ತಂದೆ ನಮ್ಮ ಮಾತು ಕೇಳುತ್ತಿಲ್ಲ ನೀವೇ ಬುದ್ದಿ ಹೇಳಿ, ಕ್ರಿಯೇಟರ್ ರೀಲ್ಸ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಕಂಟೆಂಟ್ ಕ್ರಿಯೇಟರ್ ರೀಲ್ ಮೂಲಕ ಪ್ರಧಾನಿ ಮೋದಿಯಲ್ಲಿ ಮನವಿ ಮಾಡಿದ್ದರು. ಇದಕ್ಕೆ ಮೋದಿ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. 

ನವದೆಹಲಿ (ಮಾ.22) ಪ್ರಧಾನಿ ನರೇಂದ್ರ ಮೋದಿ ಸಾಧಕರಿಗೆ, ಪ್ರಶಸ್ತಿ ವಿಜೇತರಿಗೆ ವಿಶೇಷವಾಗಿ ಪತ್ರದ ಮೂಲಕ ಗೌರವಿಸುತ್ತಾರೆ. ಎಲೆಮರೆ ಕಾಯಿಯಂತಿರುವ ವಿಶೇಷ ವ್ಯಕ್ತಿಗಳನ್ನು ಗುರುತಿಸುತ್ತಾರೆ. ಮನ್ ಕಿ ಬಾತ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಆದರ್ಶನರು, ಮಾರ್ಗದರ್ಶಕರಿಗೆ ಮೆಚ್ಚುಗೆ ಸೂಚಿಸಿ ದೇಶದ ಜನತೆಯನ್ನು ಹುರಿದುಂಬಿಸುತ್ತಾರೆ. ಆದರೆ ಈ ಬಾರಿ ಮೋದಿ ಕೆಂಟೆಂಟ್ ಕ್ರಿಯೇಟರ್ ಮಾಡಿದ ರೀಲ್ಸ್ ಒಂದಕ್ಕೆ ಪ್ರತಕ್ರಿಯಿಸಿದ್ದಾರೆ. ಇದು ಭಾರಿ ಸದ್ದು ಮಾಡುತ್ತಿದೆ. ನನ್ನ ತಂದೆ ನಮ್ಮ ಯಾರ ಮಾತನ್ನು ಕೇಳುತ್ತಿಲ್ಲ. ನೀವೇ ಅವರಿಗೆ ಸ್ವಲ್ಪ ಬುದ್ದಿ ಹೇಳಿ ಎಂದು ಕ್ರಿಯೇಟರ್ ಪ್ರಧಾನಿ ಮೋದಿಗೆ ರೀಲ್ಸ್ ಮೂಲಕ ಮನವಿ ಮಾಡಿದ್ದಾರೆ. ವಿಶೇಷ ಅಂದರೆ ಮೋದಿ ಈ ರೀಲ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲ ಕೆಂಟೆಂಟ್ ಕ್ರಿಯೇಟರ್ ತಂದೆಗೆ ಸಂದೇಶ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಕಂಟೆಂಟ್ ಕ್ರಿಯೇಟರ್ ಯುವರಾಜ್ ದುವಾ ರೀಲ್ಸ್ ಸೇರಿದಂತೆ ವಿಡಿಯೋ ಮೂಲಕ ಸಕ್ರಿಯರಾಗಿದ್ದಾರೆ. ಯುವರಾಜ್ ದುವಾ ತಂದೆ ಪ್ರಧಾನಿ ಮೋದಿಯ ಅತೀ ದೊಡ್ಡ ಅಭಿಮಾನಿ. ಮೋದಿ ಭಾಷಣ, ಮೋದಿಯ ಮಾತು ಎಲ್ಲವನ್ನೂ ತಪ್ಪದೇ ಕೇಳುತ್ತಾರೆ. ಕುಟುಂಬದ ಯಾವುದೇ ಕಾರ್ಯ್ರಮ ಇರಲಿ, ಮದುವೆ ಇರಲಿ, ಪ್ರಧಾನಿ ಮೋದಿ ಕುರಿತು ಮಾತನಾಡಿದರೆ ಮಾತ್ರ ಅವರಿಗೆ ಊಟ ಸೇರುತ್ತೆ. ನಮ್ಮ ಕುಟುಂಬದಲ್ಲಿ ತಂದೆಗೆ ಅತ್ಯಂತ ಪ್ರೀತಿಯ ವ್ಯಕ್ತಿ ಮೋದಿ. ಮೋದಿ ನಂತರವೇ ನಾವೆಲ್ಲ ಎಂದು ರೀಲ್ಸ್‌ನಲ್ಲಿ ಯುವರಾಜ್ ಹೇಳಿದ್ದಾರೆ. ನಮ್ಮ ಮಾತನ್ನು ತಂದೆ ಕೇಳುವುದಿಲ್ಲ. ನಾನು ಈ ಮೂಲಕ ಪ್ರಧಾನಿ ಮೋದಿಯಲ್ಲಿ ಒಂದು ಮನವಿ ಮಾಡುತ್ತೇನೆ. ನೀವು ಹೇಳಿದರೆ ನಮ್ಮ ತಂದೆ ಕೇಳುತ್ತಾರೆ. ಅವರ ಶುಗರ್ ಸಮಸ್ಯೆ ಕಡಿಮೆ ಮಾಡಲು ತಿಳಿಹೇಳಿ. ಅವರು ಆಹಾರದಲ್ಲಿ ಶಿಸ್ತು ಪಾಲಿಸುತ್ತಿಲ್ಲ. ದಯವಿಟ್ಟು ಮುಂದಿನ ಬಾರಿ ಮನ್ ಕಿ ಬಾತ್‌ನಲ್ಲಿ ಆರೋಗ್ಯದ ಕುರಿತು ಸ್ವಲ್ಪ ಹೇಳಿ ಎಂದು ಯುವರಾಜ್ ದುವಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಪ್ರತಿಕ್ರಿಯೆ ಏನು

ಯುವರಾಜ್ ಮನವಿಯಂತೆ ನಾನು ಆವರ ತಂದೆ ಬಳಿ ಆಗ್ರಹ ಮಾಡುತ್ತೇನೆ ( ಜೊತೆಗೆ ಎಲ್ಲರಿಗೂ) ಶುಗರ್ ಲೆವೆಲ್ ಕಡಿಮೆ ಮಾಡಿ ಆರೋಗ್ಯವಾಗಿರಿ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲ ಬಿಪಿ ಶುಗರ್ ಸಮಸ್ಯೆ ಎದುರಿಸುತ್ತಿರುವ ಎಲ್ಲರಿಗೂ ಮೋದಿ ಸಲಹೆ ನೀಡಿದ್ದಾರೆ. ನಿಮ್ಮ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಉತ್ತಮ ಆಹಾರ, ಸಮತೋಲಿತ ಆಹಾರ ಸೇವಿಸಿ. ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಯೋಗವನ್ನು ನಿಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಿ ಎಂದು ಮೋದಿ ಸಲಹೆ ನೀಡಿದ್ದಾರೆ.

ಕಂಟೆಂಟ್ ಕ್ರಿಯೇಟರ್ ಮಾಡಿದ ರೀಲ್ಸ್ ಒಂದು ವೈರಲ್ ಆಗಿ ಪ್ರಧಾನಿ ಮೋದಿವೆರೆಗೂ ತಲುಪಿದೆ. ಸೋಶಿಯಲ್ ಮೀಡಿಯಾದಲ್ಲಿ ಮೋದಿ ಉದ್ದೇಶಿಸಿ, ಮೋದಿ ಹೊಗಳಿ, ಟೀಕಿಸಿ ಸೇರಿದಂತೆ ಹಲವು ರೀಲ್ಸ್ ಹಾಗೂ ವಿಡಿಯೋಗಳು ಹರಿದಾಡುತ್ತದೆ. ಆದರೆ ಈ ರೀಲ್ಸ್‌ಗೆ ಮೋದಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಯುವಜನತೆಯ ರೀಲ್ಸ್ ಜೊತೆಗೂ ಕನೆಕ್ಟ್ ಆಗಿದ್ದು ಮಾತ್ರವಲ್ಲ, ಈ ಮೂಲಕ ಆರೋಗ್ಯದ ಸಂದೇಶವನ್ನು ನೀಡಿದ್ದಾರೆ.

View post on Instagram