿ ಮಲಗಿದ್ದ ಐವರು ಕಾರ್ಮಿಕರು ಉಸಿರುಕಟ್ಟಿ ಸಾವು
ಈ ಇಟ್ಟಿಗೆ ಗೂಡಿನಲ್ಲಿ (brick kiln) ಕಾರ್ಮಿಕರ ಒಪ್ಪಿಗೆ ಇಲ್ಲದೇ ಅವರನ್ನು ವಶದಲ್ಲಿ ಇರಿಸಿ ಕೆಲಸ ಮಾಡಲಾಗುತ್ತಿದೆ ಎಂಬ ವರದಿ ಬಂದಿದೆ ಎಂದು ಹೇಳಿ ಮೇ. 23ರಂದು ಸ್ಥಳಕ್ಕೆ ಈ ಕಾರ್ಮಿಕ ಅಧಿಕಾರಿ ಬಂದಿದ್ದು ಅವರಿಗೆ ಅಲ್ಲಿ ಅಂತಹ ಆರೋಪಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ, ಜೊತೆಗೆ ಅವರು ಕಾರ್ಮಿಕರ ಹೇಳಿಕೆಗಳನ್ನು ಸಹ ದಾಖಲಿಸಿದ್ದಾರೆ ಇದಾದ ಬಳಿಕ ಈ ಅಧಿಕಾರಿಗಳು 1 ಲಕ್ಷ ರೂ ಪಾವತಿಸುವಂತೆ ಮಾಲೀಕರನ್ನು ಕೇಳಿದ್ದಾರೆ. ಈ ವೇಳೆ ಮಾಲೀಕ 15,000 ಪಾವತಿಸಿ ಉಳಿದ ಹಣವನ್ನು ನಂತರ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ.
ಅಧಿಕಾರಿಗಳು ತಮ್ಮ ಬಳಿ ಇಲ್ಲದ ಉಳಿದ ಹಣವನ್ನು ಸಂಗ್ರಹಿಸಲು ತಮ್ಮ ಇಟ್ಟಿಗೆ ಗೂಡುಗೆ ಮರಳಿ ಬಂದಿದ್ದು, ಆದ್ದರಿಂದ ಈ ಅನ್ಯಾಯವನ್ನು ವೀಡಿಯೋ ರೆಕಾರ್ಡ್ ಮಾಡಲು ಪ್ರಯತ್ನಿಸಿದ್ದಾಗ ನನ್ನ ಮೊಬೈಲ್ ಕಸಿದು ಒಡೆದು ಹಾಕಿದರು ಎಂದು ಇಟ್ಟಿಗೆ ಗೂಡಿನ ಮಾಲೀಕ ಬಿಟ್ಟು ಉಪೇಂದ್ರ ಸಿಂಗ್ (Bittu Upendra Singh) ಹೇಳಿದ್ದಾರೆ. ವೀಡಿಯೋ ರೆಕಾರ್ಡ್ ಮಾಡಿದ್ದು, ಅಧಿಕಾರಿಗಳನ್ನು ಕೆರಳಿಸಿತು, ನಂತರ ಅವರ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. ಬಾಕಿ ಉಳಿದ ಲಂಚದ ಹಣವನ್ನು ಪಡೆದುಕೊಳ್ಳುವ ಸಲುವಾಗಿ ಇವರು ಮತ್ತೆ ಬಂದು ಕಿರುಕುಳ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ದೃಶ್ಯ ಚಿತ್ರೀಕರಿಸಿದ ನನ್ನ ಮೊಬೈಲ್ ಫೋನ್ ಅನ್ನು ಒಡೆದು ಹಾಕಿದರು ಎಂದು ಉಪೇಂದ್ರ ಸಿಂಗ್ ದೂರಿದ್ದಾರೆ.
ದಿನಗೂಲಿ ಮಾಡೋ ಹೋಮ್ ಗಾರ್ಡ್ಸ್‌ಗಳಿಂದ ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಕಮಾಂಡೆಂಟ್
