Asianet Suvarna News Asianet Suvarna News

Viral Video: ಯುಪಿಯ ಕಾಸ್ಗಂಜ್‌ನಲ್ಲಿ ಕೋರ್ಟ್‌ನಲ್ಲೇ ಮಹಿಳಾ ವಕೀಲರ ಕಿತ್ತಾಟ: ಕೇಸ್‌ ದಾಖಲು

ಇಬ್ಬರು ಮಹಿಳಾ ವಕೀಲೆಯರು ಹೊಡೆದಾಡಿಕೊಂಡಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಈ ವಿಡಿಯೋದಲ್ಲಿ ಪುರುಷರೊಬ್ಬರು ಮಹಿಳೆಯರ ಜಗಳ ಬಿಡಿಸಲು ಹೋದರೂ ಅವರಿಗೆ ಸಾಧ್ಯವಾಗಲಿಲ್ಲ. ನಂತರ ಮಹಿಳಾ ಪೊಲೀಸ್‌ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. 

female advocates in kasganj uttar pradesh engage in vicious brawl ash
Author
First Published Oct 29, 2022, 6:33 PM IST | Last Updated Oct 29, 2022, 6:38 PM IST

ಸಾಮಾಜಿಕ ಜಾಲತಾಣದಲ್ಲಿ (Social Media) ಇತ್ತೀಚೆಗೆ ವೈರಲ್‌ ವಿಡಿಯೋಗಳದ್ದೇ (Viral Video) ಕಾರುಬಾರು.. ಇದಕ್ಕೆ ಇತ್ತೀಚಿನ ಸೇರ್ಪಡೆ ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳಾ ವಕೀಲರ (Female Advocates) ಕಿತ್ತಾಟ (Brawl), ಹೊಡೆದಾಟದ ದೃಶ್ಯಾವಳಿಗಳು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್‌ ಆಗಿದ್ದು, ಪೊಲೀಸರು ಮಹಿಳಾ ವಕೀಲರ ಮೇಲೆ ಕೇಸ್‌ ದಾಖಲಿಸಿಕೊಂಡಿದ್ದಾರೆ (Case Booked) ಎಂದೂ ತಿಳಿದುಬಂದಿದೆ. ಉತ್ತರ ಪ್ರದೇಶದ ಕಾಸ್ಗಂಜ್‌ ಜಿಲ್ಲೆಯಲ್ಲಿ (Kasganj District) ಈ ಘಟನೆ ನಡೆದಿದ್ದು, ಇಬ್ಬರು ಮಹಿಳಾ ವಕೀಲೆಯರು ಪರಸ್ಪರ ಕೂದಲು ಹಿಡಿದುಕೊಂಡು ಜಗಳವಾಡಿದ್ದಾರೆ. ಅಲ್ಲದೆ, ಒಬ್ಬರನೊಬ್ಬರು ಹೊಡೆದಾಡಿಕೊಂಡು ಜಗಳವಾಡಿರುವುದು ವರದಿಯಾಗಿದೆ. ಇನ್ನು, ಇಷ್ಟೆಲ್ಲ ಘಟನೆ ನಡೆದಿರೋದು ಕೋರ್ಟ್‌ ಆವರಣದಲ್ಲೇ (Court Premises). 

ಇಬ್ಬರು ಮಹಿಳಾ ವಕೀಲೆಯರು ಹೊಡೆದಾಡಿಕೊಂಡಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಈ ವಿಡಿಯೋದಲ್ಲಿ ಪುರುಷರೊಬ್ಬರು ಮಹಿಳೆಯರ ಜಗಳ ಬಿಡಿಸಲು ಹೋದರೂ ಅವರಿಗೆ ಸಾಧ್ಯವಾಗಲಿಲ್ಲ. ಜೀನ್ಸ್‌ ಹಾಗೂ ಶರ್ಟ್‌ ಧರಿಸಿರುವ ಮಹಿಳಾ ವಕೀಲೆಯೊಬ್ಬರು ಸೀರೆ ಉಟ್ಟಿರುವ ವಕೀಲೆ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸೀರೆ ಉಟ್ಟಿದ್ದ ವಕೀಲೆ, ಇನ್ನೊಬ್ಬ ವಕೀಲೆಯ ಕೂದಲು ಹಿಡಿದು ಎಳೆದಾಡಿದ್ದು, ಆಕೆಯನ್ನು ನೆಲಕ್ಕೆ ತಳ್ಳಿದ್ದಾಳೆ. ನಂತರ, ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. 

ಇದನ್ನು ಓದಿ: ಸೌಂದರ್ಯ ಸ್ಪರ್ಧೆಯಲ್ಲಿ ಹೊಡೆದಾಟ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡ ಶ್ರೀಲಂಕಾ

ನಂತರ, ಮಹಿಳಾ ಪೊಲೀಸ್‌ ಒಬ್ಬರು ಅವರಿಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ, ಇಬ್ಬರೂ ಮಹಿಳಾ ವಕೀಲೆಯರು ಇನ್ನೊಬ್ಬರ ಮೇಲೆ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಜನರು ಸಹ ಅವರಿಬ್ಬರ ಜಗಳ ನೋಡಿಕೊಂಡು ಸುಮ್ಮನೆ ನಿಂತಿದ್ದರು. ಹಾಗೂ, ತಮ್ಮ ಫೋನ್‌ಗಳಲ್ಲಿ ಅವರಿಬ್ಬರ ಜಗಳದ ವಿಡಿಯೋ ತೆಗೆಯುವಲ್ಲಿ ತಲ್ಲೀನರಾಗಿದ್ದರು. 

ಉತ್ತರ ಪ್ರದೇಶದ ಕಾಸ್ಗಂಜ್‌ನ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಫ್ಯಾಮಿಲಿ ಕೋರ್ಟ್‌ನಲ್ಲಿ ಈ ಜಗಳ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಮಹಿಳಾ ರೋಗಿಯನ್ನು ಕೂದಲಿಳಿಡಿದು ಎಳೆದೊಯ್ದ ನರ್ಸ್: ವಿಡಿಯೋ ವೈರಲ್‌

ವಿಡಿಯೋ ಏನು ತೋರಿಸುತ್ತದೆ?
ಈ ವಿಡಿಯೋ ಇಬ್ಬರು ವಕೀಲೆಯರನ್ನು ತೋರಿಸುತ್ತದೆ - ಒಬ್ಬರು ಶರ್ಟ್ - ಪ್ಯಾಂಟ್‌ಗಳನ್ನು ಧರಿಸಿದ್ದಾರೆ, ಮತ್ತೊಬ್ಬರು ಸೀರೆಯನ್ನು ಧರಿಸಿದ್ದಾರೆ. ಹಾಗೂ, ಇವರಿಬ್ಬರು ಕುಸ್ತಿ ಪಟುಗಳಂತೆ ವರ್ತಿಸಿದ್ದಾರೆ. ಒಬ್ಬ ಪುರುಷನು ಮಧ್ಯಪ್ರವೇಶಿಸಿ ಮಹಿಳೆಯರ ಜಗಳ ಬಿಡಿಸಲು ಪ್ರಯತ್ನಿಸುತ್ತಾನೆ. ಆದರೆ, ಅವನ ಪ್ರಯತ್ನಗಳು ಶೀಘ್ರದಲ್ಲೇ ವ್ಯರ್ಥವೆಂದು ಸಾಬೀತಾಗಿದೆ.
ಪ್ಯಾಂಟ್-ಶರ್ಟ್‌ನಲ್ಲಿದ್ದ ವಕೀಲೆಯು ಸೀರೆಯಲ್ಲಿದ್ದ ವಕೀಲೆಗೆ ಕಪಾಳಮೋಕ್ಷ ಮಾಡುತ್ತಾರೆ, ಮತ್ತು ಶೀಘ್ರದಲ್ಲೇ, ಇಬ್ಬರೂ ಮಹಿಳೆಯರು ಒಬ್ಬರನ್ನೊಬ್ಬರು ಕೂದಲಿನಿಂದ ಎಳೆದುಕೊಂಡು, ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಇತರ ಪ್ರೇಕ್ಷಕರು ನಾಟಕವನ್ನು ನೋಡಿಕೊಂಡು ನಿಂತಿರುತ್ತಾರೆ ಮತ್ತು ಘಟನೆಯನ್ನು ಫೋನ್‌ನಲ್ಲಿ ಸೆರೆಹಿಡಿಯುತ್ತಾರೆ.

ಇಬ್ಬರೂ ಮಹಿಳೆಯರು ಕಪಾಳಮೋಕ್ಷ ಹಾಗೂ ಪರಸ್ಪರ ಹಲ್ಲೆ ನಡೆಸುತ್ತಿರುವಾಗ, ಒಬ್ಬ ಮಹಿಳಾ ಪೋಲೀಸ್ ಮಧ್ಯಪ್ರವೇಶಿಸಿ ಇಬ್ಬರು ವಕೀಲರು ಹಿಂದೆ ಸರಿಯುವಂತೆ ನೋಡಿಕೊಳ್ಳುತ್ತಾರೆ. ಮಹಿಳಾ ವಕೀಲರು ಅಗೌರವ ತೋರುತ್ತಿದ್ದಾರೆಂದು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಲೇ ಇದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಪಟಾಕಿ ಹಾರಿಸುತ್ತಿದ್ದವನ ಬಂಧನ: ವಿಡಿಯೋ ವೈರಲ್

ಜಗಳಕ್ಕೆ ಕಾರಣವೇನು?
ವರದಿಗಳ ಪ್ರಕಾರ, ಕಾದಾಟದಲ್ಲಿ ತೊಡಗಿರುವ ಇಬ್ಬರು ಮಹಿಳಾ ವಕೀಲರನ್ನು ಕಾಸ್ಗಂಜ್‌ನ ಯೋಗಿತಾ ಸಕ್ಸೇನಾ ಮತ್ತು ಅಲಿಗಢದ ಸುನೀತಾ ಕೌಶಿಕ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಹಾಜರಾದ ದಂಪತಿಗಳಾದ ಪಾರುಲ್ ಸಕ್ಸೇನಾ ಮತ್ತು ರೌಲ್ ಬೋಸ್ ಅವರನ್ನು ಪ್ರತಿನಿಧಿಸಲು ಯೋಗಿತಾ ಸಕ್ಸೇನಾ ನ್ಯಾಯಾಲಯದಲ್ಲಿದ್ದರು ಎಂದು ವರದಿಯಾಗಿದೆ.
ಮೊದಲು ಯೋಗಿತಾ ಸಕ್ಸೇನಾ ಅವರು ಸುನಿತಾ ಕೌಶಿಕ್ ಅವರೊಂದಿಗೆ ವಾಗ್ವಾದ ನಡೆಸಿದರು, ಅದು ದೈಹಿಕ ವಾಗ್ವಾದಕ್ಕೆ ಕಾರಣವಾಯಿತು. ಈ ವಾಗ್ವಾದವು ಮತ್ತೊಂದು ಹಂತಕ್ಕೆ ಹೋಗಿದ್ದು, ಇಬ್ಬರೂ ವಕೀಲೆಯರು ಒಬ್ಬರನ್ನೊಬ್ಬರು ಒದೆಯುತ್ತಾರೆ ಹಾಗೂ ಕಪಾಳಮೋಕ್ಷವನ್ನೂ ಮಾಡಿದ್ದಾರೆ ಮತ್ತು ಪರಸ್ಪರರ ಕೂದಲು ಎಳೆದಾಡಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios