Asianet Suvarna News Asianet Suvarna News

ರಾಕ್ಷಸ ಮಹಿಷನಿಗೆ ರಾಷ್ಟ್ರಪಿತನ ಹೋಲಿಕೆ: ಕೋಲ್ಕತಾ ದುರ್ಗಾ ಪೆಂಡಾಲ್‌ನಲ್ಲಿ ಕೃತ್ಯ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ದುರ್ಗಾ ಪೂಜೆ ಪೆಂಡಾಲ್‌ವೊಂದರಲ್ಲಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ರಾಕ್ಷಸ ಮಹಿಷಾಸುರನಿಗೆ ಹೋಲಿಸುವ ರೀತಿಯಲಿ ಬಿಂಬಿಸಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

father of the nation Mahatma Gandhi compared to demons Mahisha in kolkata durga pendal akb
Author
First Published Oct 3, 2022, 8:37 AM IST

ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ದುರ್ಗಾ ಪೂಜೆ ಪೆಂಡಾಲ್‌ವೊಂದರಲ್ಲಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ರಾಕ್ಷಸ ಮಹಿಷಾಸುರನಿಗೆ ಹೋಲಿಸುವ ರೀತಿಯಲಿ ಬಿಂಬಿಸಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಇಲ್ಲಿನ ರೂಬಿ ಕ್ರಾಸಿಂಗ್‌ನಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ (Akhil Bharatiya Hindu Mahasabha) ದುರ್ಗಾ ಪೆಂಡಾಲ್‌(Durga pendal) ಹಾಕಿದೆ. ಇಲ್ಲಿ ದುರ್ಗೆಯ ಕಾಲಿನ ಬಳಿ ತ್ರಿಶೂಲದಿಂದ(Trishool) ಇರಿಯುತ್ತಿರುವ ಮಹಿಷಾಸುರನನ್ನು ಇರಿಸಲಾಗಿದ್ದು, ಈ ಮಹಿಷನನ್ನು(Mahisha)  ಗಾಂಧಿಗೆ ಹೋಲಿಸುವಂತೆ ಚಿತ್ರಿಸಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. 

ನವರಾತ್ರಿ ವಿಷಯಕ್ಕೆ ಗುಜರಾತಿಗಳು ಪ್ರತಿಭಟನೆ ಮಾಡ್ಬೋದು; ಆನಂದ್ ಮಹೀಂದ್ರಾ ಹೀಗಂದಿದ್ದೇಕೆ?!

ಇದಾದ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಾಂಧೀಜಿಯನ್ನು ಹೋಲುವ ಮೂರ್ತಿ ತೆಗೆಯುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರ ಸೂಚನೆ ಬಳಿಕ ಮೂರ್ತಿ ಮುಖಕ್ಕೆ ಮೀಸೆ, ತಲೆಗೆ ಕೂದಲು ಅಂಟಿಸಿ ರೂಪವನ್ನು ಬದಲಾಯಿಸಲಾಗಿದೆ. ಈ ಬೆಳವಣಿಗೆಯನ್ನು ಬಿಜೆಪಿ ಮತ್ತು ಟಿಎಂಸಿ ನಾಯಕರು ಖಂಡಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಮಹಾಸಭಾದ ಕಾರ್ಯಕರ್ತರು, ಈ ಬಾರಿ ಅಪರೂಪಕ್ಕೆ ಗಾಂಧೀ ಜಯಂತಿಯಂದೇ (Gandhi Birth Anniversary) ದುರ್ಗಾ ಪೂಜೆ ಬಂದಿದೆ. ಹೀಗಾಗಿ ಗಾಂಧೀ ಪ್ರತಿಮೆಯನ್ನು ಸ್ಥಾಪಿಸಲು ನಾವು ಮೊದಲೇ ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.
Navratri 2022 : ದುರ್ಗೆ ಪೂಜೆ ಜೊತೆ ಮನೆ ಮಹಿಳೆ ಮೇಲಿರಲಿ ವಿಶೇಷ ಪ್ರೀತಿ

Follow Us:
Download App:
  • android
  • ios